ವಿಜಯಪುರ : ಬಸ್ ಸೀಟ್ಗಾಗಿ ಮಹಿಳೆಯರು ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿ ಗಲಾಟೆ ಮಾಡಿಕೊಂಡ ಬಳಿಕ ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ.
ಜಿಲ್ಲೆಯ ಸಿಂದಗಿ ಮಾರ್ಗದಲ್ಲಿ ಸಂಚರಿಸುವ ಬಸ್ ನಲ್ಲಿಯೇ ಮಹಿಳೆಯರಿಬ್ಬರು ಹೊಡೆದಾಡಿಕೊಂಡಿದ್ದು, ಈ ಗಲಾಟೆ ಬಿಡಿಸಲು ಸಹ ಪ್ರಯಾಣಿಕರು ಹರಸಾಹಸ ಪಟ್ಟಿದ್ದಾರೆ. ಗಲಾಟೆ ಜೋರಾಗುತ್ತಿದಂತೇಯೆ ಚಾಲಕ ಕೆಲಕಾಲ ಬಸ್ ನಿಲ್ಲಿಸಿದ್ರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಅಮ್ಮನ ಅಗಲಿಕೆಯ ದುಃಖದಲ್ಲಿರುವ ಸುದೀಪ್ – ಬಿಗ್ಬಾಸ್ ವೇದಿಕೆಯಲ್ಲೇ ಕಣ್ಣೀರಿಟ್ಟ ಕಿಚ್ಚ..!
Post Views: 394