Download Our App

Follow us

Home » ಅಪರಾಧ » ಪ್ರಜ್ವಲ್​ ರೇವಣ್ಣ ವಿರುದ್ಧ ಮತ್ತೊಂದು FIR – ಇದೇ ಕೇಸ್​​ನಲ್ಲಿ ಮಾಜಿ MLA ಪ್ರೀತಂಗೌಡಗೆ ಅರೆಸ್ಟ್ ಭೀತಿ..!

ಪ್ರಜ್ವಲ್​ ರೇವಣ್ಣ ವಿರುದ್ಧ ಮತ್ತೊಂದು FIR – ಇದೇ ಕೇಸ್​​ನಲ್ಲಿ ಮಾಜಿ MLA ಪ್ರೀತಂಗೌಡಗೆ ಅರೆಸ್ಟ್ ಭೀತಿ..!

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸಿಐಡಿ ಕಸ್ಟಡಿಯಲ್ಲಿದ್ದ ಪ್ರಜ್ವಲ್​ ರೇವಣ್ಣ ಮತ್ತೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಪ್ರಜ್ವಲ್​ ರೇವಣ್ಣ ವಿರುದ್ಧ ಮತ್ತೊಂದು FIR ದಾಖಲಾಗಿದೆ. ಮಾಜಿ ಸಂಸದ ಪ್ರಜ್ವಲ್​​ಗೆ ಇದು 4ನೇ FIR ಸಂಕಷ್ಟವಾಗಿದ್ದು, ಇದೇ ಕೇಸ್​ನಲ್ಲಿ ಮಾಜಿ MLA ಪ್ರೀತಂಗೌಡಗೆ ಅರೆಸ್ಟ್ ಭೀತಿ ಎದುರಾಗಿದೆ.

ಪ್ರಜ್ವಲ್,ಕಿರಣ್, ಶರತ್, ಪ್ರೀತಮ್‌ಗೌಡ ಆರೋಪಿಗಳು. IPC-354(a), 354(d), 354(b), 506, 66(e) ಐಟಿ ಆ್ಯಕ್ಟ್​ ಅಡಿ CID ಕೇಸ್​ ದಾಖಲಾಗಿದೆ. ಲೈಂಗಿಕ ದೌರ್ಜನ್ಯ ಆರೋಪದಡಿ ಕೇಸ್, ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಮಾಡಿ ಶೇರ್ ಮಾಡಿರುವ ಆರೋಪ ಕೂಡ ಇದೆ. ಈ ಬಗ್ಗೆ ಕಳೆದ ವಾರ ಸಿಐಡಿಯಲ್ಲಿ ಕೇಸ್ ದಾಖಲಾಗಿತ್ತು, ನಂತರ ವಿಡಿಯೋ ಕಾನ್ಫರೆನ್ಸ್​ ವಿಚಾರಣೆ ವೇಳೆ ಜಡ್ಜ್ 4ನೇ FIR ಬಗ್ಗೆ ಮಾಹಿತಿ ನೀಡಿದ್ದಾರೆ.

ನಿಮ್ಮ ಮೇಲೆ ಮತ್ತೊಂದು FIR ಆಗಿದೆ ಎಂದು ಜಡ್ಜ್​ ಮಾಹಿತಿ ನೀಡಿದ್ದು, ಮತ್ತೊಂದು FIR ಬಗ್ಗೆ ಸುದ್ದಿ ತಿಳಿದು ಪ್ರಜ್ವಲ್ ಆತಂಕಕ್ಕೊಳಗಾಗಿದ್ದಾರೆ. SIT ಅಧಿಕಾರಿಗಳು 42 ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಪ್ರಕರಣದಲ್ಲಿ‌ ಪೊಲೀಸರು ಮತ್ತೆ ಬಾಡಿ ವಾರೆಂಟ್ ಸಲ್ಲಿಸಿದ್ದಾರೆ. ಬಾಡಿ ವಾರೆಂಟ್​ ಮೇಲೆ ಪೊಲೀಸರು ಪ್ರಜ್ವಲ್​​ನ್ನು​​ ವಶಕ್ಕೆ ಕೇಳಿದ್ದಾರೆ.

ಇದನ್ನೂ ಓದಿ : ದರ್ಶನ್​​ ಕೈದಿ ನಂಬರ್​​ 6106 : ಇದೇ ಲಕ್ಕಿ ನಂಬರ್ ಎಂದು ಗಾಡಿ ಮೇಲೆ ಬರೆಸಿಕೊಂಡ ಅಭಿಮಾನಿ..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here