Download Our App

Follow us

Home » ಅಪರಾಧ » ಬೆಂಗಳೂರು : ಪಂಚೆ ಧರಿಸಿ ಬಂದ ರೈತನಿಗೆ ಜಿ.ಟಿ ಮಾಲ್​ ಅವಮಾನ – ಒಳ ಬಿಡದೆ ದರ್ಪ ತೋರಿದ ​​​ಸಿಬ್ಬಂದಿ..!

ಬೆಂಗಳೂರು : ಪಂಚೆ ಧರಿಸಿ ಬಂದ ರೈತನಿಗೆ ಜಿ.ಟಿ ಮಾಲ್​ ಅವಮಾನ – ಒಳ ಬಿಡದೆ ದರ್ಪ ತೋರಿದ ​​​ಸಿಬ್ಬಂದಿ..!

ಬೆಂಗಳೂರು : ಬಟ್ಟೆ ಕೊಳೆಯಾಗಿದೆ ಅಂತ ಇತ್ತೀಚೆಗಷ್ಟೇ ನಮ್ಮ ಮೆಟ್ರೋ ಸಿಬ್ಬಂದಿಯು ಓರ್ವ ರೈತನನ್ನು ತಡೆದು ಅವಮಾನಿಸಿದ್ದರು. ಇದರ ಬೆನ್ನಲ್ಲೇ ಇದೀಗ ಬೆಂಗಳೂರು ನಗರದ ಪ್ರತಿಷ್ಠಿತ ಮಾಲ್‌ನಲ್ಲಿ ರೈತನಿಗೆ ಅವಮಾನ ಮಾಡಿದ ಮತ್ತೊಂದು ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಪಂಚೆ ಹಾಕೊಂಡು ಬಂದಿದ್ದಕ್ಕೆ ರೈತನನ್ನು ಒಳಗೆ ಬಿಡದೆ ಜಿ.ಟಿ ಮಾಲ್ ಸಿಬ್ಬಂದಿ ದರ್ಪ ತೋರಿದ ಘಟನೆ ನಡೆದಿದೆ.

ಹಾವೇರಿ ಮೂಲದ ನಾಗರಾಜ್‌ ಎಂಬುವವರು ತಮ್ಮ ತಂದೆ -ತಾಯಿಯನ್ನು ಮಾಗಡಿ ರಸ್ತೆಯಲ್ಲಿರೋ ಜಿ.ಟಿ ಮಾಲ್‌ಗೆ ಕರೆದುಕೊಂಡು ಬಂದಿದ್ದರು. ತಂದೆ-ತಾಯಿಗೆ ಸಿನಿಮಾ ತೋರಿಸಲು ಮಾಲ್‌ಗೆ ಕರೆದುಕೊಂಡು ಬಂದಿದ್ದರು. ಆದ್ರೆ ತಮ್ಮ ತಂದೆ ಪಂಚೆ ಧರಿಸಿದ್ದಾರೆ ಅನ್ನೋ ಕಾರಣಕ್ಕೆ ಮಾಲ್‌ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ. ಪಂಚೆ ಹಾಕೊಂಡು ಬಂದಿದ್ದಕ್ಕೆ ರೈತನನ್ನು ಒಳಗೆ ಬಿಡದೆ ಮಾಲ್ ಸಿಬ್ಬಂದಿ ತಡೆದು ಅವಮಾನ ಮಾಡಿದ್ದಾರೆ. ಪಂಚೆ ಧರಿಸಿದವರಿಗೆ ಮಾಲ್‌ ಒಳಗೆ ಬಿಡುವುದಿಲ್ಲ, ನಮ್ಮ ಮಾಲ್‌ನಲ್ಲಿ ಈ ರೀತಿ ರೂಲ್ಸ್ ಇದೆ ಅಂತ ಸಿಬ್ಬಂದಿ ಹೇಳಿದ್ದಾರೆ.

ಮಾಲ್ ಸಿಬ್ಬಂದಿಯ ಈ ದರ್ಪಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರೈತನ ಮಗ ನಾಗರಾಜ್ ಎಂಬುವರು ಮಾಲ್ ಒಳಗೆ ಬಿಡಿ ಅಂತ ಮನವಿ ಮಾಡಿದರು ಸಿಬ್ಬಂದಿ ಅವರ ಪ್ರವೇಶಿಸಿ ನಿರಾಕರಿಸಿ ದರ್ಪ ತೋರಿದ್ದಾರೆ. ಪಂಚೆ ಹಾಕೊಂಡಿದ್ದಾರೆ ಹೀಗಾಗಿ ಬಿಡುವುದಿಲ್ಲ. ಮಾಲ್‍ನಲ್ಲಿ ಪಂಚೆ ಹಾಕಿದವರನ್ನು ಬಿಡುವುದಿಲ್ಲ. ನಮ್ಮ ಮಾಲಿನಲ್ಲಿ ಈ ರೀತಿ ರೂಲ್ಸ್ ಇದೆ ಅಂತ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರೋ ನಾಗರಾಜ್ ಅವರು ಮಾಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ನೋಡಿ ಸಾರ್ವಜನಿಕರು ಕೂಡ ಆಕ್ರೋಶ ಹೊರಹಾಕಿದ್ದಾರೆ.

ಕಳೆದ ಫೆಬ್ರವರಿ 26ರಂದು ಬೆಂಗಳೂರಿನ ರಾಜಾಜಿನಗರ ನಮ್ಮ ಮೆಟ್ರೋ ನಿಲ್ದಾಣದಲ್ಲಿ ರೈತನಿಗೆ ಅವಮಾನ ಮಾಡಿದ್ದ ಘಟನೆ ನಡೆದಿತ್ತು. ಇದಕ್ಕೆ ಮೆಟ್ರೋ ಆಡಳಿತ ಮಂಡಳಿ ಕ್ಷಮೆಯಾಚಿಸಿತ್ತು. ಇದೀಗ GT ಮಾಲ್​​ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ರೈತನಿಗೆ ಮಾಡಿದ ಅಪಮಾನಕ್ಕೆ 1 ವರ್ಷ ಉಚಿತ ಮೂವಿ ಟಿಕೆಟ್​ ಕೊಡುವಂತೆ ಆಗ್ರಹಿಸುತ್ತಿದ್ದಾರೆ. ಬೆಂಗಳೂರಲ್ಲಿ ಬಡವರು, ರೈತರು ಅಂದ್ರೆ ಇಷ್ಟೊಂದು ಕಡೆಗಣೆನಾ? ಎಂಬೆಲ್ಲ ಚರ್ಚೆಗಳು ನಡೆಯುತ್ತಿದೆ.

ಇದನ್ನೂ ಓದಿ : ರಾಜ್ಯದಲ್ಲಿ 10 ಸಾವಿರ ಗಡಿ ದಾಟಿದ ಡೆಂಘೀ ಪ್ರಕರಣ – ನಿನ್ನೆ ಒಂದೇ ದಿನ 487 ಮಂದಿಯಲ್ಲಿ ಡೆಂಘೀ ಪತ್ತೆ..!

Leave a Comment

DG Ad

RELATED LATEST NEWS

Top Headlines

ಚಿತ್ರದುರ್ಗದಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಆಂಬುಲೆನ್ಸ್ ಡಿಕ್ಕಿ – ಸ್ಥಳದಲ್ಲೇ ಮಹಿಳೆ ಸಾವು..!

ಚಿತ್ರದುರ್ಗ : ಕೆಟ್ಟು ನಿಂತಿದ್ದ ಮೈನ್ಸ್ ಲಾರಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದು ಒರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 4ರ ಬಳ್ಳೇಕಟ್ಟೆ ಬ್ರಿಡ್ಜ್

Live Cricket

Add Your Heading Text Here