ಕನ್ನಡ ಬಿಗ್ಬಾಸ್ ಸೀಸನ್ 11 ಐದನೇ ವಾರಕ್ಕೆ ಕಾಲಿಡುತ್ತಿದೆ. ಕಳೆದ ವಾರ ಹಂಸ ಎಲಿಮಿನೇಟ್ ಆಗಿದ್ದು, ಈ ವಾರ ಮನೆಯಿಂದ ಹೊರಹೋಗಲು ಗೌತಮಿ ಮತ್ತು ತ್ರಿವಿಕ್ರಮ್ ಬಿಟ್ಟು ಎಲ್ಲರೂ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಹನುಮಂತ ಆಯ್ಕೆಯ ಅನುಸಾರ ಗೋಲ್ಡ್ ಸುರೇಶ್ ಅವರು ನೇರ ನಾಮಿನೇಟ್ ಆಗಿದ್ದಾರೆ.
ಸುದೀಪ್ ಅವರು ಕಮ್ ಬ್ಯಾಕ್ ಆಗುತ್ತಿದ್ದಂತೆ ಮನೆಯವರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾರಿನಲ್ಲಿ ಡ್ರೈವ್ ಹೋದ ಮೋಕ್ಷಿತಾ ಅವರೇ ಬೇರೆ, ವಾಪಸ್ ಬಂದಿರೋ ಮೋಕ್ಷಿತಾ ಅವರೇ ಬೇರೆ. ಏನ್ ಹೇಳಿದ್ರು ಆ ಡ್ರೈವರ್ ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಮೋಕ್ಷಿತಾ ಉತ್ತರ ನೀಡಿ ವಾರದಿಂದ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೆ. ಮನಸಿನ ಮಾತು ಅವಾಗ ಹೊರಗೆ ಬಂತು ಎಂದಿದ್ದಾರೆ.
ಒಂದು ವಾರ ಯಾಕೆ ಸೈಲೆಂಟ್ ಇದ್ರಿ ಎಂದು ಸುದೀಪ್ ಕೇಳಿದಾಗ ಮಂಜಣ್ಣ ಅವರು ಕೇಳುವುದು ಬೇಡ ಎನ್ನುವ ರೀತಿಯಲ್ಲಿ ಹೇಳಿದ್ದರು ಎಂದು ಮೋಕ್ಷಿತಾ ಹೇಳಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಮಾತನಾಡಿ, ಮಂಜಣ್ಣ ಅವರು ನಿಮ್ಮ ಮೌತ್ ಪೀಸ್ ಅಲ್ಲ. ಯುದ್ಧ ನಿಮ್ಮದು. ಮಂಜು, ಸ್ನೇಹಿತರಿಗೆ ನೀವು ಅಡ್ವೈಸ್ ಮಾಡುವಾಗ ಕೇಳಬೇಡ ಅಂತ ಯಾವುತ್ತು ಹೇಳಬೇಡಿ. ಕೇಳಿ ನಾನು ಇದ್ದಿನಿ ಅನ್ನಿ ಎಂದಿದ್ದಾರೆ.
ಈ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಹಳೇ ಖದರ್ಗೆ ಮರಳಿರೋದು ಬಿಗ್ ಬಾಸ್ ಅಭಿಮಾನಿಗಳಿಗೆ ಖುಷಿ ತಂದಿದೆ. ಉಗ್ರಂ ಮಂಜು, ಮೋಕ್ಷಿತಾ ಅವರಿಗೆ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡಿದ್ದು, ಬಿಗ್ ಬಾಸ್ ಮನೆಯವರ ಉಳಿದವರು ಕಕ್ಕಾಬಿಕ್ಕಿ ಆಗಿದ್ದಾರೆ.
ಇದನ್ನೂ ಓದಿ : ವಿಜಯಪುರ : ಬಸ್ ಸೀಟ್ಗಾಗಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು – ವಿಡಿಯೋ ವೈರಲ್..!