ಬೆಂಗಳೂರು : 2024ನೇ ಸಾಲಿನ ವಿಶ್ವದ ಅತೀ ಹೆಚ್ಚು ಸಂಚಾರ ದಟ್ಟಣೆಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಪಡೆದುಕೊಂಡಿದ್ದು, ಟ್ರಾಫಿಕ್ ದಟ್ಟಣೆಯು ಪ್ರಪಂಚದಾದ್ಯಂತದ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ಗಂಟೆಗಳು ಕಳೆದು ಆರ್ಥಿಕ ಉತ್ಪಾದಕತೆ ಕಡಿಮೆಯಾಗುತ್ತದೆ ವಿಶ್ಲೇಷಿಸಲಾಗಿದೆ. ಇದರೊಂದಿಗೆ ಬ್ರಾಂಡ್ ಬೆಂಗಳೂರಿಗೆ ಟ್ರಾಫಿಕ್ ಸಮಸ್ಯೆ ಅಡ್ಡಿಯಾಗ್ತಿದ್ಯಾ ಎಂಬ ಪ್ರಶ್ನೆ ಮೂಡಿದೆ.
ಅಷ್ಟೇ ಅಲ್ಲದೇ, ದೇಶದಲ್ಲೇ ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರದ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ರೂಪಿಸಿದ ಟಾಪ್ ಟ್ರಾಫಿಕ್ ನಗರಗಳ 2023 ಪಟ್ಟಿಯಲ್ಲಿ, ಬೆಂಗಳೂರು 6ನೇ ಸ್ಥಾನ ಪಡೆದುಕೊಂಡಿದೆ. ವಿಶ್ವದ 387 ನಗರಗಳ ಪಟ್ಟಿ ಮಾಡಿ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಸಂಸ್ಥೆ ಸಮೀಕ್ಷೆ ಮಾಡಿದೆ.
ಬೆಂಗಳೂರು ಮಾತ್ರವಲ್ಲದೇ ಭಾರತದ ಎರಡು ನಗರಗಳು ಟಾಪ್ 10 ಪಟ್ಟಿಯಲ್ಲಿ ಪಡೆದುಕೊಂಡಿದ್ದು, ಬೆಂಗಳೂರಿಗೆ 6ನೇ ಸ್ಥಾನವಾದರೆ ಪುಣೆ 7ನೇ ಸ್ಥಾನದಲ್ಲಿದೆ. ಬೃಹತ್ ನಗರಗಳಲ್ಲಿ 10ಕಿ.ಮೀ ತಲುಪಲು ಎಷ್ಟು ಸಮಯ ತಗುಲುತ್ತದೆ ಎಂಬ ಅಂಶವನ್ನು ಅಧ್ಯಯನ ಮಾಡಿ ವರದಿ ತಯಾರಿಸಲಾಗಿದೆ. ಬೆಂಗಳೂರಿನಲ್ಲಿ 10ಕಿ.ಮೀ ತಲುಪಲು ಸರಾಸರಿ 28 ನಿಮಿಷ 10 ಸೆಕೆಂಡ್ ಹಾಗೂ ಪುಣೆ ಟ್ರಾಫಿಕ್ ನಲ್ಲಿ 27 ನಿಮಿಷ, 50 ಸೆಕೆಂಡ್ ಬೇಕು ಎಂದು ವರದಿಯಾಗಿದೆ.
ವಿಶ್ವದ ಟಾಪ್ ಟ್ರಾಫಿಕ್ ಹೊಂದಿರುವ ನಗರಗಳು
- ಲಂಡನ್ (ಯುಕೆ)
- ಡಬ್ಲಿನ್ (ಐರ್ಲೆಂಡ್)
- ಟೊರೊಂಟೋ (ಕೆನಡಾ)
- ಮಿಲನ್ (ಇಟಲಿ)
- ಲಿಮಾ (ಪೆರು)
- ಬೆಂಗಳೂರು (ಭಾರತ)
- ಪುಣೆ ( ಭಾರತ)
- ಬುಕಾರೆಸ್ಟ್ (ರೊಮೇನಿಯಾ)
ಇದನ್ನೂ ಓದಿ : ಇಶಾ ಫೌಂಡೇಶನ್ ವಿರುದ್ಧದ ಕೇಸ್ ವಜಾಗೊಳಿಸಿದ ಸುಪ್ರೀಂಕೋರ್ಟ್..!