Download Our App

Follow us

Home » ಮೆಟ್ರೋ » ಬೆಂಗಳೂರು : ಕ್ಲಾಸ್​ಮೇಟ್‌ಗಳಿಂದಲೇ ಅಶ್ಲೀಲ ಮೆಸೇಜ್‌.. ಮನನೊಂದ ಗೃಹಿಣಿ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ..!

ಬೆಂಗಳೂರು : ಕ್ಲಾಸ್​ಮೇಟ್‌ಗಳಿಂದಲೇ ಅಶ್ಲೀಲ ಮೆಸೇಜ್‌.. ಮನನೊಂದ ಗೃಹಿಣಿ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ..!

ಬೆಂಗಳೂರು : ಬಾಗಲಗುಂಟೆ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಮಮತಾ ಎಂಬ 31 ವರ್ಷದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಮತಾ ಸಾವಿಗೂ ಮುನ್ನ ಇಬ್ಬರು ಯುವಕರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನನ್ನ ಬಗ್ಗೆ ಕೆಟ್ಟದ್ದಾಗಿ ಏನಾದ್ರು ಬಂದರೆ ನೀವೆ ಹೊಣೆ ಎಂದು ಮಮತಾ ಡೆತ್ ನೋಟ್ ಬರೆದಿದ್ದಾಳೆ. ಆಕೆಯ ಸಾವಿಗೆ ಅವಳದ್ದೇ ಇಬ್ಬರು ಕ್ಲಾಸ್​ಮೇಟ್‌ಗಳು ಕಾರಣವಾಗಿದ್ದು, ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಮಮತಾಗೆ ಆಕೆಯ ಕ್ಲಾಸ್​ಮೇಟ್ಸ್​ಗಳಿಂದಲೇ ಅಶ್ಲೀಲ ಮೆಸೇಜ್​​ಗಳು ಬರುತ್ತಿದ್ದವು ಅನ್ನೋ ಆರೋಪ ಕೇಳಿ ಬಂದಿದ್ದು, ಅಶೋಕ್ ಹಾಗೂ ಗಣೇಶ್ ಎಂಬ ಇಬ್ಬರು ಯುವಕರ ವಿರುದ್ದ ಮಮತಾ ಡೆತ್​ನೋಟ್​ ಬರೆದಿದ್ದಾಳೆ.

ಈ ಇಬ್ಬರು “ನನ್ನ ಜೊತೆ ಸಹಕರಿಸು, ನೈಟ್​ಔಟ್ ಹೋಗೋಣವೆಂದು ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ಮಮತಾ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾಳೆ. ಮಮತಾಳ ಕ್ಲಾಸ್​ಮೇಟ್ಸ್ ಆಗಿದ್ದ ಗಣೇಶ್ ಹಾಗೂ ಅಶೋಕ್​ ಅಶ್ಲೀಲ ಮೆಸೇಜ್ ಕಳಿಸಿ ನಮ್ಮ ಜೊತೆ ಸಹಕರಿಸದಿದ್ದರೆ ನಿನ್ನನ್ನು ಸುಮ್ಮನೇ ಬಿಡೋದಿಲ್ಲ ನಿನ್ನ ಸಂಸಾರವನ್ನು ಹಾಳು ಮಾಡುತ್ತೇವೆ ಎಂದು ಸಂದೇಶಗಳನ್ನು ಕಳಿಸುತ್ತಿದ್ದರಂತೆ. ಇದರಿಂದ ಮನನೊಂದ ಮಹಿಳೆ ಆರೋಪಿಗಳ ವಿರುದ್ಧ ಡೆತ್​ನೋಟ್​ ಬರೆದಿಟ್ಟು, ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸದ್ಯ ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಮೃತ ಮಮತಾ ಪತಿ ಲೋಕೇಶ್​ರಿಂದ ದೂರು ದಾಖಲಾಗಿದೆ. ಡೆತ್​ನೋಟ್​ ಆಧರಿಸಿ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ. ಮಮತಾ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಸ್ವಿಚ್ ಮಾಡಿಕೊಂಡು ಪರಾರಿಯಾಗಿದ್ದಾರೆ.

ಇದನ್ನೂ ಓದಿ : ಕಾಂಪೌಂಡ್​ ಜಾಗಕ್ಕಾಗಿ ಜಟಾಪಟಿ – ಬೆಂಗಳೂರಿನ ವೈಷ್ಣವಿ ಸಫೈರ್​ ಮಾಲ್​​ ವಿರುದ್ದ FIR ದಾಖಲು..!

Leave a Comment

DG Ad

RELATED LATEST NEWS

Top Headlines

ನಕಲಿ ನಕ್ಷೆ ಸೃಷ್ಟಿಸಿ ಕಟ್ಟಡ ನಿರ್ಮಾಣ – ಮಾಲೀಕನ ವಿರುದ್ಧ FIR ದಾಖಲು..!

ಬೆಂಗಳೂರು : ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜರಾಜೇಶ್ವರಿನಗರ

Live Cricket

Add Your Heading Text Here