Download Our App

Follow us

Home » ಅಪರಾಧ » ಪೋಕ್ಸೋ ಕೇಸ್​ನಲ್ಲಿ ವಾರೆಂಟ್ ಜಾರಿ : ಯಾವುದೇ ಕ್ಷಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅರೆಸ್ಟ್..!

ಪೋಕ್ಸೋ ಕೇಸ್​ನಲ್ಲಿ ವಾರೆಂಟ್ ಜಾರಿ : ಯಾವುದೇ ಕ್ಷಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅರೆಸ್ಟ್..!

ಬೆಂಗಳೂರು : ಪೋಕ್ಸೊ ಕೇಸ್​ನಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪಗೆ ಕೋರ್ಟ್​ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಯಾವುದೇ ಕ್ಷಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅರೆಸ್ಟ್​​ ಆಗಲಿದ್ದಾರೆ.

ಪೋಕ್ಸೋ ಕೇಸ್​ನಲ್ಲಿ ಯಡಿಯೂರಪ್ಪಗೆ ಅರೆಸ್ಟ್​ ವಾರಂಟ್​​ ಜಾರಿಯಾಗಿದ್ದು, ಫಾಸ್ಟ್​​ಟ್ರ್ಯಾಕ್ ಕೋರ್ಟ್​ನಿಂದ ಅರೆಸ್ಟ್​ ವಾರಂಟ್​ ಆದೇಶ ನೀಡಿದ್ದಾರೆ. ಯಡಿಯೂರಪ್ಪಗೆ ಕೋರ್ಟ್​ ಜಾಮೀನು ರಹಿತ ವಾರೆಂಟ್​​ ಜಾರಿ ಮಾಡಿದ್ದು, 1ನೇ ತ್ವರಿತಗತಿ ನ್ಯಾಯಾಲಯ ಆದೇಶ ಹೊರಡಿಸಿದೆ. ಫಾಸ್ಟ್​​ಟ್ರ್ಯಾಕ್ ಕೋರ್ಟ್​ನಿಂದ ಅರೆಸ್ಟ್​ ವಾರಂಟ್​ ಆದೇಶ ಬಂದಿದೆ. 2024ರ ಮಾರ್ಚ್​ನಲ್ಲಿ ಬಿಎಸ್​ವೈ ವಿರುದ್ಧ ಪೋಕ್ಸೋ ಕೇಸ್​ ದಾಖಲಾಗಿತ್ತು. ನಿನ್ನೆಯಿಂದಲೂ ನಾಪತ್ತೆಯಾಗಿರುವ ಯಡಿಯೂರಪ್ಪ ಅವರನ್ನು ಅರೆಸ್ಟ್​​​ ಮಾಡಲು CID ಹುಡುಕಾಟ ನಡೆಸುತ್ತಿದೆ.

ಬಿಎಸ್​ ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗದ ಹಿನ್ನೆಲೆ ಜಾಮೀನು ರಹಿತ ​ವಾರಂಟ್ ಹೊರಡಿಸಲು ಪೊಲೀಸರು ನಿನ್ನೆ ತ್ವರಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ವಾರಂಟ್ ಜಾರಿಯಾಗಿದ್ದು, ಯಾವುದೇ ಕ್ಷಣದಲ್ಲಿ ಪೊಲೀಸರು ಬಿಎಸ್​ ಯಡಿಯೂರಪ್ಪನವರನ್ನು ಬಂಧಿಸಲಿದ್ದಾರೆ.

Leave a Comment

DG Ad

RELATED LATEST NEWS

Top Headlines

ಚಿತ್ರದುರ್ಗದಲ್ಲಿ ಖಾಸಗಿ ಬಸ್ಸನ್ನೇ ಕದ್ದು ಎಸ್ಕೇಪ್ ಆಗಿರೋ ಖತರ್ನಾಕ್ ಕಳ್ಳರು..!

ಚಿತ್ರದುರ್ಗ : ಖಾಸಗಿ ಬಸ್​​ವೊಂದನ್ನು ಕದ್ದು ಕಳ್ಳರು ಎಸ್ಕೇಪ್ ಆಗಿರುವ ಘಟನೆ ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ನಾಯಕನಹಟ್ಟಿ ಮೂಲದ SRE ಬಸ್ ಮಾಲೀಕ ಸಯ್ಯದ್

Live Cricket

Add Your Heading Text Here