Download Our App

Follow us

Home » ಸಿನಿಮಾ » ತೆರೆಮೇಲೆ ಅಬ್ಬರಿಸಿದ “ಬಘೀರ” – ಸೂಪರ್ ಹೀರೋ ಆದ ರೋರಿಂಗ್ ಸ್ಟಾರ್ ಶ್ರೀಮುರಳಿ..!

ತೆರೆಮೇಲೆ ಅಬ್ಬರಿಸಿದ “ಬಘೀರ” – ಸೂಪರ್ ಹೀರೋ ಆದ ರೋರಿಂಗ್ ಸ್ಟಾರ್ ಶ್ರೀಮುರಳಿ..!

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಿನಿಮಾಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
ಬಘೀರನಾಗಿ ಶ್ರೀ ಮುರಳಿ ರಗಡ್ ಪೊಲೀಸ್ ಅವತಾರದಲ್ಲಿ ಮಿಂಚಿದ್ದಾರೆ. ಆ ಖಾಕಿ ಗತ್ತು, ಕಡಿಮೆ ಮಾತು ಅವರ ಪ್ರಭಾವಳಿಯನ್ನ ಹೆಚ್ಚಿಸಿದೆ. ಪ್ರಕಾಶ್ ರಾಜ್, ಅವಿನಾಶ್, ರಾಣಾ ಪಾತ್ರವೂ ಮೈ ನಡುಗಿಸುತ್ತದೆ.

ಬಘೀರ ಸಿನಿಮಾದಲ್ಲಿ ಸೂಪರ್​ ಹೀರೋ ಕಥೆ ಇದೆ. ಜನರೆಲ್ಲ ಕಷ್ಟದಲ್ಲಿ ಇದ್ದಾಗ ಅವರನ್ನು ಕಾಪಾಡಲು ಬರುವ ಆಪದ್ಭಾಂದವನ ರೀತಿ ಇದೆ ‘ಬಘೀರ’ ಸಿನಿಮಾದ ಕಥಾನಾಯಕನ ಪಾತ್ರ. ಹಾಗಂತ ಈ ಪಾತ್ರ ಸ್ಪೈಡರ್​ ಮ್ಯಾನ್​ ರೀತಿ ವಿಶೇಷ ಶಕ್ತಿಯುಳ್ಳ ಸೂಪರ್ ಹೀರೋ ಅಲ್ಲ. ಬದಲಿಗೆ, ಬ್ಯಾಟ್​ಮ್ಯಾನ್ ರೀತಿ ಕೆಲವು ಸಾಧನಗಳನ್ನು ಬಳಸಿಕೊಂಡು ಜನರನ್ನು ಕಾಪಾಡುವ ಸೂಪರ್​ ಹೀರೋ. ಈತ ಜನರ ನಡುವೆ ಇರುವ ವ್ಯಕ್ತಿ. ಆತನಿಗೆ ಶಕ್ತಿಗಿಂತಲೂ ಜಾಸ್ತಿ ಇತಿ-ಮಿತಿಗಳು ಇರುತ್ತವೆ. ಅಂತಹ ಪಾತ್ರವನ್ನು ಇಟ್ಟುಕೊಂಡು ಸೂಪರ್​ ಹೀರೋ ಕಥೆ ಹೆಣೆಯುವುದು ಸವಾಲಿನ ಕೆಲಸ. ಅದನ್ನು ಪ್ರಶಾಂತ್ ನೀಲ್ ಮಾಡಿದ್ದಾರೆ.

ಶ್ರೀಮುರಳಿ ಅವರು ತಮ್ಮ ಮ್ಯಾನರಿಸಂ ಅನ್ನು ಸಂಪೂರ್ಣ ಬಿಟ್ಟುಕೊಟ್ಟಿಲ್ಲ. ಅದನ್ನು ಜೊತೆಯಲ್ಲಿ ಇಟ್ಟುಕೊಂಡೇ ಸ್ವಲ್ಪ ಹೊಸದಾಗಿ ಜನರನ್ನು ರಂಜಿಸಲು ಪ್ರಯತ್ನಿಸಿದ್ದಾರೆ. ಅನಗತ್ಯವಾದ ಬಿಲ್ಡಪ್​ಗಳಿಗೆ ಈ ಸಿನಿಮಾದಲ್ಲಿ ಜಾಗವಿಲ್ಲ. ಅದರ ಬದಲು ನೇರವಾಗಿ ಕಥೆ ಹೇಳಲು ನಿರ್ದೇಶಕರು ಹೆಚ್ಚು ಒತ್ತು ನೀಡಿದ್ದಾರೆ. ಯಾವುದೇ ಉದ್ದುದ್ದ ಡೈಲಾಗ್​ಗಳ ಬದಲು ಆ್ಯಕ್ಷನ್​ ಮೂಲಕವೇ ಶ್ರೀಮುರಳಿ ಅವರು ವಿಲನ್​ಗಳಿಗೆ ಉತ್ತರ ನೀಡುತ್ತಾರೆ. ಸ್ವಲ್ಪ ಸಮಯ ಪೊಲೀಸ್ ಅಧಿಕಾರಿಯಾಗಿ, ಇನ್ನುಳಿದ ಸಮಯ ಸೂಪರ್​ ಹೀರೋ ಆಗಿ ಅವರು ಮನರಂಜನೆ ನೀಡುತ್ತಾರೆ.

ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ಸೆಕೆಂಡ್​ ಹಾಫ್​ನಲ್ಲಿ ಸ್ವಲ್ಪ ಮಹತ್ವ ಸಿಕ್ಕಿದೆ. ತಮಗೆ ಸಿಕ್ಕಷ್ಟು ಅವಕಾಶವನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಗರುಡ ರಾಮ್ ಅವರು ಈ ಸಿನಿಮಾದ ಮುಖ್ಯ ವಿಲನ್. ಸೂಪರ್ ಹೀರೋಗೆ ಎದುರಾಗಿ ನಿಲ್ಲುವ ರಾಕ್ಷಸನಾಗಿ ಅವರು ಅಬ್ಬರಿಸಿದ್ದಾರೆ. ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾರಾಣಿ ಅವರಂತಹ ಹಿರಿಯ ಕಲಾವಿದರಿಂದಾಗಿ ಸಿನಿಮಾದ ತೂಕ ಹೆಚ್ಚಿದೆ.

ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಬಘೀರ ಸಿನಿಮಾಕ್ಕೆ, ನವೀನ್ ಕುಮಾರ್ ಛಾಯಾಗ್ರಹಣವಿದೆ. ಪ್ರಶಾಂತ್ ನೀಲ್ ಶಕ್ತಿಶಾಲಿ ಕಥೆ ಬರೆದಿದ್ದಾರೆ. ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಗಂದೂರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಬಘೀರ ಚಿತ್ರದಲ್ಲಿ ಪೊಲೀಸ್​​ ಅವತಾರದಲ್ಲಿ ಶ್ರೀಮುರಳಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ರುಕ್ಮಿಣಿ ವಸಂತ್‌ ನಟಿಸಿದರೆ, ಇನ್ನುಳಿದಂತೆ ಪ್ರಕಾಶ್‌ ರಾಜ್‌, ರಂಗಾಯಣ ರಘು, ಅಚ್ಯುತ್‌ ಕುಮಾರ್‌, ಗರುಡ ರಾಮ್ ಸೇರಿ ಇನ್ನೂ ಹತ್ತಾರು ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ : ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಪ್ರಶ್ನೆ ಇಲ್ಲವೇ ಇಲ್ಲ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ..!

Leave a Comment

DG Ad

RELATED LATEST NEWS

Top Headlines

ನಕಲಿ ನಕ್ಷೆ ಸೃಷ್ಟಿಸಿ ಕಟ್ಟಡ ನಿರ್ಮಾಣ – ಮಾಲೀಕನ ವಿರುದ್ಧ FIR ದಾಖಲು..!

ಬೆಂಗಳೂರು : ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜರಾಜೇಶ್ವರಿನಗರ

Live Cricket

Add Your Heading Text Here