ಬಿಗ್ ಬಾಸ್ ಮನೆಯ ಸ್ವರ್ಗ, ನರಕದ ಆಟ ಒಂದು ವಿವಾದಕ್ಕೆ ಕಾರಣವಾಗಿತ್ತು. ನರಕದಲ್ಲಿ ಇದ್ದ ಮಹಿಳಾ ಸ್ಪರ್ಧಿಗಳಿಗೆ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಕೆಲವು ಬೇಸಿಕ್ ಸೌಕರ್ಯಗಳನ್ನು ನೀಡಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ, ಈ ಬಗ್ಗೆ ಮಹಿಳಾ ಆಯೋಗಕ್ಕೂ ದೂರು ನೀಡಲಾಗಿತ್ತು.
ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಕೇಳಿಬಂದ ಈ ಆರೋಪದ ಬಗ್ಗೆ ಇದೀಗ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ಮಹಿಳಾ ಸ್ಪರ್ಧಿಗಳಿಂದಲೂ ಅವರು ಉತ್ತರ ಕೊಡಿಸಿದ್ದಾರೆ.
ಸೂಪರ್ ಸಂಡೇ ವಿತ್ ಸುದೀಪ ಸಂಚಿಕೆಯನ್ನು ಆರಂಭಿಸುವಾಗಲೇ ಸುದೀಪ್ ಅವರು ಒಂದು ಪ್ರಶ್ನೆ ಕೇಳಿದರು. ‘ನರಕದಲ್ಲಿ ಇದ್ದಾಗ ಎಷ್ಟು ಖುಷಿ ಇತ್ತು? ಇದು ತುಂಬ ಮುಖ್ಯವಾದ ಪ್ರಶ್ನೆ. ಮಹಿಳಾ ಆಯೋಗದವರು ಆರೋಪ ಮಾಡಿದ್ದಾರೆ. ಅನ್ಯಾಯ, ಅನಾನುಕೂಲ ಆಗಿದೆ ಅಂತ ಹೇಳಿದ್ದಾರೆ. ಈ ಬಗ್ಗೆ ಉತ್ತರ ನೀವು ನೀಡಿ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಬಿಗ್ ಬಾಸ್ ಮನೆಗೆ ಕಾಲಿಟ್ಟ ಮಹಿಳಾ ಸ್ಪರ್ಧಿಗಳ ಪೈಕಿ ಚೈತ್ರಾ ಕುಂದಾಪುರ, ಮಾಸನಾ, ಮೋಕ್ಷಿತಾ ಪೈ, ಅನುಷಾ ರೈ, ಐಶ್ವರ್ಯಾ ಸಿಂಧೋಗಿ ಅವರು ನರಕವಾಸ ಅನುಭವಿಸಿದ್ದರು. ಅವರೆಲ್ಲ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ‘ಊಟದ್ದು ಬಿಟ್ಟರೆ ಬೇರೆ ಏನೂ ಸಮಸ್ಯೆ ಇರಲಿಲ್ಲ’ ಎಂದು ಮಾನಸಾ ಹೇಳಿದರು. ‘ದೊಡ್ಡ ಸಮಸ್ಯೆ ಏನೂ ಇರಲಿಲ್ಲ’ ಎಂದು ಚೈತ್ರಾ, ಮೋಕ್ಷಿತಾ, ಅನುಷಾ ಹೇಳಿದರು.