Download Our App

Follow us

Home » ಫ್ಲ್ಯಾಶ್ ನ್ಯೂಸ್ » ಸಾರ್ವಕಾಲಿಕ ದಾಖಲೆ ಬರೆದ ಬೆಳ್ಳಿಯ ಬೆಲೆ – ಕೆಜಿಗೆ 1 ಲಕ್ಷ ರೂಪಾಯಿ..!

ಸಾರ್ವಕಾಲಿಕ ದಾಖಲೆ ಬರೆದ ಬೆಳ್ಳಿಯ ಬೆಲೆ – ಕೆಜಿಗೆ 1 ಲಕ್ಷ ರೂಪಾಯಿ..!

ಆಭರಣ ಮತ್ತು ಕೈಗಾರಿಕೆ ಎರಡೂ ವಲಯಗಳಲ್ಲಿ ಪ್ರಮುಖವಾಗಿ ಬಳಕೆಯಾಗುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1 ಲಕ್ಷ ರೂಪಾಯಿಗೆ ತಲುಪಿದೆ. ಇದು ಹಬ್ಬ ಮತ್ತು ಶುಭ ಸಮಾರಂಭಗಳಿಗೆ ಬೆಳ್ಳಿ ಆಭರಣ ಖರೀದಿಗೆ ಮುಂದಾಗಿದ್ದವರಿಗೆ ಭಾರೀ ಶಾಕ್ ನೀಡಿದೆ. ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಬೆಳ್ಳಿಯ ಬೆಲೆ ಕೆಜಿಗೆ 50 ಸಾವಿರ ರೂ.ನಷ್ಟು ಏರಿಕೆ ಕಂಡಿದೆ.

ತಿಂಗಳ ಹಿಂದಷ್ಟೇ ಕೆ.ಜಿ.ಗೆ 83000 ಆಸುಪಾಸಿನಲ್ಲಿದ್ದ ಬೆಳ್ಳಿ ಬೆಲೆ ಕಳೆದ 3 ದಿನಗಳಲ್ಲಿ 6000-7000 ರೂ.ನಷ್ಟು ಹೆಚ್ಚಳವಾಗಿದೆ. ಪರಿಣಾಮ ದೇಶದ ವಿವಿಧ ನಗರಗಳ ಮಾರುಕಟ್ಟೆಯಲ್ಲಿ 1 ಲಕ್ಷ ರೂ.ಗಳ ಗಡಿ ದಾಟಿದೆ. ಒಂದೇ ತಿಂಗಳಲ್ಲಿ 17 ಸಾವಿರ ರೂಪಾಯಿ ಏರಿಕೆ ಕಂಡಿದೆ.

ಚಿನ್ನದ ಪ್ರಮುಖ ಮಾರುಕಟ್ಟೆಗಳಾದ ಚೆನ್ನೈ, ಹೈದ್ರಾಬಾದ್, ತಿರುವನಂತಪುರ, ಕಟಕ್ ಸೇರಿದಂತೆ ಹಲವು ನಗರಗಳಲ್ಲಿ ಬುಧವಾರ ಬೆಳ್ಳಿ ಬೆಲೆ ಕೆ.ಜಿ.ಗೆ 1 ಲಕ್ಷ ರೂ.ಗಳ ಗಡಿ ದಾಟಿದ್ದು, ಉಳಿದಂತೆ ದೆಹಲಿಯಲ್ಲಿ 97100 ರೂ ಮುಂಬೈನಲ್ಲಿ 94180 ರೂ. ಬೆಂಗಳೂರಿನಲ್ಲಿ 97100 ರೂ. ತಲುಪಿದೆ. ಇದೇ ವೇಳೆ ಬುಧವಾರ ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 250 ರೂ. ಏರಿಕೆ ಕಂಡು 73200  ತಲುಪಿದೆ.

ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
* ಮಧ್ಯಪ್ರಾಚ್ಯ ಬಿಕ್ಕಟ್ಟು ಇತ್ಯರ್ಥವಾಗದೇ ಇದಿರುವುದು
* ಬೇಡಿಕೆ, ಲಭ್ಯತೆ ನಡುವಿನ ವ್ಯತ್ಯಾಸ ದಿನೇ ದಿನೇ ಏರಿಕೆ
* ಕೈಗಾರಿಕಾ ವಲಯ ದಿಂದ ಬೆಳ್ಳಿಗೆ ಭಾರೀ ಬೇಡಿಕೆ

ಹೀಗಾಗಿ ಬೆಳ್ಳಿಯ ಬೆಲೆ ಸಾರ್ವಕಾಲಿಕ ದಾಖಲೆ ಕಂಡಿದೆ. ಮುಂದಿನ ದಿನಗಳಲ್ಲಿ ಬೆಳ್ಳಿ ದರ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಮುರುಘಾ ಶ್ರೀ ಪೋಕ್ಸೋ ಕೇಸ್‌ಗೆ ಟ್ವಿಸ್ಟ್‌​ – ಸಾಕ್ಷಿಯಾಗಿದ್ದ ಸಂತ್ರಸ್ಥೆಯ ಚಿಕ್ಕಪ್ಪ ಅರೆಸ್ಟ್..!

 

 

 

 

 

 

 

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here