ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಸಾವಿರಾರು ಕೋಟಿ ಆದಾಯ ಮಾಡ್ತಿರುವ ಚಿನ್ನಸ್ವಾಮಿ ಸ್ಟೇಡಿಯಂ ಸರ್ಕಾರಕ್ಕೆ ತೆರಿಗೆ ನೀಡದೆ ವಂಚಿಸುತ್ತಲೇ ಬಂದಿದ್ದು, ನೂರಾರು ಕೋಟಿ ಬಾಕಿ ಉಳಿಸಿಕೊಂಡರೂ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. PWD ಇಲಾಖೆ ಜಾಗದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಇದ್ದು, PWD ಇಲಾಖೆ- KSCA ಮಧ್ಯೆ 99 ವರ್ಷಗಳ ಒಪ್ಪಂದ ಆಗಿದೆ.
ಸ್ಟೇಡಿಯಂ ವರ್ಷಕ್ಕೆ ಕೇವಲ 19 ಸಾವಿರ ಬಾಡಿಗೆ ಪಾವತಿ ಮಾಡ್ತಿದ್ದು, 1970ರಲ್ಲಿ ತಿಂಗಳಿಗೆ 6 ಕೋಟಿ ಪಾವತಿ ಮಾಡಲು ಸರ್ಕಾರ ಸೂಚಿಸಿತ್ತು. ಆದೇಶ ಮರುಪರಿಷ್ಕರಿಸಿ 1970 ರಲ್ಲಿ ನೂತನ ಒಪ್ಪಂದ ಆದೇಶ ನೀಡಿತ್ತು. ಆದರೆ KSCA ಈವರೆಗೂ ಪರಿಷ್ಕ್ರತ ಬಾಡಿಗೆ ಪಾವತಿಸಲಿಲ್ಲ. ಟ್ಯಾಕ್ಸ್ ಕಟ್ಟಿಲ್ಲ, ಹೊಸ ಬಾಡಿಗೆಯನ್ನೂ ಪಾವತಿ ಮಾಡಿಲ್ಲ, ಈ ಬಗ್ಗೆ BBMP ಹಲವು ಬಾರಿ ನೋಟಿಸ್ ಕೊಟ್ಟರೂ ಕ್ಯಾರೇ ಅಂದಿಲ್ಲ.
KSCA ವಿರುದ್ಧ ಸಾಮಾಜಿಕ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದ್ದು, ಚಿನ್ನಸ್ವಾಮಿ ಸ್ಟೇಡಿಯಂಗೆ ಮುತ್ತಿಗೆ ಹಾಕಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 17.11 ಎಕರೆ ವಿಸ್ತೀರ್ಣದಲ್ಲಿರುವ ಚಿನ್ನಸ್ವಾಮಿ ಕ್ರಿಕೆಟ್ ಸ್ಬೇಡಿಯಂ ನಲ್ಲಿ KSCA ಕ್ರಿಕೆಟ್ ಹಾಗೂ ಇತರೆ ವಾಣಿಜ್ಯ ಚಟುವಟಿಕೆ ನಡೆಸುತ್ತಿದೆ.
ಇದನ್ನೂ ಓದಿ : ಲೋಕಸಭೆ ನೂತನ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ..!