ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ನಡುವೆ ಮೊದಲಿನಿಂದಲೂ ಒಂದು ಕಿಚ್ಚು ಇದ್ದೇ ಇದೆ. ತ್ರಿವಿಕ್ರಮ್ ಆಗಾಗ ಮೋಕ್ಷಿತಾ ಬಗ್ಗೆ ಮಾತಾಡ್ತಾನೆ ಇದ್ದರು. ನಾಮಿನೇಟ್ ಮಾಡೋ ವಿಚಾರದಲ್ಲೂ ತ್ರಿವಿಕ್ರಮ್ ಹೆಚ್ಚಾಗಿ ಮೋಕ್ಷಿತಾ ಪೈ ಹೆಸರು ಹೇಳ್ತಾ ಇದ್ದರು.
ಮೋಕ್ಷಿತಾ ಪೈ ನನ್ನ ಜೊತೆಗೆ ಮಾತಾಡಲ್ಲ. ಯಾರ ಜೊತೆಗೂ ಬೆರೆಯುತ್ತಲೇ ಇಲ್ಲ ಅನ್ನೋ ಅರ್ಥದಲ್ಲಿಯೇ ಹೇಳ್ತಾ ಇದ್ದರು. ಈ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಮೋಕ್ಷಿತಾ ಪೈ ಕೂಡ ತ್ರಿವಿಕ್ರಮ್ ಬಗ್ಗೆ ಹೇಳ್ತಾನೇ ಇದ್ದರು. ಬಿಗ್ ಬಾಸ್ನಲ್ಲಿ ಸದಾ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಿದ್ದ ಮೋಕ್ಷಿತಾ ಪೈ ಈಗ ಉಗ್ರ ಸ್ವರೂಪ ತೋರಿಸಿದ್ದಾರೆ. ಮೋಕ್ಷಿತಾ ತ್ರಿವಿಕ್ರಂ ವಿರುದ್ಧ ಸಿಟ್ಟಾಗಿದ್ದು, ಉಗ್ರ ಸ್ವರೂಪ ತೋರಿಸಿದ್ದಾರೆ.
ನಾನು 10 ವಾರ ಇರ್ತೇನೆ ಅಂತ ಹೇಳೋಕೆ ನೀವು ಯಾರು? ನೀವು ಏನು ಅಲ್ಲ.. ಇನ್ಮೇಲಿಂದ ಆಟ ಶುರು, ಯಾರು 10 ವಾರ ಇರ್ತಾರೆ ಅನ್ನೋದ್ನ ನೋಡೆ ಬಿಡ್ತೇನೆ ಎಂದು ಮೋಕ್ಷಿತಾ ಪೈ ತ್ರಿವಿಕ್ರಂಗೆ ಸವಾಲು ಹಾಕಿದ್ದಾರೆ.
ಮೋಕ್ಷಿತಾ ಪೈ-ತ್ರಿವಿಕ್ರಂ ಜಗಳಕ್ಕೆ ಉಗ್ರಂ ಮಂಜು ಬೆಂಕಿ ಹಚ್ಚಿರೊ ಹಾಗೆ ಕಾಣಿಸುತ್ತಿದೆ. ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಮಾತ್ ಆಡ್ತಾ ಕುಳಿತಿದ್ದರು. ಆಗಲೇ ಮಾತಿನ ಫ್ಲೋದಲ್ಲಿ ತ್ರಿವಿಕ್ರಮ್ ಒಂದು ಮಾತು ಹೇಳುತ್ತಾರೆ. “ಅಣ್ಣ ಇವರೆಲ್ಲ 10 ವಾರಕ್ಕೆ ಬಂದವ್ರು. 10 ವಾರ ಇದ್ದು ಹೋಗ್ತಾರೆ” ಅಂತಲೇ ಹೇಳುತ್ತಾರೆ. ಇದೇ ಮಾತನ್ನೆ ಉಗ್ರಂ ಮಂಜು ಇದೀಗ ಮೋಕ್ಷಿತಾ ಪೈಗೆ ಹೇಳಿದಂತೆ ಇದೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಬೆಂಬಲಿಸಿ ನವೆಂಬರ್ನಲ್ಲಿ ‘ಸ್ವಾಭಿಮಾನಿ ಜನಾಂದೋಲನ’ ಸಮಾವೇಶ..!