Download Our App

Follow us

Home » ಜಿಲ್ಲೆ » ಬೆಳಗಾವಿ ಗುಂಪು ಘರ್ಷಣೆ ಪ್ರಕರಣ – 50ಕ್ಕೂ ಹೆಚ್ಚು ಮಂದಿ ವಿರುದ್ದ FIR ದಾಖಲು..!

ಬೆಳಗಾವಿ ಗುಂಪು ಘರ್ಷಣೆ ಪ್ರಕರಣ – 50ಕ್ಕೂ ಹೆಚ್ಚು ಮಂದಿ ವಿರುದ್ದ FIR ದಾಖಲು..!

ಬೆಳಗಾವಿ : ನಗರದ ಅಳ್ವಾನ್ ಗಲ್ಲಿಯಲ್ಲಿ ನಡೆದ ಗುಂಪು ಘರ್ಷಣೆ ಪ್ರಕರಣ ಸಂಬಂಧ ಶಹಾಪುರ ಠಾಣೆಯಲ್ಲಿ 2 ಪ್ರತ್ಯೇಕ ದೂರು ದಾಖಲಾಗಿದ್ದು, 50ಕ್ಕೂ ಹೆಚ್ಚು ಮಂದಿಯ ವಿರುದ್ದ  FIR ದಾಖಲಿಸಲಾಗಿದೆ. ಘಟನೆ ಸಂಬಂಧ ಎರಡೂ ಗುಂಪಿನ ಕಡೆಯವರು ದೂರು ನೀಡಿದ್ದಾರೆ.

ತಲ್ವಾರ್ ಪ್ರದರ್ಶನ ಹಾಗೂ ಕಲ್ಲು ತೂರಾಟ ಸಂಬಂಧ FIR ದಾಖಲಿಸಲಾಗಿದ್ದು, ಒಂದು ಗುಂಪಿನ 14 ಜನರ ವಿರುದ್ಧ FIR ದಾಖಲಾಗಿದೆ. IPC ಸೆಕ್ಷನ್ 143, 147, 148, 323, 324, 307, 354, 504, 506, 153A ಹಾಗೂ 149ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದು FIRನಲ್ಲಿ IPC ಸೆಕ್ಷನ್​​​ 143, 147, 148, 323, 324, 307, 354, 504, 506, 153A ಹಾಗೂ 149 ರ ಅಡಿ ಕೇಸ್​ ದಾಖಲಿಸಲಾಗಿದೆ. ಇನ್ನು, ಗುಂಪು-ಘರ್ಷಣೆಗೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಆಳ್ವಾನ್​​ ಗಲ್ಲಿ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಘಟನೆಯ ಹಿನ್ನಲೆ : ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ನಗರದ ಅಳ್ವಾನ್ ಗಲ್ಲಿಯಲ್ಲಿ ಕ್ರಿಕೆಟ್ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಬಳಿಕ ಗಲಾಟೆಯಲ್ಲಿ ಮಧ್ಯಪ್ರವೇಶಿಸಿದ 2 ಗುಂಪಿನ ಯುವಕರು, ಮನೆಗಳ ಮೇಲೆ ಕಲ್ಲು ತೂರಿ ತಲ್ವಾರ್ ಪ್ರದರ್ಶನ ಮಾಡಿದ್ದಾರೆ. ಯುವಕರ ನಡುವಿನ ಗಲಾಟೆಯಲ್ಲಿ 8 ಮಂದಿಗೆ ಗಾಯಗಳಾಗಿವೆ. ಎರಡೂ ಕಡೆಯವರಿಗೆ ಗಾಯಗಳಾಗಿದ್ದು, ಬಿಮ್ಸ್ ಆಸ್ಪತ್ರೆಯಲ್ಲಿ ಗಾಯಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಲಾಟೆಯಲ್ಲಿ ಓರ್ವ ಪೊಲೀಸ್ ಪೇದೆ ಅಮರ್‌ಗೂ ಗಾಯವಾಗಿತ್ತು.

ಬಳಿಕ ಸ್ಥಳದಲ್ಲಿ ಕೆಎಸ್‍ರ್‍ಪಿ, ಮೂರು ಜನ ಸಿಪಿಐ ನಿಯೋಜನೆ ಮಾಡಲಾಗಿತ್ತು. ಇನ್ನು ಘರ್ಷಣೆ ವಿಚಾರದ ಕುರಿತಂತೆ ಶಹಾಪುರ ಪೊಲೀಸ್ ಠಾಣೆಗೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಘಟನೆ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಘಟನೆ ಸಂಬಂಧ ಬೆಳಗಾವಿ ನಗರದಲ್ಲಿ ಹೈ ಅಲರ್ಟ್ ಘೋಷಿಸಿದ್ದರು. ಜೊತೆಗೆ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಕಮಿಷನರ್ ಸೂಚನೆ ನೀಡಿದ್ದರು.

ಇದನ್ನೂ ಓದಿ : “ಮಾರಿಗೆ ದಾರಿ” ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್​​..!

 

 

 

 

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here