ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ ’11’ಕ್ಕೆ ತಯಾರಿ ಶುರುವಾಗಿದೆ. ಈ ಸೀಸನ್ನಲ್ಲಿ ಯಾರೆಲ್ಲ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬ ಕೆಲವೊಂದು ಹೆಸರು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೆಲ್ಲದರ ನಡುವೆಯೇ ಈ ಸಲದ ಬಿಗ್ಬಾಸ್ನಲ್ಲಿ ಸುದೀಪ್ ಇರ್ತಾರಾ ಇಲ್ವಾ ಎಂಬ ಚರ್ಚೆಯೂ ನಡೆದಿತ್ತು. ಬೇರೆ ಬೇರೆ ಭಾಷೆಗಳಲ್ಲಿ ನಿರೂಪಕರು ಬದಲಾಗಿದ್ದರು. ಕನ್ನಡದ ಬಿಗ್ಬಾಸ್ನಲ್ಲಿಯೂ ಅಂತ ಬೆಳವಣಿಗೆ ಆಗಬಹುದು ಎಂದೇ ಹೇಳುತ್ತಿದ್ದರು.
ಈ ಬಾರಿ ಸುದೀಪ್ ಬದಲಿಗೆ ಬೇರೆ ಯಾರು ನಿರೂಪಣೆ ಮಾಡಲಿದ್ದಾರೆ ಎಂಬ ಪ್ರಶ್ನೆಗಳು ಮೂಡಿದಾಗ, ರಮೇಶ್ ಅರವಿಂದ್, ರಿಷಬ್ ಶೆಟ್ಟಿ ಹೆಸರುಗಳು ಕೇಳಿ ಬಂದಿದ್ದವು. ಆದರೆ ಇದೀಗ ಬಿಗ್ಬಾಸ್ ಕನ್ನಡ ಸೀಸನ್ 11ರ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದ್ದು, ಈ ಮೂಲಕ ಈ ಬಾರಿಯೂ ಕಿಚ್ಚನ ನಿರೂಪಣೆಯಲ್ಲಿಯೇ ಬಿಗ್ ಬಾಸ್ ಮುನ್ನಡೆಯಲಿದೆ ಎಂಬುದು ಸ್ಪಷ್ಟವಾಗಿದೆ.
ಹೌದು, ಇದೀಗ ಸದ್ದಿಲ್ಲದೆ ಹೈದರಾಬಾದ್ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ -11ರ ಮೊದಲ ಪ್ರೋಮೊ ಶೂಟ್ ಆಗಿದ್ದು, ಒಂದು ಫೋಟೋದಲ್ಲಿ ಕ್ಯಾಮಾರಾ ವರ್ಕ್ ಫೋಟೋ ಇದೆ. ಕಿಚ್ಚ ಚಾಕೆಟ್ ಹಾಕಿ ಚಯರ್ ಮೇಲೆ ಕುಳಿತಿರುವುದು ಕ್ಯಾಮರಾದಲ್ಲಿ ಕಾಣಿಸುತ್ತಿದೆ. ಮತ್ತೊಂದು ಫೋಟೋದಲ್ಲಿ ಕಿಚ್ಚ ಚಾಕೆಟ್ ಹಾಕಿಕೊಂಡು ನಡೆದಾಡುತ್ತಿರುವ ಫೋಟೋ ಇದ್ದು, ಆ ಮೂಲಕ ಹಬ್ಬಿದ್ದ ವದಂತಿಗಳಿಗೆ ಬ್ರೇಕ್ ಬಿದ್ದಿದೆ.
ಸದ್ಯದ ಕೆಲ ಮೂಲಗಳ ಮಾಹಿತಿ ಪ್ರಕಾರ, ಈಗಾಗಲೇ ಸೀಸನ್ 11ರ ಪ್ರೋಮೋ ಶೂಟಿಂಗ್ ಮುಗಿಸಿಕೊಂಡಿರುವ ಕಲರ್ಸ್ ಕನ್ನಡ, ಸದ್ಯ ಅದರ ಎಡಿಟಿಂಗ್ ಕೆಲಸದಲ್ಲಿ ಬಿಜಿಯಾಗಿದೆ. ಕಳೆದ ಬಾರಿಗಿಂತ ಹೊಸದನ್ನೇ ನೋಡುಗನಿಗೆ ನೀಡಲು ಮುಂದಾಗಿರುವ ವಾಹಿನಿ, ಆ ನಿರೀಕ್ಷೆ ಮಟ್ಟವನ್ನು ಫುಲ್ಫಿಲ್ ಮಾಡುವ ಉಮೇದಿನಲ್ಲಿದೆ.
ಅದರಂತೆ ಸೆಪ್ಟಂಬರ್ ಮೊದಲ ವಾರದಲ್ಲಿ ಅಥವಾ ಎರಡನೇ ವಾರದಲ್ಲಿ ಬಿಗ್ಬಾಸ್ ಕನ್ನಡ ಸೀಸನ್ 11ರ ಮೊದಲ ಪ್ರೋಮೋ ಬಿಡುಗಡೆ ಆಗಲಿದೆ. ಅದಾದ ಮೇಲೆ ಅಂದರೆ, ಅಕ್ಟೋಬರ್ ಮೂರನೇ ವಾರದಲ್ಲಿ ಶೋ ಶುರುವಾಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಹೈಕೋರ್ಟ್ಗೆ ರಿಟ್ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ..!