‘ಬಿಗ್ ಬಾಸ್ ಕನ್ನಡ ಸೀಸನ್ 11’ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಮೊದಲನೇ ವಾರ ಬಿಗ್ ಬಾಸ್ ಮನೆಯಿಂದ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇನ್ನೂ ಕನ್ನಡದಂತೆಯೇ ಪರಭಾಷೆಗಳಲ್ಲಿಯೂ ಕೂಡ ಬಿಗ್ ಬಾಸ್ ಶೋ ಸದ್ದು ಮಾಡುತ್ತಿದೆ. ಅಕ್ಟೋಬರ್ 6 ರಂದು ಬಿಗ್ಬಾಸ್ ತಮಿಳಿನ ಹೊಸ ಸೀಸನ್ ಪ್ರಾರಂಭವಾಗಿತ್ತು. ಇಷ್ಟು ವರ್ಷ ಕಮಲ್ ಹಾಸನ್ ಈ ಶೋ ನಡೆಸಿಕೊಟ್ಟಿದ್ದರು, ಆದರೆ ಮೊದಲ ಬಾರಿಗೆ ವಿಜಯ್ ಸೇತುಪತಿ ಸಾರಥ್ಯ ವಹಿಸಿಕೊಂಡಿದ್ದಾರೆ.
ವಿಜಯ್ ಸೇತುಪತಿ ನಿರೂಪಣೆಯ ಬಿಗ್ ಬಾಸ್ ಸೀಸನ್ 8ಕ್ಕೆ ಮೊದಲ ದಿನ ಬರೋಬ್ಬರಿ 18 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಹೋಗುವಾಗ ಎಲ್ಲರಿಗೂ ಒಂದೊಂದು ಟ್ರೋಫಿಯನ್ನು ವಿಜಯ್ ಕೊಟ್ಟು ಕಳಿಸಿದ್ದರು. ಮೊದಲ ದಿನವೇ ಮನೆಯ ಸದಸ್ಯರಿಗೆ ಕಠಿಣ ಟಾಸ್ಕ್ ಒಂದನ್ನು ನೀಡಲಾಯ್ತು. ಒಂದೇ ದಿನಕ್ಕೆ ಎಲ್ಲರೂ ಸೇರಿ ಒಬ್ಬರನ್ನು ನಾಮಿನೇಟ್ ಮಾಡಿ ಅವರನ್ನು ಮನೆಯಿಂದ ಹೊರಗೆ ಕಳಿಸಬೇಕು ಎಂದಿದ್ದರು.
ಅದರಂತೆ ಮನೆಯ ಕಿರಿಯ ಸ್ಪರ್ಧಿಯಾಗಿದ್ದ ಸಚಾನಾ ನಮಿದಾಸ್ ಅವರನ್ನು ಮನೆಯ ಇತರೆ ಸ್ಪರ್ಧಿಗಳು ನಾಮಿನೇಟ್ ಮಾಡಿದ್ದರು. ಹಾಗಾಗಿ ಒಂದೇ ದಿನಕ್ಕೆ ಸಚಾನಾ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇದು ಪ್ರೇಕ್ಷಕರಿಗೂ ಶಾಕ್ ಕೊಟ್ಟಿದೆ. ನಟಿಯನ್ನು ಬಿಗ್ ಬಾಸ್‌ಗೆ ಬಂದ ಒಂದೇ ದಿನಕ್ಕೆ ಎಲಿಮಿನೇಟ್ ಮಾಡೋದು ಎಷ್ಟು ಸರಿ ಎಂದು ವಾಹಿನಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಇನ್ನೂ ಸಚಾನಾ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬರಲಿದ್ದಾರೆ ಎನ್ನಲಾಗಿದೆ. ಅಧಿಕೃತ ಮಾಹಿತಿಗೆ ಕಾದುನೋಡಬೇಕಿದೆ.
ತಮಿಳಿನ ಸೂಪರ್ ಹಿಟ್ ಸಿನಿಮಾ ‘ಮಹಾರಾಜ’ನಲ್ಲಿ ವಿಜಯ್ ಸೇತುಪತಿ ಅವರ ಮಗಳ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ನಟಿ ಸಚಾನಾ ನಮಿದಾಸ್ ಸಹ ಬಿಗ್ಬಾಸ್ಗೆ ಹೋಗಿದ್ದರು. ಸ್ಪರ್ಧಿಗಳಲ್ಲಿ ಅತ್ಯಂತ ಕಿರಿಯ ವಯಸ್ಸಿನ ಸ್ಪರ್ಧಿ ಇವರಾಗಿದ್ದು, ಇವರ ಮೇಲೆ ದೊಡ್ಡ ನಿರೀಕ್ಷೆ ಇತ್ತು. ಸಚಾನಾ ಈ ಬಾರಿ ಕಪ್ ಗೆಲ್ಲುತ್ತಾರೆ ಎಂದೇ ಭರವಸೆ ಇಡಲಾಗಿತ್ತು. ಆದರೆ ಮೊದಲ ದಿನವೇ ಇತರೆ ಸ್ಪರ್ಧಿಗಳಿಂದ ನಾಮಿನೇಟ್ ಆಗಿ ಸಚಾನಾ ಬಿಗ್ಬಾಸ್ ಮನೆಗೆ ಹೋದ ಒಂದೇ ದಿನಕ್ಕೆ ಮನೆಯಿಂದ ಹೊರಗೆ ಬಂದಿದ್ದಾರೆ.
ಇದನ್ನೂ ಓದಿ : ಚುನಾವಣಾ ಅಖಾಡದಲ್ಲಿ ಗೆದ್ದು ಬೀಗಿದ ಕುಸ್ತಿಪಟು ವಿನೇಶ್ ಫೋಗಟ್..!