ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ ಈ ವಾರ ದೊಡ್ಮನೆ ರೆಸಾರ್ಟ್ ಆಗಿ ಬದಲಾಗಿದೆ. ಮನೆಯಲ್ಲಿ ಎರಡು ತಂಡವಾಗಿ ವಿಂಗಡಣೆಯಾಗಿದ್ದು, ಒಂದು ತಂಡದಲ್ಲಿ ಚೈತ್ರಾ ಕುಂದಾಪುರ, ಐಶ್ವರ್ಯಾ, ಮಂಜು, ಗೌತಮಿ, ಹನುಮಂತ ಒಂದು ಟೀಮ್ನಲ್ಲಿದ್ದಾರೆ. ಮತ್ತೊಂದು ಟೀಮ್ನಲ್ಲಿ ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್, ರಜತ್ ಹಾಗೂ ಮೋಕ್ಷಿತಾ ಇದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ತ್ರಿವಿಕ್ರಮ್ ತಂಡದವರು ಬಿಗ್ಬಾಸ್ ರೆಸಾರ್ಟ್ನಲ್ಲಿ ಕೆಲಸ ಮಾಡುವವರಾಗಿದ್ದರು.
ಅಲ್ಲದೇ ಮಂಜು ಟೀಮ್ ರೆಸಾರ್ಟ್ಗೆ ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದರು. ಇದೇ ಕಾನ್ಸೆಪ್ಟ್ನಲ್ಲಿ ಮನೆ ಮಂದಿ ಭಾಗಿಯಾಗಿದ್ದಾರೆ. ನಿನ್ನೆ ಮಂಜು ತಂಡ ಬೇಕಾ ಬಿಟ್ಟಿಯಾಗಿ ರೆಸಾರ್ಟ್ ಕೆಲಸಗಾರರ ಮೇಲೆ ಅವಾಜ್ ಹಾಕುತ್ತಿದ್ದರು. ಚೈತ್ರಾ ಅಂತೂ ಸಿಕ್ಕಿದ್ದೇ ಚಾನ್ಸ್ ಅಂತ ರಜತ್ಗೆ ಕೆಲಸ ಕೊಟ್ಟಿದ್ದರು. ಇದೀಗ ಬಿಗ್ಬಾಸ್ ಮನೆಯಲ್ಲಿ ಆಟ ಬದಲಾಗಿದೆ.
ನಿನ್ನೆ ಆಳಾಗಿದ್ದವರು ಇಂದು ಅತಿಥಿಗಳಾಗಿದ್ದಾರೆ. ತ್ರಿವಿಕ್ರಮ್ ತಂಡ ತಮ್ಮ ಆಟವನ್ನು ಸ್ಟಾರ್ಟ್ ಮಾಡಿದ್ದಾರೆ. ಬೇಕು ಬೇಕು ಅಂತಾನೇ ಬಿಗ್ಬಾಸ್ ರೆಸಾರ್ಟ್ನಲ್ಲಿ ಕೆಲಸ ಮಾಡುವವರಿಗೆ ಹೆಚ್ಚಾಗಿ ಕೆಲಸ ಕೊಟ್ಟಿದ್ದಾರೆ. ರಜತ್ ಅಂತೂ ಸಿಕ್ಕಿದ್ದೇ ಸೀರುಂಡೆ ಚೈತ್ರಾ ಮೇಲೆ ರಿವೆಂಜ್ ತೀರಿಸಿಕೊಂಡಿದ್ದಾರೆ.
ಇದನ್ನೂ ಓದಿ : ಹಬ್ಬದ ದಿನದಂದೇ ಪ್ರೀತಿಯ ಮಗನನ್ನ ಕಳೆದುಕೊಂಡ ತ್ರಿಶಾ – ನಟಿಯ ಜೀವನವೇ ಮುಗಿದೋಯ್ತಾ?