Download Our App

Follow us

Home » ಅಪರಾಧ » ಬ್ಯಾಂಕ್ ಗೆ ಸಾಲ ತೀರಿಸದ ಆರೋಪ:ರಮೇಶ್​ ಜಾರಕಿಹೊಳಿ ಮೇಲೆ FIR ದಾಖಲು.!

ಬ್ಯಾಂಕ್ ಗೆ ಸಾಲ ತೀರಿಸದ ಆರೋಪ:ರಮೇಶ್​ ಜಾರಕಿಹೊಳಿ ಮೇಲೆ FIR ದಾಖಲು.!

ಬೆಳಗಾವಿ : ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಮೇಲೆ FIR ದಾಖಲಾಗಿದ್ದು, ಸಾಲ ತೀರಿಸದೇ ವಂಚನೆ ಮಾಡಿದ್ದಾರೆಂದು ದೂರು ದಾಖಲಾಗಿದೆ. ಚಾಮರಾಜಪೇಟೆ ಸಹಕಾರಿ ಅಪೆಕ್ಸ್​​​​ ಬ್ಯಾಂಕ್​​ನಿಂದ ಸಾಲ ಪಡೆದುಕೊಂಡಿದ್ದರು.

ರಮೇಶ್​​ ಜಾರಕಿಹೊಳಿ ಅವರು 420 ಕೇಸ್​​​ನಲ್ಲಿ A1 ಆರೋಪಿಯಾಗಿದ್ದು, ರಮೇಶ್​ ಜಾರಕಿಹೊಳಿ, ವಸಂತ್​​ ಪಾಟೀಲ್​, ಶಂಕರ್​​ ಮೇಲೆ FIR ದಾಖಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್​ನಲ್ಲಿರೋ ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ಪದಾಧಿಕಾರಿಗಳ ವಿರುದ್ಧವೂ FIR ದಾಖಲಾಗಿದೆ.

ಕಾರ್ಖಾನೆ ಸ್ಥಾಪನೆ ವಿಸ್ತರಣೆ ನಿರ್ವಹಣೆಗಾಗಿ ಸಾಲ ಪಡೆಯಲಾಗಿತ್ತು. ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ಕಂಪನಿ ಹೆಸರಲ್ಲಿ ಸಾಲ ಪಡೆದಿದ್ದರು. ಶುಗರ್​ ಫ್ಯಾಕ್ಟರಿ ಬೆಳಗಾವಿ ಜಿಲ್ಲೆಯ ಗೋಕಾಕ್​ನಲ್ಲಿದೆ.

ಬ್ಯಾಂಕ್ 2013 ರಿಂದ 2017ರವರೆಗೆ 232 ಕೋಟಿ 88 ಲಕ್ಷ ಸಾಲ ಮಂಜೂರು ಮಾಡಿದೆ.  ಸಾಲದ ಹಣ ಪಾವತಿ ಮಾಡದೇ 439 ಕೋಟಿ 7 ಲಕ್ಷ ಸಾಲದ ಮೊತ್ತ ಬಾಕಿ ಉಳಿದುಕೊಂಡಿದೆ. ಬ್ಯಾಂಕ್​​ನವರಿಗೆ ನಂಬಿಕೆದ್ರೋಹ ಮಾಡಿದ್ದಾರೆಂದು ಆರೋಪ ಮಾಡಿದ್ದು, ಈ ಸಂಬಂಧ ಬ್ಯಾಂಕ್ ಮ್ಯಾನೇಜರ್ ರಾಜಣ್ಣ ಅವರು ಮಾಜಿ ಸಚಿವ ರಮೇಶ ಜಾರಕಿಹೊಳಿ ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ನ ಇಬ್ಬರು ಪದಾಧಿಕಾರಿಗಳ ವಿರುದ್ದ ವಿವಿಪುರಂ ಠಾಣೆಗೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಅಂಗಾಂಗ ದಾನದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ..!

 

 

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here