Download Our App

Follow us

Home » ಮೆಟ್ರೋ » ಮಳೆಗಾಲದ ಆರಂಭದಲ್ಲೇ ಎಚ್ಚೆತ್ತ ಬಿಬಿಎಂಪಿ – ಶಿಥಿಲಾವಸ್ಥೆಯ ಕಟ್ಟಡಗಳ ತೆರವಿಗೆ BBMP ನೋಟಿಸ್..!

ಮಳೆಗಾಲದ ಆರಂಭದಲ್ಲೇ ಎಚ್ಚೆತ್ತ ಬಿಬಿಎಂಪಿ – ಶಿಥಿಲಾವಸ್ಥೆಯ ಕಟ್ಟಡಗಳ ತೆರವಿಗೆ BBMP ನೋಟಿಸ್..!

ಬೆಂಗಳೂರು : ಸಿಲಿಕಾನ್​​ ಸಿಟಿಯಲ್ಲಿ ಕಳೆದೆರಡು ದಿನಗಳಿಂದ ಎಲ್ಲೆಡೆ ಭಾರೀ ಮಳೆಯಾಗುತ್ತಿದೆ. ಇದೀಗ ಮಳೆಗಾಲದ ಆರಂಭದಲ್ಲೇ ಎಚ್ಚೆತ್ತ ಬಿಬಿಎಂಪಿ ಮಳೆ ಬಂದ್ರೆ ಬೀಳೋ ಶಿಥಿಲಾವಸ್ಥೆಯ ಕಟ್ಟಡಗಳ ತೆರವಿಗೆ ನೋಟಿಸ್ ಜಾರಿ ಮಾಡಿದೆ.

ಕಳೆದ ವರ್ಷ ಮಳೆ ಬಂದಾಗ 5ಕ್ಕೂ ಹೆಚ್ಚು ಕಟ್ಟಡ ಕುಸಿದಿದ್ದವು. ಈ ಬಾರಿ ಕಟ್ಟಡ ಕುಸಿತ ದುರಂತ ಸಂಭವಿಸದಂತೆ ಎಚ್ಚರಿಕೆವಹಿಸಿರುವ BBMP ನೀವಾಗಿ ಕಟ್ಟಡ ತೆರವು ಮಾಡಿ. ಇಲ್ಲದಿದ್ರೆ ಪಾಲಿಕೆ ತೆರವು ಮಾಡುತ್ತೆ ಎಂದು ಶಿಥಿಲ ಕಟ್ಟಡಗಳ ಮಾಲೀಕರಿಗೆ ನೋಟಿಸ್​ ನೀಡಿದೆ. ಆದರೆ ತೆರವಿನ ಖರ್ಚು BBMP ಮಾಲೀಕರಿಂದ ವಸೂಲಿ ಮಾಡಲಿದೆ.

ಇನ್ನು ಶಿಥಿಲಾವಸ್ಥೆಯ ಕಟ್ಟಡಗಳನ್ನು ಪಟ್ಟಿ ಮಾಡಿರುವ BBMP, ಬೆಂಗಳೂರಿನಲ್ಲಿ ಬರೋಬ್ಬರಿ 629 ಶಿಥಿಲ ಕಟ್ಟಡಗಲಿವೆ ಎಂದು ತಿಳಿಸಿವೆ. ಈಗಾಗಲೇ 67 ಕಟ್ಟಡಗಳನ್ನು ತೆರವು ಮಾಡಲಾಗಿದ್ದು, 423 ಕಟ್ಟಡ ಮಾಲೀಕರಿಗೆ ನೋಟಿಸ್​ ನೀಡಲಾಗಿದೆ. ಇನ್ನು ಶಿಥಿಲಾವಸ್ಥೆಯ ಕಟ್ಟಡಗಳ ತೆರವಿಗೆ ನೋಟಿಸ್ ಜಾರಿ ಮಾಡಿದರೂ ಮಾಲೀಕರು ತೆರವು ಗೊಳಿಸದೇ ಕಟ್ಟಡ ಬಿದ್ದು ಅನಾಹುತ ಸಂಭವಿಸಿದ್ರೆ ಮಾಲೀಕರೇ ಹೊಣೆ ಎಂದು ತಿಳಿಸಿದೆ.

ಎಷ್ಟು ಮನೆಗಳು ಡೇಂಜರ್​​ :

  • ಪೂರ್ವ ವಲಯ- 101 ಕಟ್ಟಡ
  • ಪಶ್ಚಿಮ ವಲಯ-160 ಕಟ್ಟಡ
  • ದಕ್ಷಿಣ ವಲಯ- 216 ಕಟ್ಟಡ
  • ಬೊಮ್ಮನಹಳ್ಳಿ- 11 ಕಟ್ಟಡ
  • ದಾಸರಹಳ್ಳಿ- 11 ಕಟ್ಟಡ
  • ಮಹಾದೇವಪುರ- 37 ಕಟ್ಟಡ
  • ರಾಜರಾಜೇಶ್ವರಿ ವಲಯ- 9 ಕಟ್ಟಡ
  • ಯಲಹಂಕ- 84 ಕಟ್ಟಡ

ಇದನ್ನೂ ಓದಿ : ಬೆಂಗಳೂರು : ವ್ಯಕ್ತಿಯ ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ಬರ್ಬರ ಹ*ತ್ಯೆ..!

Leave a Comment

DG Ad

RELATED LATEST NEWS

Top Headlines

ಅಭ್ಯರ್ಥಿ ಡಿಸೈಡ್ ಮಾಡೋದು ಬಿಜೆಪಿ ವರಿಷ್ಠರು ಮತ್ತು ನಾನು – ಯೋಗೇಶ್ವರ್​ಗೆ HDK ಟಾಂಗ್​​​..!

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ತೆರವಾಗಿರುವ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ನಡುವೆ ಚನ್ನಪಟ್ಟಣ

Live Cricket

Add Your Heading Text Here