Download Our App

Follow us

Home » ಸಿನಿಮಾ » ಬಿಗ್​ಬಾಸ್​ಗೆ ಗುಡ್​ ಬೈ ಹೇಳಿದ ಕಿಚ್ಚ ಸುದೀಪ್​​.. ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು?

ಬಿಗ್​ಬಾಸ್​ಗೆ ಗುಡ್​ ಬೈ ಹೇಳಿದ ಕಿಚ್ಚ ಸುದೀಪ್​​.. ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು?

ಕಿಚ್ಚ ಸುದೀಪ್​ ಅವರು ‘ಬಿಗ್​ ಬಾಸ್​ ಕನ್ನಡ’ ಕಾರ್ಯಕ್ರಮದ ನಿರೂಪಕನ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಾರೆ. ಹೌದು.. ಇಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಅವರು ಈಗ ಶೋ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರಸ್ತುತ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ನಡೆಸಿಕೊಡುತ್ತಿದ್ದಾರೆ. ಆದರೆ ಮುಂದಿನ ಸೀಸನ್​ಗೆ ತಾವು ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಅಧಿಕೃತವಾಗಿಯೇ ಈ ನಿರ್ಧಾರ ತಿಳಿಸಿದ್ದಾರೆ. ಅವರ ಈ ಪೋಸ್ಟ್ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ.

ಸುದೀಪ್ ಹೇಳಿದ್ದೇನು? BBK11ಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ನೀವೆಲ್ಲರೂ ನನಗೆ ಮತ್ತು ಕಾರ್ಯಕ್ರಮಕ್ಕೆ ತೋರಿದ ಪ್ರೀತಿಯ ಬಗ್ಗೆ ಟಿವಿಆರ್ (ಸಂಖ್ಯೆ)ಯಲ್ಲಿ ಕಾಣುತ್ತಿದೆ. ಈ 10 ಪ್ಲಸ್​ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಉತ್ತಮವಾಗಿತ್ತು. ನಾನು ಈಗ ಬೇರೆ ಕಡೆಗೆ ನನ್ನ ನಡೆಯನ್ನು ಮುಂದುವರಿಸಲು ಇದು ಸಮಯವಾಗಿದೆ. ಇದು BBKಗೆ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ ಮತ್ತು ನನ್ನ ನಿರ್ಧಾರವನ್ನು ನನ್ನ ಕಲರ್ಸ್ ಮತ್ತು ಇಷ್ಟು ವರ್ಷಗಳಿಂದ ಬಿಗ್‌ಬಾಸ್ ​​ಅನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಕೂಡ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು, ಲವ್ ಮತ್ತು ಹಗ್‌ ಎಂದು ಟ್ವೀಟ್‌ ನಲ್ಲಿ ಸುದೀಪ್ ಬರೆದುಕೊಂಡಿದ್ದಾರೆ.

ಇನ್ನು 11ನೇ ಸೀಸನ್​ ಆರಂಭದಲ್ಲೇ ಸುದೀಪ್ ಅವರು ಈ ಬಾರಿ ಬಿಗ್​ ಬಾಸ್​ ನಿರೂಪಣೆ ಮಾಡುವುದು ಅನುಮಾನ ಎಂಬ ವಿಷಯ ಕೇಳಿಬಂದಿತ್ತು. ಆದರೆ ಶೋ ಆಯೋಜಕರು ಸುದೀಪ್​ ಅವರ ಮನ ಒಲಿಸಿದ್ದರಿಂದ ಅವರು ಮುಂದುವರಿದರು. ಆದರೆ ಇದು ಅವರ ಕೊನೆಯ ಸೀಸನ್​ ಆಗುತ್ತಿದೆ. ‘ನೀವು ಇಲ್ಲದೇ ಬಿಗ್ ಬಾಸ್​ ಕಾರ್ಯಕ್ರಮವನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ’ ಎಂದು ಅನೇಕರು ಕಮೆಂಟ್​ ಮಾಡುತ್ತಿದ್ದಾರೆ. ‘ಇದು ಸರಿಯಾದ ನಿರ್ಧಾರ’ ಎಂದು ಕೂಡ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆಲವರು ಗೋಲ್ಡನ್ ಇರಾ ಎಂಡ್‌ ಆಯ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ : ನರಕದ ವಿವಾದ – ಮಹಿಳಾ ಆಯೋಗದ ಆರೋಪಕ್ಕೆ ಬಿಗ್ ಬಾಸ್ ಸ್ಪರ್ಧಿಗಳಿಂದಲೇ ಉತ್ತರ ಕೊಡಿಸಿದ ಕಿಚ್ಚ ಸುದೀಪ್..!

Leave a Comment

DG Ad

RELATED LATEST NEWS

Top Headlines

ಬಸ್​ನಲ್ಲಿ ಸಿಕ್ತು ಚಿನ್ನಾಭರಣದ ಬ್ಯಾಗ್ – ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ವಿಜಯನಗರ ನಿವಾಸಿ ರಾಘವೇಂದ್ರ

ವಿಜಯನಗರ : ಬಸ್​ನಲ್ಲಿ ಸಿಕ್ಕ ಲಕ್ಷ-ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರಿಗೆ ಒಪ್ಪಿಸಿ ವಿಜಯನಗರ ಜಿಲ್ಲೆಯ ರಾಘವೇಂದ್ರ ಎಂಬುವವರು ಪ್ರಾಮಾಣಿಕತೆ ಮೆರೆದಿದ್ದಾರೆ. ಹೊಸಪೇಟೆ ತಾಲೂಕಿನ ಮಲಪನಗುಡಿಯ ರಾಘವೇಂದ್ರ ಅವರು

Live Cricket

Add Your Heading Text Here