ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ಇನ್ನು 3 ವಾರಗಳಷ್ಟೇ ಬಾಕಿ. 3 ವಾರದಲ್ಲೇ ಫೈನಲ್ ತಲುಪೋ ಸ್ಪರ್ಧಿಗಳು ಯಾರು? ಕಪ್ ಗೆಲ್ಲೋದು ಯಾರು ಅನ್ನೋ ರೋಚಕ ಹಣಾಹಣಿ ನಡೆಯುತ್ತೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. 9 ಸ್ಪರ್ಧಿಗಳಲ್ಲೇ ಯಾರಿಗೆ ಟಿಕೆಟ್ ಟು ಫಿನಾಲೆ ಅನ್ನೋದು ಕುತೂಹಲ ಕೆರಳಿಸಿದೆ. ಈಗಾಗಲೇ ಸುದೀಪ್ ಅವರು ವೀಕೆಂಡ್‌ನಲ್ಲಿ ಇಬ್ಬ ಸ್ಪರ್ಧಿ ನೇರವಾಗಿ ಫಿನಾಲೆಗೆ ಹೋಗುತ್ತಾರೆ. ಟಿಕೆಟು ಟು ಫಿನಾಲೆ ಅನೌನ್ಸ್ ಆಗುತ್ತದೆ, ಟಾಸ್ಕ್‌ಗಳು ಟಫ್ ಆಗುತ್ತ ಹೋಗುತ್ತೆ ಎಂದು ಹೇಳಿದ್ದರು.
ಇದೀಗ ಓರ್ವ ಸ್ಪರ್ಧಿಯ ಹೆಸರು ಹೊರಬಿದ್ದಿದೆ. ಆದರೆ ಕನ್ನಡದಲ್ಲಿ ಅಲ್ಲ. ಬಿಗ್ ಬಾಸ್ ತಮಿಳು ಸೀಸನ್ 8ರಲ್ಲಿ ಪ್ರಬಲ ಸ್ಪರ್ಧಿ ಟಿಕೆಟ್ ಟು ಫಿನಾಲೆ ತೆಗೆದುಕೊಂಡಿದ್ದಾರೆ. ಫಿನಾಲೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ಮೊದಲ ಸ್ಪರ್ಧಿಯಾಗಿ ರಾಯನ್ ಹೊರಹೊಮ್ಮಿದ್ದಾರೆ.
ತಮ್ಮ ನಟನಾ ಪ್ರತಿಭೆ ಮೂಲಕ ವೀಕ್ಷಕರ ಮನಗೆದ್ದಿರುವ ರಾಯನ್, ನೇರವಾಗಿ ಫಿನಾಲೆಗೆ ಆಯ್ಕೆ ಆದರು. ಬಿಗ್ ಬಾಸ್ ತಮಿಳು 8 ಶೀರ್ಷಿಕೆಯ ಅಂತಿಮ ರೇಸ್‌ನಲ್ಲಿ ರಾಯನ್‌ನೊಂದಿಗೆ ಉಳಿದ ಸ್ಪರ್ಧಿಗಳಲ್ಲಿ ಯಾರಿಗೆ ಟಿಕೆಟು ಫಿನಾಲೆ ಸಿಗುತ್ತೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ : ನಡುರಾತ್ರಿ ರಸ್ತೆಯಲ್ಲೇ ಕಂದಮ್ಮನ ಬಿಟ್ಟು ಹೋದ ಮಹಿಳೆ – ಮೈಕೊರೆವ ಚಳಿಗೆ ಮಗು ದುರಂತ ಅಂತ್ಯ..!