Download Our App

Follow us

Home » ಸಿನಿಮಾ » “ಮುದುಡಿದ ಎಲೆಗಳು” ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಬಾಲಿವುಡ್ ಬ್ಯೂಟಿ ಅಪ್ಸರ ರಾಣಿ..!

“ಮುದುಡಿದ ಎಲೆಗಳು” ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಬಾಲಿವುಡ್ ಬ್ಯೂಟಿ ಅಪ್ಸರ ರಾಣಿ..!

ಹಿಂದಿ ಹಾಗೂ ತೆಲುಗು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಹಾಗೂ ರಾಮ್ ಗೋಪಾಲ್ ವರ್ಮ ಅವರ “ಡೇಂಜರಸ್” ಚಿತ್ರದ ಮೂಲಕ ಜನಪ್ರಿಯರಾಗಿರುವ ನಟಿ ಅಪ್ಸರ ರಾಣಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಎಂ.ಶಂಕರ್ ನಿರ್ದೇಶನ ಹಾಗೂ ನಿರ್ಮಾಣದ “ಮುದುಡಿದ ಎಲೆಗಳು” ಚಿತ್ರದ ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಸರ ರಾಣಿ ಅವರು ಅಭಿನಯಿಸಿದ ಹಾಡಿನ ಚಿತ್ರೀಕರಣ ಇತ್ತೀಚಿಗೆ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ನಡೆಯಿತು.

ದುಬಾರಿ ಕಾರೊಂದರಲ್ಲಿ ಕಾಲೇಜ್ ಗೆ ಕಾಲಿಟ್ಟ ಹುಡುಗಿಯ ಸೌಂದರ್ಯ ಹಾಗೂ ಸ್ಟೈಲ್ ಗೆ ಕಾಲೇಜು ಹುಡುಗರು ಮಾರು ಹೋಗುತ್ತಾರೆ. ಹೊಸದಾಗಿ ಕಾಲೇಜು ಸೇರಿರುವ ಹುಡುಗಿ ಇರಬಹುದು ಎಂದು ಹುಡುಗರು ಆಲೋಚಿಸುತ್ತಿದ್ದಾಗ, ಅವರು ಕಾಲೇಜು ಸೇರಲು ಬಂದಿರುವ ಹುಡುಗಿಯಲ್ಲ‌. ಕೆಮಿಸ್ಟ್ರಿ ಟೀಚರ್ ಅಂತ ಗೊತ್ತಾಗುತ್ತದೆ. ಇದನ್ನು ನಿರ್ದೇಶಕರು ಹಾಡಿನ ಮೂಲಕ ತೋರಿಸಿದ್ದಾರೆ. ಭಜರಂಗಿ ಮೋಹನ್ ನೃತ್ಯ ಸಂಯೋಜಿಸಿದ ಈ ಹಾಡಿನಲ್ಲಿ ಅಪ್ಸರ ರಾಣಿ, ರಂಜಿತ್ ಕುಮಾರ್ ಹಾಗೂ ಪಂಕಜ್ ನಾರಾಯಣ್ ಅಭಿನಯಿಸಿದ್ದರು.

“ಮುದುಡಿದ ಎಲೆಗಳು” ಚಿತ್ರಕ್ಕೆ ಈಗಾಗಲೇ ಎಂಭತ್ತರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಕೆಲವು ಭಾಗಗಳ ಚಿತ್ರೀಕರಣ ಮಾತ್ರ ಬಾಕಿಯದೆ. ಒಂದು ಹಾಡಿನ ಚಿತ್ರೀಕರಣ ಕಾಶ್ಮೀರದಲ್ಲಿ ನಡೆದಿದೆ. ಮತ್ತೊಂದು ಹಾಡು ತಜಿಕಿಸ್ತಾನದಲ್ಲಿ ಚಿತ್ರೀಕರಣಗೊಳ್ಳಲಿದೆ.

ರಿಯೋ ಪ್ರೊಡಕ್ಷನ್ ಫಿಲಂ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವ ಎಂ ಶಂಕರ್ ಅವರೆ “ಮುದುಡಿದ ಎಲೆಗಳು” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ರಂಜನಿ ಈ ಚಿತ್ರದ ಸಹ ನಿರ್ಮಾಪಕಿ. ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ನಿರ್ದೇಶನವಿರುವ ಈ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಅವರ ಛಾಯಾಗ್ರಹಣವಿದೆ.

ರಂಜಿತ್ ಕುಮಾರ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಪಂಕಜ್ ನಾರಾಯಣ್, ಪಾವನ ಗೌಡ, ನಿಕಿತಾ ಸ್ವಾಮಿ, ಸೂರ್ಯದರ್ಶನ್, ಪ್ರೀತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಪ್ಸರ ರಾಣಿ, ಹರ್ಷಿಕಾ ಪೂಣಚ್ಛ, ರಮೇಶ್ ಭಟ್, ಭವ್ಯ, ಶೋಭ್ ರಾಜ್, ಶಂಕರ್ ಅಶ್ವತ್ಥ್, ಪೂನಂ ಪಾಂಡೆ, ಪದ್ಮಾ ವಾಸಂತಿ, ಜೋಸೈಮನ್ ಮುಂತಾದವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : ಚನ್ನಪಟ್ಟಣ ಗೆಲ್ಲೋಕೆ ಡಿಕೆಶಿ ರಣವ್ಯೂಹ – ಕ್ಷೇತ್ರದ ಸಮಸ್ಯೆಗಳಿಗೆ ಸ್ಥಳದಲ್ಲೇ ಡಿಕೆಶಿ ಮುಕ್ತಿ..!

 

 

 

 

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here