ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಐಶ್ವರ್ಯಾ ಹಾಗೂ ತ್ರಿವಿಕ್ರಂ ಕ್ಯಾಪ್ಟನ್ ಆಗಿದ್ದರು. ಇದೀಗ ಕ್ಯಾಪ್ಟನ್‌ಗಳ ಬಗ್ಗೆ ಬಿಗ್ ಬಾಸ್ ಒಂದು ಟಾಸ್ಕ್ನ್ನು ಕೊಟ್ಟಿದ್ದಾರೆ. ಐಶ್ವರ್ಯಾ ಹಾಗೂ ತ್ರಿವಿಕ್ರಂ ಇವರಿಬ್ಬರ ಪೈಕಿ ಒಬ್ಬರನ್ನು ಹೊರಕ್ಕೆ ಇಡಲು ಆದೇಶ ನೀಡಿದೆ.
ಇಬ್ಬರ ಪೈಕಿ ಯಾರು ಅನರ್ಹರು ಅನ್ನೋದೇ ಬಿಗ್ ಬಾಸ್ ನೀಡಿರೊ ಟಾಸ್ಕ್ ಆಗಿದೆ. ಇದರಲ್ಲಿ ಹೆಚ್ಚಾಗಿ ತ್ರಿವಿಕ್ರಮ್ ಹೆಸರು ಕೇಳಿ ಬಂದಿದೆ. ಈ ಹಿಂದಿನ ಪೋಸ್ಟರ್ ಟಾಸ್ಕ್‌ನಲ್ಲಿ ತ್ರಿವಿಕ್ರಮ್ ತುಂಬಾನೆ ಅಗ್ರೇಷನ್‌ನಲ್ಲಿಯೇ ಆಡಿದ್ದರು. ಆಟದ ಭರದಲ್ಲಿ ಉಗ್ರಂ ಮಂಜುವನ್ನ ಎತ್ತಿ ಕುಕ್ಕಿದ್ದರು. ಅದನ್ನ ಉಗ್ರಂ ಮಂಜು ಸೇರಿದಂತೆ ಧರ್ಮ ಕೂಡ ವಿರೋಧಿಸಿದರು. ಹಾಗಾಗಿಯೇ ಇವರಿಬ್ಬರು ತ್ರಿವಿಕ್ರಮ್ ಹೆಸರು ತೆಗೆದುಕೊಂಡಿದ್ದರು.
ಕ್ಯಾಪ್ಟನ್ ತ್ರಿವಿಕ್ರಮ್ ಈ ಜಾಗದಲ್ಲಿ ಇರಲು ಅನರ್ಹರೇ ಆಗಿದ್ದಾರೆ ಎಂದು ಮೋಕ್ಷಿತಾ ಪೈ ಹೇಳಿದ್ರು. ಇದನ್ನ ಕೇಳಿದ ತ್ರಿವಿಕ್ರಮ್ “ಅಯ್ಯಯ್ಯೋ ಅಯ್ಯಯ್ಯೋ” ಅಂತ ತಮ್ಮದೇ ಒಂದು ಎಕ್ಸಪ್ರೆಷನ್ ಕೊಟ್ಟರು. ಆದರೆ, ಮೋಕ್ಷಿತಾ ಪೈ ಈ ಬಗ್ಗೆ ಏನೂ ರಿಯ್ಯಾಕ್ಟ್ ಮಾಡಲಿಲ್ಲ. ತಮಗೇ ಏನು ಹೇಳಬೇಕಿತ್ತೋ ಅದನ್ನ ಹೇಳಿದರು. ಚೈತ್ರಾ ಕುಂದಾಪುರ ಇಲ್ಲಿ ಐಶ್ವರ್ಯ ಹೆಸರು ತೆಗೆದುಕೊಂಡ್ರು. ಐಶ್ವರ್ಯ ಫೋಟೋವನ್ನ ಎಲ್ಲರಂತೆ ಹರಿದು ಕಸದ ಬುಟ್ಟಿಗೆ ಹಾಕಿದರು.
ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ನಡುವೆ ಅದೇನ್ ಜಗಳವೋ ಏನೋ? ಮನೆಗೆ ಬಂದಾಗಿನಿಂದಲೂ ಇಬ್ಬರ ನಡುವೆ ಸಣ್ಣಗೆ ಜಗಳ ಇದ್ದೇ ಇದೆ. ಇದೀಗ ಅದು ಬೇರೆ ರೂಪ ಪಡೆದಂತೆ ಕಾಣಿಸುತ್ತಿದೆ. ಅದರ ರೂಪ ಇದೀಗ ಮೋಕ್ಷಿತಾ ಪೈ ಮಾತಿನಲ್ಲಿ, ವರ್ತನೆಯಲ್ಲಿ ಎದ್ದು ಕಾಣಿಸುತ್ತಿದೆ.
ಇದನ್ನೂ ಓದಿ : ಅಪ್ಪು ‘ಪರಮಾತ್ಮ’ನಾಗಿ ಇಂದಿಗೆ ಮೂರು ವರ್ಷ – ಕರಗದ ಅಭಿಮಾನಿಗಳ ನೋವು..!