Download Our App

Follow us

Home » ರಾಜಕೀಯ » ಅಮಿತ್ ಶಾ ಸುಳ್ಳುಗಳ ಸರದಾರ : ಸಾಕ್ಷಿ ಸಮೇತ ತಿರುಗೇಟು ನೀಡಿದ ಸಚಿವ ಕೃಷ್ಣ ಬೈರೇಗೌಡ..!

ಅಮಿತ್ ಶಾ ಸುಳ್ಳುಗಳ ಸರದಾರ : ಸಾಕ್ಷಿ ಸಮೇತ ತಿರುಗೇಟು ನೀಡಿದ ಸಚಿವ ಕೃಷ್ಣ ಬೈರೇಗೌಡ..!

ಬೆಂಗಳೂರು : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಕೊಡಬೇಕಾದ ಬರ ಪರಿಹಾರ ವಿಚಾರವಾಗಿ ಕಳೆದ ಆರು ತಿಂಗಳಿನಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಮನವಿ ಮಾಡುತ್ತಲೇ ಬಂದಿದೆ. ಆದರೂ, ಕೇಂದ್ರ ಸರ್ಕಾರದಿಂದ ಈವರೆಗೆ ಯಾವುದೇ ಬರ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಈಗಾಗಲೇ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಇದೀಗ, ಬರ ಪರಿಹಾರ ವಿತರಣೆಯಲ್ಲಿನ ವಿಳಂಬ ವಿಚಾರ ಮತ್ತೊಂದು ತಿರುವು ಪಡೆದುಕೊಂಡಿದೆ.

ನಿನ್ನೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ರಾಜ್ಯ ಸರ್ಕಾರವು ಮೂರು ತಿಂಗಳ ತಡವಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರಿಂದ ಕೇಂದ್ರವು ಬರ ಪರಿಹಾರವನ್ನು ಸಕಾಲದಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ” ಎಂದು ಆರೋಪಿದ್ದರು.

ಆದರೆ, ಕೇಂದ್ರ ಗೃಹ ಸಚಿವರ ಈ ಹೇಳಿಕೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಾಕ್ಷಿ ಸಹಿತ ತಿರುಗೇಟು ನೀಡಿದ್ದಾರೆ. ಈ ಕುರಿತು ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಬರ ಪರಿಹಾರ ನೀಡದಿರುವ ಬಗ್ಗೆ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಗುಡುಗಿದ್ದಾರೆ. ಕರ್ನಾಟಕದಲ್ಲಿ ಸುಳ್ಳುಗಳ ಸರದಾರ, ಕೇಂದ್ರ ಗೃಹ ಸಚಿವ ಅಮಿಶ್ ಶಾ ಮತ್ತಷ್ಟು ಸುಳ್ಳು ಬಿಟ್ಟಿದ್ದಾರೆ. ಸೂರ್ಯನಿಗೆ ಟಾರ್ಚ್ ಬಿಡುವಂತಹ ಸುಳ್ಳು ಹೇಳಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶಾ ವಿರುದ್ಧ ಕಿಡಿಕಾರಿದ್ದಾರೆ.

ಸೆಪ್ಟೆಂಬರ್ 22 ರಂದು ಕರ್ನಾಟಕ ‌ಸರ್ಕಾರ ಕೇಂದ್ರ ಸರ್ಕಾರಕ್ಕೆ ಬರಗಾಲಕ್ಕೆ ಹಣ ಬಿಡುಗಡೆಗೆ ಕೇಳಿತ್ತು. ಭೀಕರ ಬರಗಾಲ ಮುಂಗಾರು ಹಂಗಾಮಿಯನ್ನ ಘೋಷಣೆ ಮಾಡಿದ್ದೇವೆ. ನಾವು ಒಂದುವರೆ ತಿಂಗಳು ಮುಂಚೆಯೇ ಮೆಮೊರೆಂಡಮ್ಮ ಸಲ್ಲಿಸಿದ್ದೇವೆ. ಸೆಪ್ಟೆಂಬರ್ 27 ರಂದು ಕೇಂದ್ರ ಸರ್ಕಾರದ ಕೃಷಿ ಕಾರ್ಯದರ್ಶಿಗಳು, 31 ಜಿಲ್ಲೆ ಬರಗಾಲ ಘೋಷಣೆ ಅಂತಾ ಮಾಡಿದ್ದಾರೆ. ಕರ್ನಾಟಕ ಸರ್ಕಾರಕ್ಕೆ NDRF ನಲ್ಲಿ‌ ಅನುದಾನ ನೀಡಬೇಕು ‌ಎಂದು ಪತ್ರ ಹೋಗಿದೆ. ಅದ್ರೂ ಅನುದಾನ ಬಿಡುಗಡೆ ಆಗಿಲ್ಲ ಎಂದು ಕೃಷ್ಣ ಬೈರೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.

ನವೆಂಬರ್ 8 ರಂದು ಕೇಂದ್ರ ಸರ್ಕಾರದಿಂದ 13/11 ರಂದು ಸಭೆ‌ ಮಾಡಿ ಎಂದು ಸಭೆ ಸೂಚನೆ ಪತ್ರ ಕೊಟ್ಟಿದ್ದಾರೆ. ನವೆಂಬರ್ 20 ರಿಂದ ಗೃಹ ಸಚಿವರ ಟೇಬಲ್ ಮೇಲೆ ಫೈಲ್ ದೂಳು ಹಿಡಿಯುತ್ತಿದೆ. ನಾಲ್ಕು ತಿಂಗಳಿಂದ ಬರಪರಿಹಾರ ಕೊಡಲು ಆಗುತ್ತಿಲ್ಲ. ಇದೀಗ ರಾಜ್ಯದ ಜನರ ಮುಂದೆ ಬಂದು ಸುಳ್ಳು ಹೇಳುತ್ತಿದ್ದಾರೆ.

ರಾಜ್ಯದಿಂದ ಕೃಷಿ ಸಚಿವರು ಗ್ರಾಮೀಣ ಸಚಿವರು ಹೋಗಿ ಬೇಟಿ ಮಾಡಿದ್ರೂ ಅವರಿಗೆ ಲೆಕ್ಕಕಿಲ್ಲ. ರಾಜ್ಯ ಸಿಎಂ ಕೇಂದ್ರದ ಹಣಕಾಸು ಸಚಿವರಿಗೆ ನವೆಂಬರ್ 15 ರಂದು ಪತ್ರ ಬರೆದಿದ್ದಾರೆ. ಕೇಂದ್ರ ಗೃಹ ಬರ ಪರಿಹಾರ ಹಣ ಬಿಡುಗಡೆ ಮಾಡುವಂತೆ ಸಚಿವರಿಗೆ ಕೂಡ ಪತ್ರ ಬರೆದಿದ್ದಾರೆ. ನವೆಂಬರ್ 27 ರಂದು ಪ್ರಧಾನಿಗೂ ಪತ್ರ ಬರೆಯಲಾಗಿದೆ. ಜೊತೆಗೆ ಅದೇ 27 ರಂದು ಎರಡನೇ ಬಾರಿಗೆ ಗೃಹ ಸಚಿವರಿಗೆ ಬರಗಾಲದ ಹಣ ಬಿಡುಗಡೆಗೆ ಪತ್ರ ಬರೆದ್ದಿದ್ದೇವೆ. ಜನವರಿ 19 ರಂದು ಮತ್ತೊಮ್ಮೆ ಪ್ರಧಾನಿಯನ್ನು ಬೇಟಿ ಮಾಡಿ ಪತ್ರ ಕೊಟ್ಟರು ಹಣ ಬಿಡುಗಡೆ ಆಗಿಲ್ಲ.

ಡಿಸೆಂಬರ್ 23 ರಂದು ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದು ಹೇಳಿದ್ದರು. ಕರ್ನಾಟಕದ ಜನರಿಗೆ ಅನ್ಯಾಯ ಮಾಡ್ತಿದ್ದೀರಿ. ರೈತರ ಮೇಲೆ ಯಾಕೆ ನಿಮಗೆ ಈ ದ್ವೇಷ? ನಮ್ಮ ದುಡ್ಡು ನಮ್ಮ ವೋಟ್ ತಗೊಂಡು ನಮ್ಮ ಕೆನ್ನಗೆ ಹೋಡೆದ ಹಾಗೆ ಅನ್ಯಾಯ ಮಾಡ್ತಿದ್ದಾರೆ. ಅಷ್ಟೇ ಅಲ್ಲ ನಮ್ಮನ್ನು ಅವಮಾನ ಮಾಡ್ತಿದ್ದಾರೆ. ಇದಕ್ಕೆಲ್ಲ ದ್ವೇಷವೇ ಕಾರಣ, ಕರ್ನಾಟಕದ ಜನ ನಿಮಗೆ ಏನು ಅನ್ಯಾಯ ಮಾಡಿದ್ದಾರೆ? ಈ ಚುನಾವಣೆಯಲ್ಲಿ ನಿಮಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಕೃಷ್ಣ ಬೈರೇಗೌಡ ಅವರು ಅಮಿತ್ ಶಾ ವಿರುದ್ಧ ಗುಡುಗಿದ್ದಾರೆ.

ಇದನ್ನೂ ಓದಿ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ವಿರುದ್ಧ FIR ದಾಖಲು..!

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here