ನವದೆಹಲಿ : ದಟ್ಟ ಮಂಜಿನಿಂದಾಗಿ ಕಡಿಮೆ ಗೋಚರತೆ ಇರುವ ಕಾರಣ ವಿಮಾನ ನಿರ್ಗಮನ ವಿಳಂಬವಾಗಿದೆ. ಫ್ಲೈಟ್ ತಡವಾಗಿದ್ದಕ್ಕೆ ಪೈಲಟ್ ಮೇಲೆ ಪ್ರಯಾಣಿಕ ಹಲ್ಲೆ ನಡೆಸಿದ ಘಟನೆ ಇಂಡಿಯೋ ವಿಮಾನದಲ್ಲಿ ನಡೆದಿದೆ. ವಿಮಾನ 13 ಗಂಟೆಗಳ ಕಾಲ ತಡವಾಗಿ ಹೊರಟಿದ್ದಕ್ಕೆ ಕೋಪಗೊಂಡ ಪ್ರಯಾಣಿಕ ಪೈಲಟ್ನನ್ನು ಥಳಿಸಿದ್ದಾನೆ.
ಹಲ್ಲೆ ಮಾಡಿರೋ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೈಲಟ್ ಮೇಲೆ ಕೈ ಮಾಡಿದ ಪ್ರಯಾಣಿಕನನ್ನು ಸಾಹಿಲ್ ಕಟಾರಿಯಾ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಇಂಡಿಗೋ ಸಂಸ್ಥೆ ಪೊಲೀಸ್ ದೂರು ನೀಡಿದ್ದಾರೆ.
ಈ ವಿಮಾನ ವಿಳಂಬದಿಂದಾಗಿ ಪ್ರಯಾಣಿಕ ಅಂತಾರಾಷ್ಟ್ರೀಯ ವಿಮಾನವನ್ನು ಮಿಸ್ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪ್ರಯಾಣಿಕ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾನೆ.
ವಿಮಾನವು ಕೋಲ್ಕತ್ತಾದಿಂದ ಬೆಂಗಳೂರಿಗೆ ಹೊರಡಬೇಕಿತ್ತು, 13 ಗಂಟೆಗಳ ಕಾಲ ಕಾಯಬೇಕಾಯಿತು. ಎಂದೂ ಈ ರೀತಿಯಾಗಿರಲಿಲ್ಲ, ಇಂಡಿಗೋದಲ್ಲಿ ತುಂಬಾ ಕೆಟ್ಟ ಅನುಭವ ಅನುಭವಿಸಿದ್ದೇನೆ. ರಾತ್ರಿ 10 ಗಂಟೆಗೆ ಹೊರಡಬೇಕಿದ್ದ ವಿಮಾನ, 4.41ಕ್ಕೆ ಹೊರಟಿತು. ಇದರಿಂದಾಗಿ ಅಂತಾರಾಷ್ಟ್ರೀಯ ವಿಮಾನ ಮಿಸ್ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸಂಕ್ರಾಂತಿ ಹಬ್ಬದಂದು ಖರೀದಿಗೆ ಮುಗಿಬಿದ್ದ ಜನ : ಕಬ್ಬು, ಹೂವು, ಹಣ್ಣುಗಳ ಬೆಲೆ ಏರಿಕೆ..!