‘ಬಿಗ್ ಬಾಸ್ ಕನ್ನಡ 11′ ಕಾರ್ಯಕ್ರಮದಲ್ಲಿ 3ನೇ ವಾರ ಜಗದೀಶ್ ಅವರನ್ನ ತಳ್ಳಿದ್ದಕ್ಕೆ ರಂಜಿತ್ ದೊಡ್ಮನೆಯಿಂದ ಹೊರ ಬಂದಿದ್ದರು. ಇದಾಗಿ ಜಸ್ಟ್ 1 ವಾರ ಕಳೆದಿದೆ ಅಷ್ಟೇ. ಅಷ್ಟು ಬೇಗ ಮತ್ತೊಂದು ತಳ್ಳಾಟದ ಪ್ರಸಂಗವೊಂದು ಬಿಗ್ ಬಾಸ್ ಮನೆಯಲ್ಲಿ ನಡೆದಿದೆ.
ಹೌದು, ಬಿಗ್ ಬಾಸ್ ಮನೆಯ ಸದಸ್ಯರನ್ನು ಎರಡು ರಾಜಕೀಯ ಪಕ್ಷಗಳನ್ನಾಗಿ ವಿಂಗಡಿಸಿ ರಾಜಕೀಯದ ಟಾಸ್ಕ್ ನೀಡಿದ್ದಾರೆ. ಮನೆಯಲ್ಲಿ ಪಕ್ಷ ರಾಜಕೀಯದ ಹವಾ ಜೋರಾಗಿರುವ ಸಂದರ್ಭದಲ್ಲಿಯೇ ಮಂಜ ಅವರು ಮೀತಿ ಮೀರಿ ಆಟ ಆಡಿದ್ದಾರೆ. ಆಡುವ ಭರದಲ್ಲಿ ಮಾನಸ ಅವರನ್ನು ದೂಡಿದ್ದಾರೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಉಗ್ರಂ ಮಂಜು ಅವರು ಮಾನಸ ಅವರನ್ನು ತಳ್ಳಿರುವ ವಿಡಿಯೋ ವೈರಲ್ ಆಗಿದೆ. ಉಗ್ರಂ ಮಂಜು ಅವರು ಆಟ ಆಡುವಾಗ ತಮ್ಮ ಮುಂದೆ ಇರುವ ಎದುರ ಪಾರ್ಟಿ ವಿರುದ್ಧ ಕೂಗಾಡುತ್ತಿದ್ದರು. ಅದೇ ವೇಳೆಗೆ ಹಿಂದಿನಿಂದ ಬಂದ ಮಾನಸ ಅವರನ್ನು ತಳ್ಳಿದ್ದಾರೆ.
ಮಾನಸ ಅವರ ಕಿಬ್ಬೊಟ್ಟೆಗೆ ಉಗ್ರಂ ಮಂಜು ಅವರ ಮೊಣಕೈ ತಾಗಿ ನೋವಿನಿಂದ ಕಣ್ಣಿರೀಟ್ಟಿದ್ದಾರೆ. ಮಂಜು ಅವರು ತಳ್ಳಿದ ವೇಗಕ್ಕೆ ಮಾನಸ ಅವರಿಗೆ ನೋವಾಗಿದೆ. ಮಾನಸ ಏನು ಮಾತನಾಡದೇ ಸೈಡ್‌ಗೆ ಹೋಗಿ ಕಣ್ಣೀರಿಟ್ಟಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಕೆಲವರು ಉಗ್ರಂ ಮಂಜು ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನೂ ಕೆಲವರು ಉಗ್ರಂ ಮಂಜು ಅವರು ಉದ್ಧೇಶ ಪೂರ್ವಕವಾಗಿ ಹೀಗೆ ಮಾಡಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಉಗ್ರಂ ಮಂಜು ಅವರು ಮನೆಯಿಂದ ಹೊರಗೆ ಹೋಗಲೇ ಬೇಕು ಎಂದು ಕಮೆಂಟ್ ಮಾಡಿದ್ದಾರೆ. ಮತ್ತುಳಿದವರು ಮಾನಸ ಅವರಿಗೆ ಮೋಸ ಆಗಿದೆ, ನ್ಯಾಯ ಬೇಕು ಎಂದು ಕಮೆಂಟ್ ಮಾಡಿದ್ದಾರೆ. ಹೀಗಾಗಿ ಬಿಗ್ ಬಾಸ್ನಿಂದ ಇಂದೇ ಉಗ್ರಂ ಮಂಜು ಹೊರ ಬರ್ತಾರಾ ಎಂಬ ಚರ್ಚೆ ಜೋರಾಗೆ ನಡೆಯುತ್ತಿದೆ.
ಇದನ್ನೂ ಓದಿ : ಲೈಂಗಿಕ ದೌರ್ಜನ್ಯ ಆರೋಪ – ಎಸಿಪಿ ಚಂದನ್ ವಿರುದ್ದ ತನಿಖೆ ಆದೇಶಿಸಿದ ಮಾನವ ಹಕ್ಕುಗಳ ಆಯೋಗ..!