Download Our App

Follow us

Home » ಸಿನಿಮಾ » ಹೃದಯಾಘಾತದಿಂದ ಕೊನೆಯುಸಿರೆಳೆದ ಹಿರಿಯ ನಟಿ ಶಕುಂತಲಾ..!

ಹೃದಯಾಘಾತದಿಂದ ಕೊನೆಯುಸಿರೆಳೆದ ಹಿರಿಯ ನಟಿ ಶಕುಂತಲಾ..!

ಹಿರಿಯನಟಿ ಶಕುಂತಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಟಿ ಶಕುಂತಲಾ ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದರು.  ಬೆಂಗಳೂರಿನ ಮಗಳ ಮನೆಯಲ್ಲಿ ವಾಸವಾಗಿದ್ದ ಶಕುಂತಲ ಅವರಿಗೆ ನಿನ್ನೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ನಂತರ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶಕುಂತಳ ಅವರು ಮೃತಪಟ್ಟಿದ್ದಾರೆ.

ನಟಿ ಶಕುಂತಲಾ ಅವರು 1970 ರಲ್ಲಿ ಜೈಶಂಕರ್ ಅಭಿನಯದ ‘ಸಿಐಟಿ ಶಂಕರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರದ ಯಶಸ್ಸಿನ ಬಳಿಕ ಅವರನ್ನು ಅಭಿಮಾನಿಗಳು ‘ಸಿಐಡಿ’ ಶಕುಂತಲಾ ಎಂದೇ ಕರೆಯುತ್ತಿದ್ದರು.

ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ ಮತ್ತು ಕನ್ನಡದಂತಹ ವಿವಿಧ ಭಾಷೆಗಳಲ್ಲಿಯೂ ನಟಿಸಿದ್ದಾರೆ. ಕಾಲಕ್ರಮೇಣ ಸಿನಿಮಾದಿಂದ ದೂರವಾಗಿದ್ದ ನಟಿ ಧಾರಾವಾಹಿಗಳತ್ತ ಮುಖ ಮಾಡಿದರು. ಶಕುಂತಲಾ ಹಲವು ಧಾರಾವಾಹಿಗಳಲ್ಲೂ ನಟಿಸಿದ್ದರು. ಇದೀಗ ಹಿರಿಯ ನಟಿಯ ನಿಧನಕ್ಕೆ ತಮಿಳುನಾಡಿನ ಅನೇಕ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ : ವಾಹನ ಸವಾರರಿಗೆ ಗುಡ್​​ ನ್ಯೂಸ್​​.. HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಣೆ – ಇಲ್ಲಿದೆ ಮಾಹಿತಿ..!

Leave a Comment

DG Ad

RELATED LATEST NEWS

Top Headlines

ಧಾರವಾಡದಲ್ಲಿ ಜಿಮ್‌ಗೆ ನುಗ್ಗಿದ ಕೋತಿ – ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್.. ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಧಾರವಾಡ : ಕೋತಿಯೊಂದು ಜಿಮ್‌ಗೆ  ನುಗ್ಗಿದ ಘಟನೆ ಧಾರವಾಡದ ಸೈದಾಪುರದ ಕಿಂಗ್‌ಡಮ್ ಜಿಮ್​​ನಲ್ಲಿ ನಡೆದಿದೆ. ಕೋತಿ ಜಿಮ್‌ಗೆ ಬಂದ ಪರಿಣಾಮ ಯುವಕರು ಹೌಹಾರಿ ಹೊರ ಬಂದಿದ್ದಾರೆ. ಮೊದಲ‌

Live Cricket

Add Your Heading Text Here