ಹಿರಿಯನಟ ಅಭಿಜಿತ್ ಹಾಗೂ ನಾಗರಾಜು ನಟನೆಯ “ಅಡವಿಕಟ್ಟೆ” ಚಿತ್ರ ಈ ವಾರ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಉಮ ಎಸ್ ನಿರ್ಮಿಸಿ, ಸಂಜೀವ್ ಗಾವಂಡಿ ನಿರ್ದೇಶಿಸಿದ್ದಾರೆ. ಈಗಾಗಲೇ ಅಡವಿಕಟ್ಟೆ ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಜನಪ್ರಿಯವಾಗಿದೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜತೆಗೆ ಹಾರರ್ ಜಾನರ್ ಹೊಂದಿರುವ ಚಿತ್ರ. ಕನ್ನಡದಲ್ಲಿ ಈ ಜಾನರ್‌ನಲ್ಲಿ ಸಾಕಷ್ಟು ಚಿತ್ರಗಳು ಬಂದಿದೆಯಾದರೂ ಇದು ವಿಭಿನ್ನವಾಗಿದೆ. ಸಿನಿಮಾದ ಹೆಸರೇ ಹೇಳುವಂತೆ ಇದೊಂದು ಅಡವಿ ಅಂದರೆ ಕಾಡಿನಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಗೋಕಾಕ್ ನಗರದ ಸುತ್ತಮುತ್ತ ಹೆಚ್ಚಿನ ಚಿತ್ರೀಕರಣ ನಡೆದಿದೆ.
ಎಸ್ ಎನ್ ಈಶ್ವರ್ ಸಂಗೀತ ನಿರ್ದೇಶನ, ವೀರೇಶ್ ಛಾಯಾಗ್ರಹಣ, ಆದಿ ಆದರ್ಶ್ ಸಂಕಲನ, ನಾಗೇಶ್ ನೃತ್ಯ ನಿರ್ದೇಶನ ಹಾಗೂ ಸಂಜೀವ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಫ್ಯಾಮಿಲಿ ಸ್ಟಾರ್ ಅಭಿಜಿತ್, ನಾಗರಾಜು, ಶಾಂತಿ, ಯಶ್ ಶಂಕರ್, ಅನುಪ್ರೇಮ, ರವಿಚಂದ್ರನ್ ಆರ್, ಮಂಜುಳಾ ರೆಡ್ಡಿ “ಅಡವಿಕಟ್ಟೆ” ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ : ನಾನು ರಾಜೀ ಸಂಧಾನಕ್ಕೆ ಹೋಗಿಲ್ಲ – ರೇಣುಕಾಸ್ವಾಮಿ ಕುಟುಂಬದ ಭೇಟಿ ಬಗ್ಗೆ ವಿನೋದ್ ರಾಜ್ ಸ್ಪಷ್ಟನೆ..!