ಬೆಂಗಳೂರು : ಗೂಂಡಾ ಕಾಯ್ದೆಯಡಿ ಅಶೋಕ್ ಕುಮಾರ್ ಅಡಿಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಶೋಕ್ ಕುಮಾರ್ ಅಡಿಗ ವಿರುದ್ಧ 12 ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದೆ. ಇದೀಗ ಬಸವೇಶ್ವರನಗರ ಪೊಲೀಸರು ಅಡಿಗ ವಿರುದ್ದ ಗೂಂಡಾಕಾಯ್ದೆ ಜಾರಿಮಾಡಿದ್ದಾರೆ.
ಅಶೋಕ್ ಕುಮಾರ್ ಅಡಿಗ ಇಸ್ಪಿಟ್ ಕ್ಲಬ್ ನಡೆಸಲು ಅಸೋಸಿಯೇಷನ್ ಮಾಡಿದ್ದ. ಕಳೆದ ಎರಡು ವರ್ಷದ ಹಿಂದೆ ಅಡಿಗ ಮಾತಾಡಿದ್ದ ಆಡಿಯೋ ಭಾರಿ ವೈರಲ್ ಆಗಿತ್ತು. ಬೆಂಗಳೂರಿನಲ್ಲಿ ಇಸ್ಪಿಟ್ ಕ್ಲಬ್ ನಡೆಸುವ ಬಗ್ಗೆ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿ ಅಶೋಕ್ ಕುಮಾರ್ ಅಡಿಗನ ಮೇಲೆ ಎಫ್ಐಆರ್ ಕೂಡ ದಾಖಲಾಗಿತ್ತು.
ಅಶೋಕ್ ಕುಮಾರ್ ಅಡಿಗ ವಿರುದ್ಧ ಗ್ಯಾಬ್ಲಿಂಗ್, ಮನಿ ಲಾಂಡ್ರಿಂಗ್ ಹಾಗೂ ವಂಚನೆ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನಲ್ಲಿ 12 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದ ಹಿನ್ನೆಲೆ ಇದೀಗ ಗೂಂಡಾ ಕಾಯ್ದೆಯಡಿ ಅಶೋಕ್ ಕುಮಾರ್ ಅಡಿಗನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಕೇಂದ್ರ ಸಚಿವ ವಿ.ಸೋಮಣ್ಣ ಇಂದು ಸಂಜೆ ಬೆಂಗಳೂರಿಗೆ ಎಂಟ್ರಿ..!
Post Views: 117