ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬೆಲ್ಲಾ ಸುದ್ದಿ ಹರಿದಾಡುತ್ತಿತ್ತು. ಆದ್ರೆ ಈ ಬಗ್ಗೆ ಕುಟುಂಬಸ್ಥರು ಯಾವುದೇ ಮಾಹಿತಿ ನೀಡಿರಲ್ಲಿಲ್ಲ. ಇದೀಗ ಅವಿವಾ ಬಿದ್ದಪ್ಪ ಅವರ ಸೀಮಂತ ಶಾಸ್ತ್ರದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಮೂಲಕ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಪ್ಪ ಆಗೋ ಸಂಭ್ರಮದಲ್ಲಿದ್ದಾರೆ ಎಂಬ ಸುದ್ದಿ ಖಚಿವಾಗಿದೆ.
ಹೌದು, ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ಗರ್ಭಿಣಿಯಾಗಿದ್ದು, ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಅವರು ಸದ್ಯದಲ್ಲೇ ಅಜ್ಜಿಯಾಗಲಿದ್ದಾರೆ. ಇನ್ನು ಸುಮಲತಾ ಅಂಬರೀಶ್ ಕುಟುಂಬಕ್ಕೆ ಮತ್ತೊಂದು ಹೊಸ ಅತಿಥಿಯ ಆಗಮನವಾಗಲಿದೆ ಎಂದು ಕೆಲವು ದಿನಗಳಿಂದ ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಯಾವುದೇ ಕ್ಲಾರಿಟಿ ಇರಲಿಲ್ಲ.
ಇದೀಗ ವೈರಲ್ ಆಗಿರು ಸೀಮಂತ ಶಾಸ್ತ್ರದ ಫೋಟೋದಲ್ಲಿ ಅವಿವಾ ಬಿದ್ದಪ್ಪ ಅವರು ಹಸಿರು ಮತ್ತು ಚಿನ್ನದ ಬಣ್ಣದ ಸೀರೆಯಲ್ಲಿ ಮಿಂಚಿದ್ದು, ಬೇಬಿ ಬಂಪ್ ಕೂಡ ಕಾಣಿಸುತ್ತಿದೆ. ಅವಿವಾ ಬಿದ್ದಪ್ಪ ಅವರ ಸೀಮಂತ ಶಾಸ್ತ್ರವು ಆಗಸ್ಟ್ 15ರಂದು ನೆರವೇರಿದೆ ಎಂದು ಹೇಳಲಾಗುತ್ತಿದೆ.
ಇನ್ನು ಅವಿವಾ ಬಿದ್ದಪ್ಪ ಅವರ ಸೀಮಂತ ಶಾಸ್ತ್ರ ಅಂಬಿ ನಿವಾಸದಲ್ಲೇ ನೇರವೇರಿದೆ ಎಂದು ತಿಳಿದುಬಂದಿದೆ. ಈ ಸೀಮಂತಶಾಸ್ತ್ರದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಸೇರಿ ಹಲವು ಮಂದಿ ಭಾಗಿಯಾಗಿದ್ದು, ಕೆಲವೇ ಕೆಲವು ಫೋಟೋಗಳು ಮಾತ್ರ ವೈರಲ್ ಆಗುತ್ತಿದೆ. ಇನ್ನು ಅಕ್ಟೋಬರ್ ವೇಳೆಗೆ ಅಭಿಷೇಕ್ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ‘ಪೀಟರ್’ ಜೊತೆ ಬಂದ ಸುಕೇಶ್ ಶೆಟ್ಟಿ..ದೂರದರ್ಶನ ನಿರ್ದೇಶಕರ ಹೊಸ ಚಿತ್ರಕ್ಕೆ ಡಾಲಿ ಧನಂಜಯ್-ವಿಜಯ್ ಸೇತುಪತಿ ಸಾಥ್..!