Download Our App

Follow us

Home » ಮೆಟ್ರೋ » ಕೋಟಿ ಕೋಟಿ ತೆರಿಗೆ ಬಾಕಿ – ಮಂತ್ರಿಮಾಲ್​ಗೆ ಮತ್ತೆ ಬೀಗ ಜಡಿದು ಶಾಕ್​ ಕೊಟ್ಟ ಬಿಬಿಎಂಪಿ..!

ಕೋಟಿ ಕೋಟಿ ತೆರಿಗೆ ಬಾಕಿ – ಮಂತ್ರಿಮಾಲ್​ಗೆ ಮತ್ತೆ ಬೀಗ ಜಡಿದು ಶಾಕ್​ ಕೊಟ್ಟ ಬಿಬಿಎಂಪಿ..!

ಬೆಂಗಳೂರು : ಕೋಟಿ ಕೋಟಿ ರೂಪಾಯಿ ತೆರಿಗೆ ಹಣ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್​ಗೆ ಮತ್ತೆ ಬೀಗ ಜಡಿದಿದ್ದಾರೆ.

ಸುಮಾರು 40 ಕೋಟಿ ವರೆಗೂ ಮಂತ್ರಿ ಮಾಲ್​ ತೆರಿಗೆ ಪಾವತಿ ಉಳಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕೂಡ ಅನೇಕ ಬಾರಿ ತೆರಿಗೆ ವಿಚಾರವಾಗಿ ಮಾಲ್ ಗೆ ಬೀಗ ಹಾಕಲಾಗಿತ್ತು. ಇದೀಗ ಮತ್ತೆ ಇಂದು ಮಾಲ್ ಗೆ ಬೀಗ ಹಾಕಲಾಗಿದ್ದು, ಮುಖ್ಯ ಪ್ರವೇಶ ದ್ವಾರಕ್ಕೆ ಅಧಿಕಾರಿಗಳು ಬೀಗ ಜಡಿದು ಶಾಕ್ ನೀಡಿದ್ದಾರೆ.

ಮಾಲ್​​ನ ಮುಖ್ಯ ದ್ವಾರಕ್ಕೆ ಬೀಗ ಹಾಕುವುದರೊಂದಿಗೆ ನೋಟಿಸ್ ಕೂಡ ಅಂಟಿಸಲಾಗಿದೆ. ಬಿಬಿಎಂಪಿ ಕಾಯ್ದೆ 2020ರ ಕಲಂ 156 ಹಾಗೂ ದಿನಾಂಕ 2023ರ ಡಿಸೆಂಬರ್ 06 ರ ಸುತ್ತೊಲೆಯಂತೆ, ನಿಮ್ಮ ವ್ಯಾಪಾರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಬಿಬಿಎಂಪಿ ಆದೇಶ ಮೇರೆಗೆ ಬಾಕಿ ಆಸ್ತಿ ತೆರಿಗೆಗಳನ್ನು ಪಾವತಿಸದ ಕಾರಣಕ್ಕಾಗಿ ಆಸ್ತಿಯನ್ನು ಸೀಲ್ ಮಾಡಲಾಗಿದೆ ಎಂದು ಬ್ಯಾನರ್ ಅಳಡಿಸಲಾಗಿದೆ. ಈ ನಡುವೆ ಎಂದಿನಂತೆ ಕೆಲಸಕ್ಕೆ ಬಂದ ಬಟ್ಟೆ, ಸೂಪರ್ ಮಾರ್ಕೆಟ್, ಮೇಕ್ ಅಪ್ ಸೇರಿ ಮಾಲ್ ಒಳಗಿರುವ ಹಲವು ಮಳಿಗೆಗಳ ಸಿಬ್ಬಂದಿಗಳು ಕಂಗಲಾಗಿದ್ದು ಕಂಡು ಬಂದಿದೆ.

ಇದನ್ನೂ ಓದಿ : ಸೋಮಣ್ಣ ಮನೆಗೆ ಬರಬಾರದು ನಾನು ಪ್ರಚಾರಕ್ಕೆ ಹೋಗಲ್ಲ – ಮಾಧುಸ್ವಾಮಿ ಗುಡುಗು

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here