Download Our App

Follow us

Home » ಅಪರಾಧ » ಬೆಂಗಳೂರು : ಗ್ರಾಹಕನ ಸೋಗಿನಲ್ಲಿ ಬಂದು 75 ಲಕ್ಷ ಮೌಲ್ಯದ ಡೈಮಂಡ್ ರಿಂಗ್ ಕದ್ದ ಖದೀಮ, ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ..!

ಬೆಂಗಳೂರು : ಗ್ರಾಹಕನ ಸೋಗಿನಲ್ಲಿ ಬಂದು 75 ಲಕ್ಷ ಮೌಲ್ಯದ ಡೈಮಂಡ್ ರಿಂಗ್ ಕದ್ದ ಖದೀಮ, ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ..!

ಬೆಂಗಳೂರು : ಗ್ರಾಹಕನ ಸೋಗಿನಲ್ಲಿ ಬಂದು ದುಬಾರಿ ಡೈಮಂಡ್ ರಿಂಗ್ ಕಳ್ಳತನ ಮಾಡಿದ ಘಟನೆ ಎಂ.ಜಿ. ರಸ್ತೆಯಲ್ಲಿರುವ ಪ್ರತಿಷ್ಠಿತ ಜೋಯಾಲುಕ್ಕಾಸ್ ಚಿನ್ನಭಾರಣ ಮಳಿಗೆಯಲ್ಲಿ ನಡೆದಿದೆ. ಖದೀಮ ಡೂಪ್ಲಿಕೇಟ್ ರಿಂಗ್ ಇಟ್ಟು ಒರಿಜಿನಲ್ 75 ಲಕ್ಷ ಮೌಲ್ಯದ ಡೈಮಂಡ್ ರಿಂಗ್ ಕದ್ದು ಪರಾರಿಯಾಗಿದ್ದಾನೆ. ಗ್ರಾಹಕನ ಸೋಗಿನಲ್ಲಿ ಬಂದು ಡೈಮಂಡ್ ರಿಂಗ್ ಕದ್ದ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಿನ್ನ ಖರೀದಿಸುವ ನೆಪದಲ್ಲಿ ಚಿನ್ನದ ಅಂಗಡಿಗೆ ಭೇಟಿ ಕೊಟ್ಟಿದ್ದ ವ್ಯಕ್ತಿಯೊಬ್ಬ, ಫೆಬ್ರವರಿ 18 ರಂದು ಸಂಜೆ 6 ಗಂಟೆಗೆ ಎಂ.ಜಿ. ರಸ್ತೆಯ ಜೋಯಾಲುಕಾಸ್ ಚಿನ್ನಭಾರಣ ಮಳಿಗೆಗೆ ಭೇಟಿ ನೀಡಿ ಡೆಮೈಂಡ್ ರಿಂಗ್ ತೋರಿಸುವಂತೆ ಕೇಳಿದ್ದ. ಬಳಿಕ ಈ ವ್ಯಕ್ತಿ ಚಿನ್ನಭಾರಣ ಮಳಿಗೆ ಸಿಬ್ಬಂದಿಗೆ ಅದು ಇದು ಅಂತ ತೋರಿಸಿ ಡೈಮಂಡ್ ರಿಂಗ್ ಕದ್ದಿದ್ದಾನೆ. ಮರು ದಿನ ಬೆಳ್ಳಗ್ಗೆ ಸಿಬ್ಬಂದಿ ಸ್ಟಾಕ್ ಚೆಕ್ ಮಾಡುವಾಗ ಆರ್ಟಿಫಿಸಿಯಲ್ ಡೈಮಂಡ್ ರಿಂಗ್ ಪತ್ತೆಯಾಗಿದ್ದು, ಸಿಸಿಟಿವಿ ಪರಿಶೀಲನೆ ನಡೆಸಿದಾಗ ಡೈಮಂಡ್ ಉಂಗುರು ಕಳ್ಳತನ ವಾಗಿರುವುದು ಬೆಳಕಿಗೆ ಬಂದಿದೆ. ಕೊಡಲೇ ಎಚ್ಚೇತ ಸಿಬ್ಬಂದಿಗಳು ಬೆಂಗಳೂರು ನಗರದಲ್ಲಿರುವ ಇತರೆ ಜೋಯಾಲುಕಾಸ್ ಮಳಿಗೆಗಳಿಗೆ ವ್ಯಕ್ತಿಯ ಬಗ್ಗೆ ಮೆಸೆಜ್ ರವಾನಿಸಿದ್ದಾರೆ.

ಇನ್ನು ಈ ಕಳ್ಳ ನಗರದ ಹಲವೆಡೆ ಆಭರಣ ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಾರತಹಳ್ಳಿ ಮತ್ತು ಕಮ್ಮನಹಳ್ಳಿ ಇರುವ ಜೋಯಾಲುಕಾಸ್ ಗೆ ಇದೇ ವ್ಯಕ್ತಿ ಭೇಟಿ ನೀಡಿದ್ದ ಎಂದು ಹೇಳಲಾಗುತ್ತಿದೆ. ಈ ಘಟನೆ ಹಿನ್ನೆಲೆ ಸದ್ಯ ಎಂ.ಜಿ. ರಸ್ತೆಯ ಜೋಯಾಲುಕಾಸ್ ಬ್ರಾಂಚ್ ಮ್ಯಾನೇಜರ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರು‌ ದಾಖಲಿಸಿ ಆರೋಪಿಹಾಗಿ ಕಬ್ಬನ್ ಪಾರ್ಕ್ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್ – ಪೀಕ್​ ಅವರ್​ಗಳಲ್ಲಿ ಇನ್ಮೇಲೆ 3 ನಿಮಿಷಕ್ಕೊಂದು ಮೆಟ್ರೋ ರೈಲು ಓಡಾಟ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here