Download Our App

Follow us

Home » ಸಿನಿಮಾ » ಬಿಗ್​ಬಾಸ್ ಮನೆಯೊಳಗೆ ಜಗಳ ಆಗ್ದೇ ಇರಲಿ – ದೇವರಲ್ಲಿ ವರ ಕೇಳಿದ ಹನುಮಂತ..!

ಬಿಗ್​ಬಾಸ್ ಮನೆಯೊಳಗೆ ಜಗಳ ಆಗ್ದೇ ಇರಲಿ – ದೇವರಲ್ಲಿ ವರ ಕೇಳಿದ ಹನುಮಂತ..!

ಬಿಗ್ ಬಾಸ್‌ ಮನೆಗೆ ಕಾಲಿಡುತ್ತಿದ್ದಂತೆಯೇ ಹನುಮಂತಗೆ ಕ್ಯಾಪ್ಟನ್ ಪಟ್ಟ ನೀಡಲಾಗಿತ್ತು. ಆರಂಭದಿಂದಲೂ ತನ್ನ ಮುಗ್ಧತೆಯಿಂದಲೇ ಎಲ್ಲರ ಗಮನಸೆಳೆದಿರುವ ಹನುಮಂತಗೆ ಇದೀಗ ಎರಡನೇ ಬಾರಿಗೆ ಕ್ಯಾಪ್ಟನ್ ಪಟ್ಟ ಒಲಿದುಬಂದಿದೆ. ಆ ಹಿನ್ನೆಲೆಯಲ್ಲಿ ದೇವರಿಗೆ ದೀಪ ಹಚ್ಚಿ ಹನುಮಂತ ಬೇಡಿಕೊಂಡಿದ್ದಾರೆ.

ದೊಡ್ಮನೆಯಲ್ಲಿರುವ ದೇವರ ಮೂರ್ತಿ ಬಳಿ ತಮ್ಮ ಸ್ನೇಹಿತ ಧನರಾಜ್ ಜೊತೆಗೆ ಬಂದ ಹನುಮಂತ, ಎಲ್ಲರಿಗೂ ಒಳ್ಳೇದು ಮಾಡವ್ವ. ಈ ಬಿಗ್ ಬಾಸ್ ಮನೆಯೊಳಗೆ ಒಟ್ಟ ಜಗಳ ಆಗ್ದೇ ಇರಲಿ. ನಾನು ಕ್ಯಾಪ್ಟನ್ ಇರೋ ತನಕ ಯಾವುದು ಜಗಳ ಆಗೋಕೆ ಬಿಡಬೇಡ. ಎಲ್ಲರನ್ನೂ ಶಾಂತಿ ರೀತಿಯಿಂದ ಇರಿಸು ಎಂದು ಬೇಡಿಕೊಂಡಿದ್ದಾರೆ.

ಇದರ ಮಧ್ಯೆ ಜೊತೆಗಿದ್ದ ಧನರಾಜ್ ಆಚಾರ್ ಅವರು, ಏನೇ ಸಮಸ್ಯೆ ಬಂದ್ರೂ ಎದುರಿಸುವಂತಹ ಧೈರ್ಯ ಕೊಡು ಎಂದು ಬೇಡಿಕೋ ಅಂತ ಸೂಚಿಸಿದರ. ಅದಕ್ಕೆ ಬಹಳ ಬುದ್ದಿವಂತಿಕೆಯಿಂದ ಉತ್ತರ ನೀಡಿದ ಹನುಮಂತ, ಹೇ ಹಂಗ್ ಬ್ಯಾಡ.. ಸಮಸ್ಯೆನೇ ಬರದೇ ಇರುವಂತೆ ಇಡವ್ವ.. ಅಷ್ಟೇ ಮತ್ತೇನಿಲ್ಲ. ನಿನ್ನ ಆಶೀರ್ವಾದ ಸ್ವಲ್ಪ ಜಾಸ್ತಿನೇ ಇರಲಿ ಎಂದು ಪ್ರಾರ್ಥಿಸಿಕೊಂಡರು.

ಬಿಗ್ ಬಾಸ್ ಮನೆಯಲ್ಲಿ ಹನುಮಂತ ಸಖತ್ ಆಗಿಯೇ ಆಡಿದ್ದಾರೆ. ಸೂಪರ್ ಆಟವನ್ನ ಆಡಿ ಕ್ಯಾಪ್ಟನ್ ಆಗಿದ್ದಾರೆ. ಇದನ್ನ ತ್ರಿವಿಕ್ರಮ್ ತುಂಬಾನೆ ಮೆಚ್ಚಿಕೊಂಡಿದ್ದಾರೆ. ಪ್ರಾಮಾಣಿಕವಾಗಿಯೇ ಹನುಮಂತ ಆಟ ಆಡಿದ್ದಾರೆ. ಈ ಮೂಲಕ ಕ್ಯಾಪ್ಟನ್ ಆಗಿದ್ದಾರೆ ಅಂತಲೂ ತ್ರಿವಿಕ್ರಮ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ರಾಮ ಮಂದಿರದಲ್ಲಿ ಅದ್ಧೂರಿ ದೀಪಾವಳಿ – ಮತ್ತೊಂದು ಗಿನ್ನಿಸ್ ದಾಖಲೆಗೆ ಸಜ್ಜಾದ ಅಯೋಧ್ಯೆ..!

Leave a Comment

DG Ad

RELATED LATEST NEWS

Top Headlines

ಲಂಚಕ್ಕೆ ಬೇಡಿಕೆ : ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ವೈಟ್ ಫಿಲ್ಡ್ ಠಾಣೆ PSI ಗಂಗಾಧರ್..!

ಬೆಂಗಳೂರು : ಕೇಸ್ ವೊಂದರ ಆರೋಪಿಯನ್ನ ಬಂಧಿಸಲು ಲಂಚಕ್ಕೆ ಬೇಡಿಕೆ ಇಟ್ಟ ವೈಟ್ ಫಿಲ್ಡ್ ಠಾಣೆ PSI ಗಂಗಾಧರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Live Cricket

Add Your Heading Text Here