Download Our App

Follow us

Home » ಜಿಲ್ಲೆ » ಬೆಳಗಾವಿ : ಗೃಹಲಕ್ಷ್ಮಿ ಹಣ ಕೂಡಿಟ್ಟು ಸ್ವಉದ್ಯೋಗ ಆರಂಭಿಸಿದ ಮಹಿಳೆ..!

ಬೆಳಗಾವಿ : ಗೃಹಲಕ್ಷ್ಮಿ ಹಣ ಕೂಡಿಟ್ಟು ಸ್ವಉದ್ಯೋಗ ಆರಂಭಿಸಿದ ಮಹಿಳೆ..!

ಬೆಳಗಾವಿ : ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದ ಹಲವು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಹಿಂದೆ ಗೃಹಲಕ್ಷ್ಮಿಯ ಹಣ ಕೂಡಿಟ್ಟು ಫ್ರಿಜ್, ಅಂಗಡಿ ಹಾಕಿದ ಸುದ್ದಿಗಳನ್ನು ಓದಿದ್ದೇವೆ. ಇದೇ ಸಾಲಿಗೆ ಮತ್ತೊಂದು ಸುದ್ದಿಯೊಂದು ಸೇರಿದೆ.

ಹೌದು, ಜಿಲ್ಲೆಯ ಅರಭಾಂವಿ ವಿಧಾನಸಭಾ ಕ್ಷೇತ್ರದ ಮೂಡಲಗಿಯ ಮಹಿಳೆಯೊಬ್ಬರು ಗೃಹ ಲಕ್ಷ್ಮೀ ಹಣವನ್ನು ಬಂಡವಾಳವಾಗಿ ಪರಿವರ್ತಿಸಿ ಈಗ ಸ್ವಉದ್ಯೋಗವನ್ನು ಆರಂಭಿಸಿದ್ದಾರೆ.  ಮೂಡಲಗಿಯ ನಿವಾಸಿ ಆಶಾ ಸುಭಾಷ ತಳವಾರ ಪ್ರತಿ ತಿಂಗಳ ಗೃಹ ಲಕ್ಷ್ಮೀ ಹಣವನ್ನು ಕೂಡಿಟ್ಟು, ಅದನ್ನ ಬಂಡವಾಳದ ಸ್ವರೂಪದಲ್ಲಿ ಪರಿವರ್ತಿಸಿ, ಸೀರೆ ಮಾರಾಟವನ್ನು ಆರಂಭಿಸಿದ್ದಾರೆ.

ಚಿಕ್ಕದಾಗಿ ಟೇಲರಿಂಗ್ ಕೆಲಸ ಮಾಡಿಕೊಂಡಿದ್ದ ಆಶಾ ಸುಭಾಷ ತಳವಾರ, ತಮ್ಮ ಆರ್ಥಿಕಮಟ್ಟ ಗೃಹಲಕ್ಷ್ಮೀಯಿಂದ ಸುಧಾರಿಸಿಕೊಂಡಿದ್ದಾರೆ. ಸಿಎಂ ಸಿದ್ಧರಾಮಯ್ಯ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೇ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗಾಗಿ ಸುಂದರವಾದ ಸೀರೆಯನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ : ಇಂದು ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್‌ ಮಹತ್ವದ ಸಭೆ..!

Leave a Comment

DG Ad

RELATED LATEST NEWS

Top Headlines

ಬೆಳಗಾವಿ : ಗೃಹಲಕ್ಷ್ಮಿ ಹಣ ಕೂಡಿಟ್ಟು ಸ್ವಉದ್ಯೋಗ ಆರಂಭಿಸಿದ ಮಹಿಳೆ..!

ಬೆಳಗಾವಿ : ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದ ಹಲವು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಹಿಂದೆ ಗೃಹಲಕ್ಷ್ಮಿಯ ಹಣ ಕೂಡಿಟ್ಟು ಫ್ರಿಜ್, ಅಂಗಡಿ

Live Cricket

Add Your Heading Text Here