Download Our App

Follow us

Home » ಸಿನಿಮಾ » ನಟ ನಿರಂಜನ್ ಶೆಟ್ಟಿ ಹುಟ್ಟುಹಬ್ಬಕ್ಕೆ ’31 DAYS’ ಚಿತ್ರದ ವಿಶೇಷ ಪೋಸ್ಟರ್ ರಿಲೀಸ್..!

ನಟ ನಿರಂಜನ್ ಶೆಟ್ಟಿ ಹುಟ್ಟುಹಬ್ಬಕ್ಕೆ ’31 DAYS’ ಚಿತ್ರದ ವಿಶೇಷ ಪೋಸ್ಟರ್ ರಿಲೀಸ್..!

Nstar ಬ್ಯಾನರ್ ನಲ್ಲಿ ನಾಗವೇಣಿ. N. ಶೆಟ್ಟಿ ರವರ ನಿರ್ಮಾಣದಲ್ಲಿ ತಯರಾಗುತ್ತಿರುವ “31 DAYS” ಸಿನಿಮಾದ ನಾಯಕರಾಗಿ ನಿರಂಜನ್ ಶೆಟ್ಟಿ ಅಭಿನಯಿಸುತ್ತಿದ್ದಾರೆ. ನಿರಂಜನ್ ಶೆಟ್ಟಿ ರವರ ಹುಟ್ಟು ಹಬ್ಬದ ಪ್ರಯುಕ್ತ “31DAYS” ಸಿನಿಮಾದ special poster ಬಿಡುಗಡೆಯಾಗಿದೆ.‌

ಪ್ರಸ್ತುತ ಈ ಚಿತ್ರ ರೀ ರೆಕಾರ್ಡಿಂಗ್ ಹಂತದಲ್ಲಿದ್ದು ಜೂನ್ ಅಥವಾ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ. ನಾಯಕ ನಟರಾಗಿ ನಿರಂಜನ್ ಶೆಟ್ಟಿ ಅವರು ಅಭಿನಯಿಸಿದ್ದು, ಅವರಿಗೆ ನಾಯಕಿಯಾಗಿ ಪ್ರಜ್ವಲಿ ಸುವರ್ಣ ನಟಿಸಿದ್ದಾರೆ. ಅಲ್ಲದೆ ಹೆಸರಾಂತ ನಟ, ನಟಿಯರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“31DAYS”ಸಿನಿಮಾ ಪ್ರಸ್ತುತ ಜನರೇಷನ್ ನಲ್ಲಿ ನಡೆಯುವ ಒಂದು ಸುಂದರ love story ಆಗಿದ್ದು, 31 ದಿನಗಳಲ್ಲಿ ನಡೆಯುವ high voltage love story ಆಗಿದೆ. ರಾಜ ರವಿಕುಮಾರ್ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವಿ. ಮನೋಹರ್ ರವರ ಸಂಗೀತ ನಿರ್ದೇಶನ “31 DAYS” ಚಿತ್ರಕ್ಕಿದೆ. ಇದು ವಿ.ಮನೋಹರ್ ಸಂಗೀತ ನಿರ್ದೇಶನದ 150 ನೇ ಸಿನಿಮಾ ಆಗಿದೆ. ವಿನುತ್. K ಛಾಯಾಗ್ರಹಣ, ಧನು ಕುಮಾರ್ ರವರ ನೃತ್ಯ ನಿರ್ದೇಶನ, ರವಿತೇಜ್ C. H. ಹಾಗು ಸನತ್ ರವರ ಸಂಕಲನ “31 DAYS” ಸಿನಿಮಾಗೆ ಇದೆ.

ಇದನ್ನೂ ಓದಿ : ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್​​ಗೆ ‘ಕೆಂಡ’ ಸಿನಿಮಾ ಆಯ್ಕೆ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here