Download Our App

Follow us

Home » ರಾಜ್ಯ » ಬೆಂಗಳೂರು : BMTC ಬಸ್​ನಲ್ಲಿ ಚಪ್ಪಲಿ ಹಿಡಿದು ನಾರಿಮಣಿಯರ ಹೊಡೆದಾಟ, ಅಸಲಿಗೆ ಆಗಿದ್ದೇನು ಗೊತ್ತಾ?

ಬೆಂಗಳೂರು : BMTC ಬಸ್​ನಲ್ಲಿ ಚಪ್ಪಲಿ ಹಿಡಿದು ನಾರಿಮಣಿಯರ ಹೊಡೆದಾಟ, ಅಸಲಿಗೆ ಆಗಿದ್ದೇನು ಗೊತ್ತಾ?

ಬೆಂಗಳೂರು : ಬೆಂಗಳೂರಿನ BMTC ಬಸ್​ನಲ್ಲಿ ಸೀಟ್​ಗಾಗಿ ನಾರಿಮಣಿಯರ ಬಿಗ್​​ ಫೈಟ್ ನಡೆದಿದೆ. ಯುವತಿಯರ ನಡುವೆ ಶುರುವಾದ ಕಿಟಕಿ ಫೈಟ್​ ಚಪ್ಪಲಿ ಹಿಡಿದು ಹೊಡೆದಾಡಿಕೊಳ್ಳುವಷ್ಟು ತೀವ್ರ ಸ್ವರೂಪಕ್ಕೆ ಹೋಗಿದೆ. ರಾಜಾಜಿನಗರದಲ್ಲಿ ಬರ್ತಿದ್ದ ಮೆಜೆಸ್ಟಿಕ್ ಟು ಪೀಣ್ಯ ಬಸ್​ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

BMTCಯ KA- 57 F- 4255 ಬಸ್​ನಲ್ಲಿ ಮಹಿಳೆಯರಿಬ್ಬರು ಪ್ರಯಾಣಿಸುತ್ತಿದ್ದಾಗ ಕಿಟಕಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದಿದ್ದರಿಂದ ಜಗಳ ನಿಲ್ಲಲೇ ಇಲ್ಲ. ಹೀಗಾಗಿ ಜಗಳ ತಾರಕಕ್ಕೇರುತ್ತಿದ್ದಂತೆ ಇಬ್ಬರು ಮಹಿಳೆಯರು ಕಾಲಲಿದ್ದ ಚಪ್ಪಲಿ ತೆಗೆದುಕೊಂಡು ಮನಸೋ ಇಚ್ಛೆ ಹೊಡೆದಾಡಿಕೊಂಡಿದ್ದಾರೆ.

ಇನ್ನು ಬಸ್​ನಲ್ಲಿದ್ದ ಸಹ ಪ್ರಯಾಣಿಕರು ಈ ಇಬ್ಬರ ಬಡಿದಾಟ ನೋಡಿ ಫುಲ್ ಸುಸ್ತಾಗಿ ಹೋಗಿದ್ದಾರೆ. ಹೊಡೆದಾಡಿಕೊಳ್ಳದಂತೆ ಬುದ್ಧಿ ಹೇಳಿದ್ದಾರೆ. ಆದರೂ ಇಬ್ಬರು ಶೂನಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋವನ್ನು ಪ್ರಯಾಣಿಕರೊಬ್ಬರು ಪೋನ್ ನಲ್ಲಿ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ : ಪರಶುರಾಮ ಥೀಮ್‌ ಪಾರ್ಕ್‌ ಅಕ್ರಮ ಕಾಮಗಾರಿ ಪ್ರಕರಣ – ತನಿಖೆ ಸಿಐಡಿಗೆ ವಹಿಸಿ ಸಿಎಂ ಸಿದ್ದರಾಮಯ್ಯ ಆದೇಶ..!

Leave a Comment

DG Ad

RELATED LATEST NEWS

Top Headlines

ಹಾಸನಾಂಬೆ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ..!

ಹಾಸನ : ಹಾಸನದ ಹಾಸನಾಂಬೆ ದೇವಿಯ ಉತ್ಸವ ಆರಂಭವಾಗಿದೆ. ಅಕ್ಟೋಬರ್ 24ರಂದು ದೇಗುಲದ ಬಾಗಿಲು ತೆರೆಯಲಾಗಿದೆ. ನವೆಂಬರ್ 3ರವರೆಗೆ ಉತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ

Live Cricket

Add Your Heading Text Here