Download Our App

Follow us

Home » ಮೆಟ್ರೋ » ತೆರಿಗೆ ಪಾವತಿಸದ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಹಾಕಿದ BBMP ಅಧಿಕಾರಿಗಳು..!

ತೆರಿಗೆ ಪಾವತಿಸದ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಹಾಕಿದ BBMP ಅಧಿಕಾರಿಗಳು..!

ಬೆಂಗಳೂರು : ಸುಮಾರು 62 ಕೋಟಿಯಷ್ಟು ತೆರಿಗೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ ಬಿಬಿಎಂಪಿ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ಶಾಕ್ ನೀಡಿದ್ದಾರೆ.

ಬಿಗಿ ಪೊಲೀಸ್ ಭದ್ರತೆಯೊಂದಿಗೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್‌ಗೆ ಬೀಗ ಜಡಿದಿದ್ದಾರೆ. ಈ ಹಿಂದೆಯೂ ಹಲವು ಬಾರಿ ಮಾಲ್‌ಗೆ ಬಿಬಿಎಂಪಿ ಬೀಗ ಹಾಕಿತ್ತು. ಮಾಲ್‌ನವರು ಕೋರ್ಟ್ ಮೂಲಕ ಬೀಗ ಓಪನ್ ಮಾಡಿಸಿಕೊಂಡು ವ್ಯವಹಾರ ಮಾಡುತ್ತಿದ್ದರು. ‌

ಇಂದಿನಿಂದ ಭಾನುವಾರದ ವರೆಗೆ ಸಾಲು ಸಾಲು ರಜೆ ಇರುವುದರಿಂದ ಮಾಲ್‌ಗೆ ಹೆಚ್ಚಿನ ಗ್ರಾಹಕರು ಬರುವ ನಿರೀಕ್ಷೆ ಇತ್ತು. ಸದ್ಯ  ಮಾಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಬಂದು ಮಾಲ್​ ಹೊರಗಡೆ ನಿಂತು ಕಾಯುವ ಪರಿಸ್ಥಿತಿ ಎದುರಾಗಿದೆ. ಇಂದು ರಜೆ ದಿನವಾಗಿದ್ದರಿಂದ ಬೆಳಗ್ಗೆಯೇ ಮಾಲ್​ಗೆ ಬಂದಿದ್ದ ಗ್ರಾಹಕರಿಗೂ ನಿರಾಸೆಯಾಗಿದೆ.

ಮಾಲ್​ಗೆ ಬೀಗ ಹಾಕಿದ ಬಿಬಿಎಂಪಿ ಅಧಿಕಾರಿಗಳು ಯಾರೂ ಬರದಂತೆ ಸೂಚನೆ ನೀಡಿದ್ದಾರೆ. ಮಾಲ್ ಇವತ್ತು ಓಪನ್ ಆಗಬೇಕಾದರೆ ಬಾಕಿ ಉಳಿಸಿಕೊಂಡಿರುವ ತೆರಿಗೆ ಕಟ್ಟಲೇಬೇಕಾದ ಪರಿಸ್ಥಿತಿ ಇದೆ.

ಇದನ್ನೂ ಓದಿ : ರಾಜ್ಯದ ಪ್ರತಿ ಗೃಹಿಣಿಯರನ್ನು ಸಂಭ್ರಮಿಸೋಕೆ ಬಹುಮಾನಗಳನ್ನು ಹೊತ್ತು ಬರ್ತಿದೆ “ಸುವರ್ಣ ಗೃಹಮಂತ್ರಿ” ರಿಯಾಲಿಟಿ ಶೋ..!

Leave a Comment

DG Ad

RELATED LATEST NEWS

Top Headlines

ಅಭ್ಯರ್ಥಿ ಡಿಸೈಡ್ ಮಾಡೋದು ಬಿಜೆಪಿ ವರಿಷ್ಠರು ಮತ್ತು ನಾನು – ಯೋಗೇಶ್ವರ್​ಗೆ HDK ಟಾಂಗ್​​​..!

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ತೆರವಾಗಿರುವ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ನಡುವೆ ಚನ್ನಪಟ್ಟಣ

Live Cricket

Add Your Heading Text Here