Download Our App

Follow us

Home » ಸಿನಿಮಾ » ಐಟಂ ಡಾನ್ಸ್​ಗೂ ಸಿದ್ದ, ಬೆತ್ತಲಾಗೋಕು ರೆಡಿ ಎಂದ ನಟಿ ಕಾಮಾಕ್ಷಿ ಭಾಸ್ಕರ್ಲಾ..!

ಐಟಂ ಡಾನ್ಸ್​ಗೂ ಸಿದ್ದ, ಬೆತ್ತಲಾಗೋಕು ರೆಡಿ ಎಂದ ನಟಿ ಕಾಮಾಕ್ಷಿ ಭಾಸ್ಕರ್ಲಾ..!

ಪೊಲಿಮೆರಾ 2 ಸಿನಿಮಾದ ಹೀರೋಯಿನ್‌ ಡಾ.ಕಾಮಾಕ್ಷಿ ಭಾಸ್ಕರ್ಲಾ ತಮ್ಮ ಬೋಲ್ಡ್‌ ಹೇಳಿಕೆಯ ಮೂಲಕ ಮತ್ತೆ ಸುದ್ದಿಯಲಿದ್ದಾರೆ. ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟ ಈಕೆ ಪ್ರಸ್ತುತ ಸಿನಿಮಾ ರಂಗದಲ್ಲಿಯೂ ಸಖತ್‌ ಸದ್ದು ಮಾಡುತ್ತಿದ್ದಾರೆ.

ನಟಿ ಸಾಯಿ ಕಾಮಾಕ್ಷಿ ಭಾಸ್ಕರ್ಲಾ ತಮ್ಮ ಬೋಲ್ಡ್‌ ಸ್ಟೇಟ್‌ಮೆಂಟ್‌ ಕಾರಣಕ್ಕಾಗಿ ಈಗ ಸುದ್ದಿಯಾಗಿದ್ದಾರೆ. ಇಲ್ಲಿಯವರೆಗೂ ಗ್ಲಾಮರ್‌ ರೋಲ್‌ನಲ್ಲೇ ನಟಿಸಿದ್ದ ಆಕೆ, ಮುಂದೆ ಬೆತ್ತಲೆಯಾಗಿ ನಟಿಸೋಕು ಸಿದ್ಧ ಎಂದು ಹೇಳಿದ್ದಾರೆ. ಇತ್ತೀಚೆಗೆ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಚಿಟ್‌ಚಾಟ್‌ನಲ್ಲಿ ಕಾಮಾಕ್ಷಿ ಎಲ್ಲಾ ರೀತಿಯ ಬೋಲ್ಡ್‌ ಪಾತ್ರಗಳಿಗೂ ನಾನು ರೆಡಿ, ಅದು ನ್ಯೂಡ್‌ ಪಾತ್ರವೇ ಆಗಿರಲಿ, ಐಟಮ್‌ ಡಾನ್ಸ್‌ ಆಗಿರಲಿ ನಾನು ಮಾಡುತ್ತೇನೆ ಎಂದಿದ್ದಾರೆ.

​ಚಿಟ್‌ಚಾಟ್‌ನಲ್ಲಿ ಕೇಳಿದ ಪ್ರಶ್ನೆಗೆ ಮುಕ್ತವಾಗಿ ಉತ್ತರ ನೀಡಿದ ಭಾಸ್ಕರ್ಲಾ ಅವರು, ಎಲ್ಲಾ ರೀತಿಯ ಬೋಲ್ಡ್‌ ಪಾತ್ರಗಳಿಗೂ ನಾನು ಸಿದ್ಧ. ನಾನು ಬೋಲ್ಡ್‌ ಪಾತ್ರವೇ ಮಾಡಲಿ ಅಥವಾ ಮುಜುಗರ ಪಡುವ ಹೆಣ್ಣಿನ ಪಾತ್ರವೇ ಮಾಡಲಿ. ನನ್ನ ಪಾಲಿಗೆ ಅದೊಂದು ಪಾತ್ರವಷ್ಟೇ ಎಂದು ಹೇಳಿದ್ದಾರೆ.

ಹಾಗಿದ್ದರೆ ನೀವು ನ್ಯೂಡ್‌ ಪಾತ್ರದಲ್ಲಿ ನಟಿಸೋಕೆ ಸಿದ್ಧವವೇ ಎಂದು ನಿರೂಪಕ ಕೇಳಿದ ಪ್ರಶ್ನೆಗೆ, ನಾನೊಬ್ಬಳು ನಟಿ ಎಲ್ಲಾ ರೀತಿಯ ಪಾತ್ರಗಳಿಗೂ ಸಿದ್ಧರಾಗಿರೋದು ನನ್ನ ಜವಾಬ್ದಾರಿ ಎಂದಿದ್ದಾರೆ. ಇದುವೇ ಕಲಾವಿದರ ಜೀವನ, ಜನರಿಗೂ ನೀವು ಕಲಾವಿದರಂತೆ ಕಾಣಬೇಕು. ನಾನೊಬ್ಬ ನಟನಾದ್ದರಿಂದ ಆ ಪಾತ್ರಕ್ಕೆ ನನ್ನ ಧ್ವನಿ, ದೇಹ, ಮುಖ, ಎಲ್ಲವನ್ನೂ ಸಾಧನವಾಗಿ ಬಳಸಿಕೊಳ್ಳುತ್ತೇನೆ ಎಂದಿದ್ದಾರೆ.ಈ ವೀಡಿಯೊ ಕ್ಲಿಪ್ ಈಗ ಎಲ್ಲೆಡೆ ವೈರಲ್ ಆಗಿದೆ.

ಪೊಲಿಮೆರಾ ಸಿನಿಮಾ ಇವರನ್ನು ಫೇಮಸ್‌ ಮಾಡಿದ್ದರೆ, ಇದರ 2ನೇ ಪಾರ್ಟ್‌ ಇವರನ್ನು ಇನ್ನಷ್ಟು ಪ್ರಸಿದ್ಧಿ ಮಾಡಿದೆ. ಇನ್ನು, ಸೈತಾನ್‌ ವೆಬ್‌ ಸಿರೀಸ್‌ನಲ್ಲಿ ಬೋಲ್ಡ್‌ ಆಗಿ ನಟಿಸಿದ್ದ ಈಕೆ, ಪ್ರಿಯರಾಲು ಸಿನಿಮಾದ ಮೂಲಕ ಟಾಲಿವುಡ್‌ಗೆ ಲಗ್ಗೆ ಇಟ್ಟಿದ್ದರು.

ಇದನ್ನೂ ಓದಿ : ರಾಮನಗರ : ಪ್ರವಾಸಕ್ಕೆ ತೆರಳಿದ್ದಾಗ ದುರಂತ – ರೆಸಾರ್ಟ್​ನಲ್ಲಿ ಜಿಪ್​ಲೈನ್ ಕೇಬಲ್‌​​ ತುಂಡಾಗಿ ಮಹಿಳೆ ಸಾ*ವು..!

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here