Download Our App

Follow us

Home » ರಾಷ್ಟ್ರೀಯ » ಇಂದಿನಿಂದಲೇ ಅಯೋಧ್ಯೆಯಲ್ಲಿ ಬಾಲರಾಮನ ದರ್ಶನಕ್ಕೆ ಅವಕಾಶ – ಸಮಯದ ವಿವರ ಹೀಗಿದೆ..!

ಇಂದಿನಿಂದಲೇ ಅಯೋಧ್ಯೆಯಲ್ಲಿ ಬಾಲರಾಮನ ದರ್ಶನಕ್ಕೆ ಅವಕಾಶ – ಸಮಯದ ವಿವರ ಹೀಗಿದೆ..!

ಅಯೋಧ್ಯೆ : ವಿಶ್ವವೇ ಕಾತರದಿಂದ ಕಾಯುತ್ತಿದ್ದ ಅಯೋಧ್ಯೆಯ ಶ್ರೀರಾಮನ ಪ್ರತಿಷ್ಠಾಪನೆ ಕಾರ್ಯ ಪೂರ್ಣಗೊಂಡಿದೆ. ಇಂದಿನಿಂದ (23 ಜನವರಿ 2024) ರಾಮಮಂದಿರದಲ್ಲಿ ಭಕ್ತರು ಬಾಲರಾಮನ ದರ್ಶನ ಪಡೆದು ಕಣ್ತುಂಬಿಕೊಳ್ಳಬಹುದು. ದರ್ಶನಕ್ಕೆ ಸಮಯದ ವಿವರ ಹೀಗಿದೆ ನೋಡಿ.

ಬೆಳಗ್ಗೆ 7ರಿಂದ 11.30ರವರೆಗೆ – ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ದರ್ಶನ ಪಡೆಯಲು ನೀವು ಬೆಳಗಿನ ಹೊತ್ತು ಹೋಗುವವರಾಗಿದ್ದರೆ ಬೆಳಗ್ಗೆ 7ರಿಂದ ದರ್ಶನ ಭಾಗ್ಯ ಸಿಗಲಿದೆ. 7.00 ಗಂಟೆಗೆ ತೆರೆಯುವ ರಾಮನ ಮಂದಿರ 11.30ಕ್ಕೆ ಬಾಗಿಲು ಮುಚ್ಚಲಿದೆ.

ಮಧ್ಯಾಹ್ನ 2ರಿಂದ ರಾತ್ರಿ 7.00ರವರೆಗೆ – ಮಧ್ಯಾಹ್ನ ನಂತರದ ರಾಮಲಲ್ಲಾನ ದರ್ಶನಕ್ಕೂ ಸಮಯ ನಿಗದಿಯಾಗಿದ್ದು ಭಕ್ತರು ಮಧ್ಯಾಹ್ನ 2.00 ಗಂಟೆಯಿಂದ ರಾತ್ರಿ 7.00 ಗಂಟೆಯವರೆಗೆ ಬಾಲರಾಮನ ದರ್ಶನ ಪಡೆಯಬಹುದು. ಜೊತೆಗೆ ಅಕ್ಕಪಕ್ಕದಲ್ಲಿರುವ ಹನುಮಾನ್‌ಗಡಿ, ಸರಯೂ ನದಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಬಹುದು.

ದಿನಕ್ಕೆ ಮೂರು ಬಾರಿ ಬಾಲರಾಮನಿಗೆ ಆರತಿ ನಡೆಯುತ್ತೆ. ಪ್ರತಿದಿನ ಬೆಳಗ್ಗೆ 6.30ಕ್ಕೆ ಶೃಂಗಾರ ಆರತಿ, ಮಧ್ಯಾಹ್ನ 12 ಗಂಟೆಗೆ ಭೋಗಾರತಿ, ಸಂಜೆ ಸಂಧ್ಯಾ ಆರತಿ ನಡೆಯಲಿದೆ. ಆಫ್​ಲೈನ್​, ಆನ್​ ಲೈನ್​ ಎರಡರಲ್ಲೂ ಪಾಸ್​ ಪಡೆಯಬಹುದು. ಭಕ್ತರು ವೆಬ್​​ಸೈಟ್​ನಲ್ಲಿ ಬುಕಿಂಗ್​ ಮಾಡಿ ಟಿಕೆಟ್ ಪಡೆಯಲು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ವೆಬ್​ಸೈಟ್​ ಗೆ ಹೋಗಿ ಬುಕ್​ ಮಾಡಬೇಕು. ಟಿಕೆಟ್ ಬುಕ್​ ಮಾಡ್ತಿದ್ದಂತೆ OTP ಬರುತ್ತೆ.

ಮೈ ಫ್ರೊಫೈಲ್​ಗೆ ಹೋಗಿ ಆರತಿ, ದರ್ಶನ ಬುಕ್​ ಮಾಡಿಸಬಹುದು. ಅಗತ್ಯ ದಾಖಲೆಗಳನ್ನು ನೀಡಿ ಪ್ರವೇಶಕ್ಕೆ ಪಾಸ್​ ಪಡೆಯಬೇಕು. ನಂತರ ದೇಗುಲದ ಕೌಂಟರ್​​ನಲ್ಲಿ ಪಾಸ್ ಪಡೆದ ಮೇಲೆಯೇ ದರ್ಶನ ಅವಕಾಶ ಸಿಗಲಿದೆ. ಪಾಸ್​ನಲ್ಲಿರುವ QR ಕೋಡ್​ ಸ್ಕ್ಯಾನ್​ ಮಾಡಿದ ನಂತ್ರ ಎಂಟ್ರಿಗೆ ಅವಕಾಶ ಮಾಡಿಕೊಡಲಾಗುವುದು. ಬುಕ್​ ಮಾಡಿದ ದಿನವೇ ಖಾಲಿ ಇದ್ರೆ ಪಾಸ್​ ವಿತರಣೆ ಮಾಡುತ್ತಾರೆ. ಆರತಿ ಮಾಡಿಸುವುದಿದ್ದರೆ 30 ನಿಮಿಷ ಮುನ್ನ ಭಕ್ತರು ಮಂದಿರದ ಒಳಗಿರಬೇಕು.

ಇದನ್ನೂ ಓದಿ : ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : 5 ಕೋಟಿ ರೂ. ವ್ಯಾಜ್ಯ ಶುಲ್ಕವಾಗಿ ಕರ್ನಾಟಕಕ್ಕೆ ಪಾವತಿಸಲು ಆದೇಶ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here