Download Our App

Follow us

Home » ಸಿನಿಮಾ » ಸದ್ದಿಲ್ಲದೇ ಹಸೆಮಣೆ ಏರಿದ ಅದಿತಿ ರಾವ್ ಹೈದರಿ-ಸಿದ್ಧಾರ್ಥ್ : ಫೋಟೋ ವೈರಲ್..!

ಸದ್ದಿಲ್ಲದೇ ಹಸೆಮಣೆ ಏರಿದ ಅದಿತಿ ರಾವ್ ಹೈದರಿ-ಸಿದ್ಧಾರ್ಥ್ : ಫೋಟೋ ವೈರಲ್..!

ಬಾಲಿವುಡ್‌ ನಟಿ ಅದಿತಿ ರಾವ್ ಹೈದರಿ ಅವರು ಸೌತ್‌ ಇಂಡಿಯನ್ ಸ್ಟಾರ್ ನಟ ಸಿದ್ಧಾರ್ಥ್ ಅವರನ್ನು ಮದುವೆಯಾಗಿದ್ದಾರೆ. ಮದುವೆಯ ಮೊದಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಳೆದ ಕೆಲವು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿದ್ದ ಸಿದ್ದಾರ್ಥ್​ ಮತ್ತು ಅದಿತಿ ರಾವ್​ ಹೈದರಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ಅವರ ಮದುವೆ ವಿಷಯ ತಿಳಿದು ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.

ದಕ್ಷಿಣ ಭಾರತದ ಶೈಲಿಯಲ್ಲಿ ಅದಿತಿ ರಾವ್​ ಹೈದರಿ ಹಾಗೂ ಸಿದ್ದಾರ್ಥ್​ ಮದುವೆ ನಡೆದಿದೆ. ‘ನೀನೇ ನನ್ನ ಚಂದ್ರ, ನೀನೇ ನನ್ನ ಸೂರ್ಯ, ನೀನೇ ನನ್ನ ನಕ್ಷತ್ರ’ ಎಂದು ಕ್ಯಾಪ್ಷನ್​ ನೀಡುವ ಮೂಲಕ ಅದಿತಿ ರಾವ್​ ಹೈದರಿ ಅವರು ಈ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮದುವೆಯಲ್ಲಿ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ಇಬ್ಬರಿಗೂ ಇದು ಎರಡನೇ ಮದುವೆ. ಮೊದಲ ಪತ್ನಿ ಮೇಘನಾಗೆ ಸಿದ್ದಾರ್ಥ್​ ಅವರು 2007ರಲ್ಲಿ ವಿಚ್ಛೇದನ ನೀಡಿದ್ದರು. ಹಾಗೆಯೇ ಅದಿತಿ ರಾವ್​ ಅವರು ಮೊದಲ ಪತಿ ಸತ್ಯದೀಪ್​ ಮಿಶ್ರಾಗೆ 2013ರಲ್ಲಿ ಡಿವೋರ್ಸ್​ ನೀಡಿದ್ದರು. ಆ ಬಳಿಕ ಅದಿತಿ ರಾವ್​ ಅವರಿಗೆ ಸಿದ್ದಾರ್ಥ್​ ಜೊತೆ ಪ್ರೀತಿ ಚಿಗುರಿತ್ತು.

ಇದನ್ನೂ ಓದಿ : ಮಹಿಳಾ ಆಯೋಗದ ಅಧ್ಯಕ್ಷೆ ವಿರುದ್ಧ ಸಿನಿಮಾ ರಂಗ ಕೆಂಡಾಮಂಡಲ..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here