ಬೆಂಗಳೂರು : ಸ್ಯಾಂಡಲ್ವುಡ್ ನಟ ದರ್ಶನ್ ವಿರುದ್ಧ ಒಕ್ಕಲಿಗರ ಆಕ್ರೋಶ ಭುಗಿಲೆದ್ದಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರಿಗೆ ತಗಡು ಎಂದಿದ್ದಕ್ಕೆ ಒಕ್ಕಲಿಗ ನಾಯಕರು ದರ್ಶನ್ ನಿವಾಸಕ್ಕೆ ಮುತ್ತಿಗೆ ಹಾಕಲು ಸಜ್ಜಾಗಿದ್ದಾರೆ.
ಕಾಟೇರ ಸಿನಿಮಾದ ಕಥೆ ಬರೆಯಿಸಿದ್ದು ನಾನು, ಅದು ನನ್ನದೇ ಟೈಟಲ್ ಎಂದು ಉಮಾಪತಿ ಗೌಡ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಕ್ಕೆ ಉತ್ತರ ಎನ್ನುವಂತೆ ಕಾಟೇರ ಸಿನಿಮಾದ ಐವತ್ತನೇ ದಿನದ ಸಂಭ್ರಮದಲ್ಲಿ ದರ್ಶನ್ ತಿರುಗೇಟು ನೀಡಿದ್ದರು. ಅಲ್ಲದೇ, ತಗಡು ಮತ್ತು ಪ್ರತಿ ಬಾರಿ ಯಾಕೆ ನಮ್ಮಿಂದ ಗುಮ್ಮಿಸ್ಕೋಳ್ತಿಯಾ ಎನ್ನುವ ಮಾತುಗಳನ್ನು ಆಡಿದ್ದರು. ಹಾಗಾಗಿ ನಟ ದರ್ಶನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ನಟ ದರ್ಶನ್ ವಿರುದ್ಧ ಹೋರಾಟ ಮಾಡಲು 10,000ಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ ಬರಲು ತಯಾರಿ ನಡೆಸಿದ್ದಾರೆ. ಒಕ್ಕಲಿಗ ಲೀಡರ್ಸ್ ಹೋರಾಟ ಕುರಿತು ಮಂಡ್ಯ, ಹಾಸನ, ರಾಮನಗರ, ತುಮಕೂರು, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರಲ್ಲಿ ಸಭೆ ನಡೆಸಲಿದ್ದಾರೆ. ನಟ ದರ್ಶನ್ರದ್ದು ಅತಿಯಾಯ್ತು, ಕೂಡಲೇ ಅವರು ಉಮಾಪತಿ ಶ್ರೀನಿವಾಸ್ ಗೌಡರಿಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ಉಮಾಪತಿ ಗೌಡಗೆ ದರ್ಶನ್ ಬೇಷರತ್ ಕ್ಷಮೆ ಕೇಳಬೇಕು, ದರ್ಶನ್ ಬಳಸಿರುವ ತಗಡು ಪದವನ್ನು ವಾಪಸ್ ಪಡೆಯಬೇಕು. ತಗಡು, ಗುಮ್ತೀವಿ ಅನ್ನೋ ಪದ ಬಳಕೆ ಮಾಡಿದ್ದಾರೆ, ನಿರ್ಮಾಪಕ ಉಮಾಪತಿ ಗೌಡಗೆ ದರ್ಶನ್ ಜೀವ ಬೆದರಿಕೆ ಹಾಕಿದ್ದಾರೆ. ದರ್ಶನ್ ವಿರುದ್ಧ FIR ದಾಖಲಿಸಿ ಅರೆಸ್ಟ್ ಮಾಡುವಂತೆ ಪಟ್ಟು ಹಿಡಿದಿದ್ದಾರೆ.
ಮುಖಂಡರು ಯಾವುದೇ ಕ್ಷಣ ಈ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡಲಿದ್ದಾರೆ. ಒಕ್ಕಲಿಗ ಸಂಘದ ಮುಖಂಡನ ಬಗ್ಗೆ ಹಗುರ ಹೇಳಿಕೆ ನೀಡಿದ್ದಾರೆ, ನಿರ್ಮಾಪಕ ಉಮಾಪತಿಗೌಡ ನಮ್ಮ ಸಮಾಜದ ಗಣ್ಯ ವ್ಯಕ್ತಿ. ಅಸೆಂಬ್ಲಿ ಎಲೆಕ್ಷನ್ನಲ್ಲಿ ಒಂದು ಪಕ್ಷದ ಅಭ್ಯರ್ಥಿ ಆಗಿದ್ದವರು, ಸಿನಿಮಾದಲ್ಲೂ ಉಮಾಪತಿಗೌಡ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಂಥವರ ಬಗ್ಗೆ ದರ್ಶನ್ ಆಡಿರುವ ಮಾತುಗಳು ಸಹಿಸಿಕೊಳ್ಳುವಂಥದ್ದಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಚಾರಕ್ಕೆ ಬಂದವರನ್ನು ಅಟ್ಟಾಡಿಸಿಕೊಂಡು ಹೋದ ಸ್ಥಳೀಯ : ವಿಡಿಯೋ ವೈರಲ್..!