ಬೆಂಗಳೂರು : ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗವನ್ನು ನಡುಗಿಸಿದೆ. ಮಾಲಿವುಡ್ನ ಕರಾಳ ಮುಖವನ್ನು ಈ ವರದಿ ಬಲಿಗೆಳೆದಿದ್ದು, ಆರೋಪ ಪ್ರತ್ಯಾರೋಪಗಳು ಮುಂದುವರಿದಿದೆ. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲೂ ಸಮಿತಿ ರಚನೆ ಆಗಬೇಕೆಂಬ ಬೇಡಿಕೆಗಳು ಬಂದಿವೆ. ಕಮಿಟಿ ರಚನೆಗೆ ಇತ್ತೀಚೆಗಷ್ಟೇ ನಟ, ನಟಿಯರು ಹಾಗೂ ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ’ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತ್ತು. ಇದೀಗ ಈ ಬಗ್ಗೆ ಫಿಲ್ಮ್ ಚೇಂಬರ್ನಲ್ಲಿ ಮಹತ್ವದ ಸಭೆ ನಡೆದಿದೆ.
ಸಭೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ವಿರುದ್ಧ ಸಿನಿಮಾ ರಂಗ ಕಿಡಿಕಾರಿದೆ. ಕ್ವಾಶ್ ಕಮಿಟಿ ರಚನೆ ಮಾಡೋದಾಗಿ ನಾಗಲಕ್ಷ್ಮಿ ಚೌಧರಿ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ನಿರ್ಮಾಪಕ ಟಿ.ಸಿ.ವೆಂಕಟೇಶ್ ಪ್ರತಿಕ್ರಿಯಿಸಿ, ಕಮಿಟಿ ಮಾಡೋದಾದ್ರೆ ಚಿತ್ರರಂಗವನ್ನು 3 ದಿನ ಬಂದ್ ಮಾಡಿ ಎಂದಿದ್ದಾರೆ.
ನಾಗಲಕ್ಷ್ಮಿ ಚೌಧರಿ ವಿರುದ್ಧ ಸಿಎಂಗೆ ದೂರು ಕೊಡಲು ನಿರ್ಧರಿಸಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷರನ್ನು ಬದಲಿಸಲು ಸಿನಿಮಾರಂಗ ಸಿಎಂಗೆ ಮನವಿ ಮಾಡಲಿದ್ದು, ಮುಂದಿನ ಎರಡು ದಿನಗಳಲ್ಲಿ ಸಿನಿಮಾ ಗಣ್ಯರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ.
ಕನ್ನಡ ಸಿನಿಮಾ ರಂಗ ಸಾಕಷ್ಟು ಸಂಕಷ್ಟದಲ್ಲಿದೆ, ಇಂಥಾ ಹೊತ್ತಿನಲ್ಲಿ ಸಮಿತಿ ಮಾಡಿದ್ರೆ ಆರ್ಥಿಕವಾಗಿ ನಷ್ಟ ಆಗುತ್ತೆ. ಈಗಲೇ ಕನ್ನಡ ಸಿನಿಮಾಗೆ ಹಣ ಹೂಡಲು ಜನ ಬರ್ತಾಇಲ್ಲ ಎಂದು ಫಿಲ್ಮ್ ಚೇಂಬರ್ ಸಭೆಯಲ್ಲೇ ಮಹಿಳಾ ಆಯೋಗದ ಅಧ್ಯಕ್ಷರ ವಿರುದ್ಧ ಟಿ.ಸಿ.ವೆಂಕಟೇಶ್ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ವಾಣಿಜ್ಯ ಮಂಡಳಿ ಸಭೆಯಲ್ಲಿ ಭಾರೀ ವಾಗ್ವಾದ – ರಾಕ್‌ಲೈನ್ ಗರಂ, ಹೊರ ನಡೆದ ನಟಿ ತಾರಾ..!