ಬೆಂಗಳೂರು : ಕನ್ನಡಿಗರ ಪ್ರೀತಿಯ ಅಪ್ಪು ‘ಪರಮಾತ್ಮ’ನಾಗಿ ಇಂದಿಗೆ ಮೂರು ವರ್ಷ. ಹೀಗಾಗಿ ನಾಡಿನ ಎಲ್ಲೆಡೆ ಪುನೀತ್ ರಾಜ್‌ಕುಮಾರ್ ಅವರ ಸ್ಮರಣೆ ನಡೆಯುತ್ತಿದೆ. 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ಅಪ್ಪು ಅಗಲಿದ್ದರು. ಮೂರು ವರ್ಷ ಕಳೆದರೂ ಕರ್ನಾಟಕ ರತ್ನ ಅಪ್ಪು ಅಭಿಮಾನ ಮಾತ್ರ ಕಡಿಮೆಯಾಗಿಲ್ಲ.
ಬೆಂಗಳೂರಿನ ಕಂಠೀವರ ಸ್ಟುಡಿಯೋ ಬಳಿಗೆ ಅಭಿಮಾನದ ಸಾಗರ ಹರಿದು ಬರ್ತಲೇ ಇದೆ. ಅಪ್ಪು ಸಮಾಧಿಗೆ ಪತ್ನಿ ಅಶ್ವಿನಿ, ಮಕ್ಕಳು, ಕುಟುಂಬಸ್ಥರು ಕೆಲ ಹೊತ್ತಿನಲ್ಲೇ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ಬಾಲ್ಯದಲ್ಲೇ ಬಣ್ಣದ ಬದುಕಿಗೆ ಕಾಲಿಟ್ಟ ಅಪ್ಪು ಅತ್ಯುತ್ತಮ ಬಾಲ ನಟ ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ರಾಜರತ್ನನ ನೆನಪಿನಲ್ಲಿ ಅಭಿಮಾನಿ ದೇವರುಗಳು ಜೊತೆಗಿರದ ಜೀವ ಎಂದೆಂದೂ ಜೀವಂತ ಎಂದು ಸ್ಮರಿಸುತ್ತಿದ್ದಾರೆ.
ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಮತ್ತು ನಿರ್ಮಾಪಕಿ ಪಾರ್ವತಮ್ಮ ಅವರ ಕೊನೆಯ ಕುಡಿಯಾಗಿ, ಮಾರ್ಚ್ 17, 1975ರಲ್ಲಿ ಜನಿಸಿದರು. ಮನೆಯಲ್ಲಿ ಮುದ್ದಿನ ಮಗನಾಗಿದ್ದವರು. ಅಪ್ಪು ಬಾಲ್ಯದಲ್ಲೇ ಬಣ್ಣದ ಬದುಕಿಗೆ ಕಾಲಿಟ್ಟವರು. ಸುಮಾರು 48 ಚಿತ್ರಗಳಲ್ಲಿ ನಟಿಸಿದ್ದಾರೆ. 50 ಕ್ಕೂ ಹೆಚ್ಚು ಹಾಡು ಹಾಡಿದ್ದಾರೆ. ಅತ್ಯುತ್ತಮ ಬಾಲ ನಟ ರಾಷ್ಟ್ರೀಯ ಪ್ರಶಸ್ತಿ ಕೂಡ ಇವರಿಗೆ ಬಂದಿತ್ತು. ನಟನೆ ಮಾತ್ರವಲ್ಲದೆ ನೃತ್ಯ, ಹಾಡು,ಸಮಾಜಸೇವೆ, ನಯ-ವಿನಯ, ಒಟ್ಟಾರೆಯಾಗಿ ಅಹಂ ಇಲ್ಲದ ಅದ್ಭುತ ವ್ಯಕ್ತಿ.
ಪುನೀತ್ ರಾಜ್‌ಕುಮಾರ್ ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆದ ಸೂಪರ್ ಸ್ಟಾರ್ ಆಗಿದ್ದರು. ಕನ್ನಡದಲ್ಲಿ ಪುನೀತ್ ಒಬ್ಬರೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಅನ್ನುವ ಮಾಹಿತಿ ಸಿಗುತ್ತಿದೆ. ಪುನೀತ್ ಹಿಟ್ ಮೇಲೆ ಹಿಟ್ ಚಿತ್ರಗಳನ್ನ ಕೊಟ್ಟಿದ್ದಾರೆ. ಈ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆದ ಕನ್ನಡದ ನಟ ಅಂತಲೂ ಕರೆಸಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ ತಂದೆ ರಾಜ್‌ಕುಮಾರ್ ಅಭಿನಯದ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಮೂಲಕ ಕನ್ನಡ ಸಿನಿ ಪ್ರೇಮಿಗಳನ್ನ ರಂಜಿಸುತ್ತಲೇ ಬಂದಿದ್ದರು. ಬೆಟ್ಟದ ಹೂ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಕೂಡ ಪಡೆದುಕೊಂಡಿದ್ದರು. ಎಲ್ಲರಿಗೂ ಗೊತ್ತಿರೋ ಹಾಗೆ ಪುನೀತ್ ಒಬ್ಬ ಒಳ್ಳೆ ಸಿಂಗರ್ ಕೂಡ ಆಗಿದ್ದರು. ಹಾಡಿನಿಂದ ಬರೋ ದುಡ್ಡನ್ನ ಪುನೀತ್ ಒಳ್ಳೆ ಕೆಲಸಕ್ಕೆ ಬಳಸುತ್ತಿದ್ದರು. ತಮ್ಮ ಸಂಭಾವನೆಯಲ್ಲಿ ಒಂದಷ್ಟು ಚಾರಿಟಿಗಳಿಗೂ ಕೊಡ್ತಾ ಇದ್ದರು.
ಇದನ್ನೂ ಓದಿ : ಸಿಎಂ ಸಿದ್ದು ಪರಮಾಪ್ತ ರಾಕೇಶ್ ಪಾಪಣ್ಣಗೆ ಇಡಿ ಡ್ರಿಲ್ – ಇಂದೂ ತನಿಖೆ ಮುಂದುವರೆಸಿದ ಅಧಿಕಾರಿಗಳು..!