Download Our App

Follow us

Home » ಮೆಟ್ರೋ » ಬೆಂಗಳೂರಲ್ಲಿ ವಾಲಿದ ಮತ್ತೊಂದು ಕಟ್ಟಡ – ತೆರವಿಗೆ ಬಿಬಿಎಂಪಿ ಅಧಿಕಾರಿಗಳ ಸೂಚನೆ..!

ಬೆಂಗಳೂರಲ್ಲಿ ವಾಲಿದ ಮತ್ತೊಂದು ಕಟ್ಟಡ – ತೆರವಿಗೆ ಬಿಬಿಎಂಪಿ ಅಧಿಕಾರಿಗಳ ಸೂಚನೆ..!

ಬೆಂಗಳೂರು : ಹೆಣ್ಣೂರು ಮುಖ್ಯರಸ್ತೆಯಲ್ಲಿರುವ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು, 8 ಜನರು ಮೃತಪಟ್ಟ ಘಟನೆ ನಡೆದಿತ್ತು. ಈ ಘಟನೆ ಬೆನ್ನಲ್ಲೇ ಬೆಂಗಳೂರಲ್ಲಿ ಮತ್ತೊಂದು ಕಟ್ಟಡ ವಾಲಿಕೊಂಡಿದೆ.

ಹೊರಮಾವು ನಂಜಪ್ಪ ಗಾರ್ಡನ್​ನಲ್ಲಿರು ನಿರ್ಮಾಣ ಹಂತದಲ್ಲಿರುವ 6 ಅಂತಸ್ತಿನ ಕಟ್ಟಡ ವಾಲಿರುವುದು ಕಂಡು ಬಂದಿದೆ. ಕಟ್ಟಡ ತೆರವಿಗೆ ಬಿಬಿಎಂಪಿ ಅಧಿಕಾರಿಗಳ ಸೂಚನೆ ನೀಡಿದ್ದಾರೆ. 12/30 ಸೈಟ್​ನಲ್ಲಿ 6 ಫ್ಲೋರ್​​​​​​ ಬಿಲ್ಡಿಂಗ್ ಬಲಭಾಗಕ್ಕೆ ವಾಲಿದೆ.

ಇನ್ನು ಬಿಬಿಎಂಪಿ ನಡೆಸಿದ ಸರ್ವೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಬೆಂಗಳೂರಿನಲ್ಲಿ 170 ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ ಎಂಬುದು ತಿಳಿದು ಬಂದಿದೆ. ಶಿಥಿಲಾವಸ್ಥೆಯ ಕಟ್ಟಡ ಕೆಡವಲು ವರ್ಷಗಳಿಂದಲೂ ಮೀನಾಮೇಷ ಎಣಿಸುತ್ತಿರುವುದರಿಂದ, ಶಿಥಿಲ ಕಟ್ಟಡಗಳು ವರ್ಷಕ್ಕೊಂದರಂತೆ ನೆಲಕ್ಕುರುಳುತ್ತಿವೆ. ಅಷ್ಟೇ ಅಲ್ಲದೆ ಶಿಥಿಲ ಕಟ್ಟಡಗಳು ನೆಲಕ್ಕುರುಳುವುದರಿಂದ ಪ್ರಾಣ ಬಲಿತೆಗೆದುಕೊಂಡು ಅಪಾರ ನಷ್ಟಕ್ಕೂ ಕಾರಣವಾಗುತ್ತಿವೆ.

ಇದನ್ನೂ ಓದಿ : ಚನ್ನಪಟ್ಟಣ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಿ.ಪಿ ಯೋಗೇಶ್ವರ್​..!

Leave a Comment

DG Ad

RELATED LATEST NEWS

Top Headlines

‘S/O ಮುತ್ತಣ್ಣ’ ಚಿತ್ರದ ಟೀಸರ್ ರಿಲೀಸ್.. ಪ್ರಣಮ್​​ ದೇವರಾಜ್ ಚಿತ್ರಕ್ಕೆ ಶಿವಣ್ಣ ಸಾಥ್..!

ದೇವರಾಜ್ ಎರಡನೇ ಪುತ್ರ ಯಂಗ್ ಡೈನಾಮಿಕ್ ಪ್ರಣಮ್​​ ದೇವರಾಜ್ ನಾಯಕನಾಗಿ ನಟಿಸಿರುವ ಸಿನಿಮಾ ‘S/O ಮುತ್ತಣ್ಣ’ ಸೆಟ್ಟೇರಿದ ದಿನದಿಂದಲೂ ಟೈಟಲ್ ಹಾಗೂ ಕಥಾಹಂದರದ ಮೂಲಕವೇ ಕುತೂಹಲ ಹೆಚ್ಚಿಸಿದೆ.

Live Cricket

Add Your Heading Text Here