ಬಾಗಲಕೋಟೆ : ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡ್ತಿದ್ದ ಖರ್ತನಾಕ್ ಗ್ಯಾಂಗ್ನ ಕಳ್ಳಿಯರನ್ನ ಶಹರ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಮೂಲದ ರೋಶನಿ ಚೌಗಲೆ, ರೇಣುಕಾ ವರಗಂಡೆ, ಸವಿತಾ ಲೋಂಡೆ ಈ ಮೂವರು ಬಂಧಿತ ಮಹಿಳೆಯರು.
ಬಂಧಿತ ಕಳ್ಳಿಯರು, ಆಗಸ್ಟ 19ರಂದು ಹಳೆ ಬಾಗಲಕೋಟೆಯ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಉಂಟಾಗುವ ರಶ್ ಸಮಯದಲ್ಲಿ ಚಿನ್ನಾಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ದರು. ಈ ಕುರಿತು ಬಾಗಲಕೋಟೆಯ ಶಹರ್ ಪೊಲೀಸ್ ಠಾಣೆಯಲ್ಲಿಕೇಸ್ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಳ್ಳಿಯರ ಗ್ಯಾಂಗ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 6 ಲಕ್ಷ ಮೌಲ್ಯದ 92 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ : ‘ಫಾರೆಸ್ಟ್’ನಲ್ಲಿ ಜಮ್ಮು-ಕಾಶ್ಮೀರದ ನಟ ಸುನೀಲ್ ಕುಮಾರ್..!
Post Views: 111