Download Our App

Follow us

Home » ರಾಜಕೀಯ » ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಹೈಕೋರ್ಟ್​ಗೆ ರಿಟ್ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ..!

ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಹೈಕೋರ್ಟ್​ಗೆ ರಿಟ್ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ..!

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರ ಈ ಕ್ರಮವನ್ನು ಪ್ರಶ್ನಿಸಿ ಸಿಎಂ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಪಾಲರು ನೀಡಿರುವ ಅನುಮತಿ ರದ್ದು ಮಾಡಿ ಎಂದು ಸಿಎಂ ಹೈಕೋರ್ಟ್​ ಮೊರೆ ಹೋಗಿದ್ದಾರೆ.

ಇಂದು ಮಧ್ಯಾಹ್ನ 2.30ಕ್ಕೆ ಹೈಕೋರ್ಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನಿರ್ಧಾರವಾಗಲಿದೆ. ಸಿದ್ದರಾಮಯ್ಯ ಪರ ವಕೀಲ ಶತಾಬಿಶ್ ಶಿವಣ್ಣ ಎಂಬುವವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಮಧ್ಯಾಹ್ನ 2.30ಕ್ಕೆ ನ್ಯಾಯಮೂರ್ತಿ ಹೇಮಂತ್​​​​​ ಚಂದನ್​ಗೌಡರ್​ ಪೀಠದಲ್ಲಿ ವಿಚಾರಣೆ ನಡೆಯಲಿದೆ.

ರಾಜ್ಯಪಾಲರು ಅನುಮತಿ ನೀಡುವ ಮುನ್ನ ಕಾನೂನಿನ ಪ್ರಕ್ರಿಯೆ ಪಾಲಿಸಿಲ್ಲ, ಸಚಿವ ಸಂಪುಟದ ಶಿಫಾರಸಿಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ. ಸಂವಿಧಾನದ 163ನೇ ವಿಧಿಯಂತೆ ಕ್ಯಾಬಿನೆಟ್​ ಶಿಫಾರಸು ಪಾಲಿಸಬೇಕು, ಅನುಮತಿಗೆ ಮುನ್ನ ದಾಖಲೆಗಳನ್ನು ಪರಿಶೀಲನೆ ಮಾಡಿಲ್ಲ, ಇಂದೇ ತುರ್ತು ವಿಚಾರಣೆಗೆ ಸಿಎಂ ಪರ ವಕೀಲರು ಮನವಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಲಿದ್ದಾರೆ. ಈಗಾಗಲೇ ಸುಪ್ರೀ ಕೋರ್ಟ್​ನ ಹಿರಿಯ​ ವಕೀಲರು ಕಪಿಲ್​ ಸಿಬಲ್​​​, ಅಭಿಷೇಕ್​ ಮನು ಸಿಂಘ್ವಿ, ಪ್ರಶಾಂತ್​ ಭೂಷಣ್​ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ಮೂವರು ಹಿರಿಯ ವಕೀಲರು ಕಾನೂನು ಸಲಹೆ ನೀಡಲಿದ್ದಾರೆ.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಿಸಿ – ಬಿಜೆಪಿ ಮುಖಂಡ ಎನ್​​.ಆರ್​​ ರಮೇಶ್ ಲೋಕಾಯುಕ್ತಕ್ಕೆ ಮನವಿ..!

Leave a Comment

DG Ad

RELATED LATEST NEWS

Top Headlines

ವೇದಿಕೆಯಲ್ಲಿ ಕಣ್ಣೀರಿಟ್ಟ ಸಮಂತಾರನ್ನು ಅಪ್ಪಿಕೊಂಡು ಸಮಾಧಾನಿಸಿದ ಆಲಿಯಾ..!

ಹೈದರಾಬಾದ್ : ಬಾಲಿವುಡ್​ ನಟಿ ಆಲಿಯಾ ಭಟ್ ಹಾಗೂ ಸಮಂತಾ ರುತ್ ಪ್ರಭು ಹೈದರಾಬಾದ್​ನಲ್ಲಿ ನಿನ್ನೆ ನಡೆದ ಜಿಗ್ರಾ ಸಿನಿಮಾದ ಗ್ರ್ಯಾಂಡ್ ಪ್ರಿ ರಿಲೀಸ್ ಇವೆಂಟ್​ನಲ್ಲಿ ಒಟ್ಟಿಗೆ

Live Cricket

Add Your Heading Text Here