Download Our App

Follow us

Home » ಸಿನಿಮಾ » ‘ಫಾರೆಸ್ಟ್’ನಲ್ಲಿ ಜಮ್ಮು-ಕಾಶ್ಮೀರದ ನಟ ಸುನೀಲ್ ಕುಮಾರ್..!

‘ಫಾರೆಸ್ಟ್’ನಲ್ಲಿ ಜಮ್ಮು-ಕಾಶ್ಮೀರದ ನಟ ಸುನೀಲ್ ಕುಮಾರ್..!

ಎನ್.ಎಂ.ಕೆ ಸಿನಿಮಾಸ್ ಲಾಂಛನದಲ್ಲಿ ಎನ್.ಎಂ ಕಾಂತರಾಜ್ ನಿರ್ಮಾಣದ, ಚಂದ್ರ ಮೋಹನ್ ನಿರ್ದೇಶನದ ‘ಫಾರೆಸ್ಟ್’ ಸಿನಿಮಾ ತನ್ನ ಟೈಟಲ್, ತಾರಾಗಣ ಹಾಗೂ ಕಾನ್ಸೆಪ್ಟ್ ಕಾರಣದಿಂದಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಇದೀಗ ಈ ಸಿನಿಮಾದ ಬಗ್ಗೆ ಹೊಸ ಅಪ್​ಡೇಟ್ ಸಿಕ್ಕಿದೆ.

ಅಡ್ವೆಂಚರಸ್ ಕಾಮಿಡಿ ಕಥಾಹಂದರ ಒಳಗೊಂಡ “ಫಾರೆಸ್ಟ್” ಚಿತ್ರದಲ್ಲಿ, ಜಮ್ಮು – ಕಾಶ್ಮೀರದಲ್ಲಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕಲಾವಿದನಾಗೂ ಗುರುತಿಸಿಕೊಂಡಿರುವ ಸುನೀಲ್ ಕುಮಾರ್ ಅಭಿನಯಿಸಿದ್ದಾರೆ.

ಹೌದು, 7.8. ಅಡಿ ಎತ್ತರವಿರುವ ಸುನೀಲ್ ಕುಮಾರ್ ಅವರನ್ನು ಅಲ್ಲಿನವರು “ದಿ ಗ್ರೇಟ್ ಕಲಿ ಆಫ್ ಜಮ್ಮು” ಎಂದು ಕರೆಯುತ್ತಾರೆ. ಬಾಲಿವುಡ್ ನ “ಸ್ಟ್ರೀ 2” ಚಿತ್ರದಲ್ಲಿ ಸರ್ಕಟ ಎಂಬ ಮುಖ್ಯ ಖಳನಟನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಯಶ್ ಅಭಿನಯದ ಚಿತ್ರದಲ್ಲಿ ನಟಿಸುವ ಮಾತುಕತೆ ಕೂಡ ನಡೆಯುತ್ತಿದೆ ಎಂದು ಸಂದರ್ಶನವೊಂದರಲ್ಲಿ ಸುನೀಲ್ ಕುಮಾರ್ ಹೇಳಿಕೊಂಡಿದ್ದಾರೆ.

ಪ್ರಸ್ತುತ ಸುನೀಲ್ ಕುಮಾರ್ ಅವರು “ಫಾರೆಸ್ಟ್” ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌‌‌.‌ ಏಳು ದಿನಗಳ ಕಾಲ ಸಾಹಸ ನಿರ್ದೆಶಕ ರವಿವರ್ಮ ಅವರ ಸಾಹಾಸ ಸಂಯೋಜನೆಯಲ್ಲಿ “ಫಾರೆಸ್ಟ್” ನಲ್ಲೇ ನಡೆದ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಸುನೀಲ್ ಕುಮಾರ್ ಭಾಗವಹಿಸಿದ್ದರು. ಅತೀ ಎತ್ತರವಿರುವ ಕಾರಣ ತೆರೆದ ಜೀಪ್​​ನಲ್ಲೇ ಇವರು ಪಯಣಿಸುತ್ತಿದ್ದರು. ವಿಮಾನ ಮುಂತಾದವುಗಳಲ್ಲಿ ಪಯಣಿಸುವಾಗಲೂ ಇವರಿಗೆ ಎರಡು ಟಿಕೇಟ್ ಬುಕ್ ಮಾಡಲಾಗುತ್ತಿತ್ತು ಎಂದು ನಿರ್ದೇಶಕ ಚಂದ್ರಮೋಹನ್ ತಿಳಿಸಿದ್ದಾರೆ.

ಫಾರೆಸ್ಟ್ ಸಿನಿಮಾವನ್ನು  ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎನ್.ಎಂ. ಕಾಂತರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಬಗ್ಗೆ ವಿಶೇಷ ಒಲವಿರುವ ನಿರ್ಮಾಪಕರು ಯಾವುದೇ ಕೊರತೆ ಬಾರದಂತೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. “ಡಬಲ್ ಇಂಜಿನ್” ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಚಂದ್ರಮೋಹನ್ ನಿರ್ದೇಶನ ಮಾಡಿದ್ದಾರೆ. ಚಂದ್ರಮೋಹನ್ ಹಾಗೂ ಸತ್ಯಶೌರ್ಯ ಸಾಗರ್ “ಫಾರೆಸ್ಟ್” ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದು, ಸತ್ಯಶೌರ್ಯ ಸಾಗರ್ ಸಂಭಾಷಣೆ ಬರೆದಿದ್ದಾರೆ.

ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಇನ್ನು ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಮುಂತಾದವರು “ಫಾರೆಸ್ಟ್” ಚಿತ್ರದ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ : ಡಿಸಿಎಂ ಡಿಕೆ ಶಿವಕುಮಾರ್​ಗೆ ಬಿಗ್ ರಿಲೀಫ್ – CBI ತನಿಖೆ ಕುರಿತ ಅರ್ಜಿ ವಜಾಗೊಳಿಸಿದ ಹೈಕೋರ್ಟ್..!

Leave a Comment

DG Ad

RELATED LATEST NEWS

Top Headlines

ಕಾಸ್ಟಿಂಗ್​​ ಕೌಚ್​ ಸುನಾಮಿ – ಇಂದು ಮಹಿಳಾ ಆಯೋಗದಿಂದ ಫಿಲ್ಮ್​​ ಚೇಂಬರ್​​ನಲ್ಲಿ ಮೆಗಾ ಮೀಟಿಂಗ್​..!

ಬೆಂಗಳೂರು : ಈಗಾಗಲೇ ಮಾಲಿವುಡ್‌ನಲ್ಲಿ ಹೇಮಾ ವರದಿ ಸುನಾಮಿ ಎಬ್ಬಿಸಿದ್ದು, ಕೇರಳದಲ್ಲಿ ಎದ್ದಿರೋ ಈ ಸುನಾಮಿ ಈಗ ಸ್ಯಾಂಡಲ್​ವುಡ್​​​ಗೂ ಬಂದಪ್ಪಳಿಸುವಂತಿದೆ. ಫಿಲ್ಮ್ ಚೇಂಬರ್‌ನಲ್ಲಿ ಇಂದು ಮೆಗಾ ಮೀಟಿಂಗ್

Live Cricket

Add Your Heading Text Here