ದೇವರ ಸಿನಿಮಾ ಮೂಲಕ ಹಿಟ್ ಸಿನಿಮಾ ಕೊಟ್ಟ ಜೂನಿಯರ್ ಎನ್ಟಿಆರ್ ಸದ್ಯ ವಾರ್ 2 ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ತೆಲುಗು ನಟ ಜೂನಿಯರ್ ಎನ್ಟಿಆರ್ ಅವರಿಗೆ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ತೆಲುಗು ಬಿಗ್ಬಾಸ್ನಲ್ಲಿ ಜೂನಿಯರ್ ಎನ್ಟಿಆರ್ ಒಮ್ಮೆ ಹೋಸ್ಟ್ ಮಾಡಿದ್ದಾಗ ಕನ್ನಡ ಮಾತನಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.
ಕನ್ನಡದ ಕಲಾವಿದರು ತೆಲುಗು ಭಾಷೆಯಲ್ಲೂ ಇದ್ದಾರೆ. ಅಲ್ಲಿನ ರಿಯಾಲಿಟಿ ಶೋನಲ್ಲೂ ಕನ್ನಡದವರು ಭಾಗಿ ಆಗಿದ್ದು ಇದೆ. ಕನ್ನಡದ ಸ್ಪರ್ಧಿಗಳು ತೆಲುಗು ಬಿಗ್ ಬಾಸ್ನಲ್ಲಿದ್ದಾಗ ಜೂನಿಯರ್ ಎನ್ಟಿಆರ್ ಕನ್ನಡದಲ್ಲಿ ಮಾತನಾಡಿದ್ದಾರೆ. ಆಗ ಸ್ಪರ್ಧಿಗಳು ಕನ್ನಡದಲ್ಲಿ ಮಾತನಾಡಿದ್ದರು. ಇದನ್ನು ಕೇಳಿ ಜೂನಿಯರ್ ಎನ್ಟಿಆರ್ ಖುಷಿಪಟ್ಟಿದ್ದರು.
ಕನ್ನಡದಲ್ಲಿ ಚೆನ್ನಾಗಿ ಮಾತಾಡ್ತಾ ಇದೀರಾ ನೀವು. ಅವರು ಕನ್ನಡದವರಾ ಅಥವಾ ನೀವು ಕನ್ನಡದವರಾ ಎಂದು ಜೂನಿಯರ್ ಎನ್ಟಿಆರ್ ಕೇಳಿದರು. ನಾವಿಬ್ಬರೂ ಕನ್ನಡಿಗರು ಎನ್ನುವ ಉತ್ತರ ಅವರ ಕಡೆಯಿಂದ ಬಂತು. ಇದಕ್ಕೆ ಖುಷಿಯಿಂದ ಉತ್ತರಿಸಿದ ಜೂನಿಯರ್ ಎನ್ಟಿಆರ್, ನನ್ನ ಅಮ್ಮ ಕೂಡ ಕನ್ನಡದವರು. ಕುಂದಾಪುರದವರು ಎಂದು ಹೆಮ್ಮೆಯಿಂದ ಹೇಳಿಕೊಂಡರು ಜೂನಿಯರ್ ಎನ್ಟಿಆರ್.
ಜೂನಿಯರ್ ಎನ್ಟಿಆರ್ ಅವರು ಇತ್ತೀಚೆಗಷ್ಟೇ ಅಮ್ಮನ ಜೊತೆ ಕುಂದಾಪುರಕ್ಕೆ ಭೇಟಿ ಕೊಟ್ಟಿದ್ದರು. ಅವರ ತಾಯಿಗೆ ಉಡುಪಿಗೆ ಭೇಟಿ ಕೊಡಬೇಕು ಎಂಬ ಆಸೆ ಇತ್ತು. ಅದನ್ನು ಈಡೇರಿಸಿದ್ದಾರೆ. ಕರ್ನಾಟಕಕ್ಕೆ ಬಂದಾಗೆಲ್ಲ ಜೂನಿಯರ್ ಎನ್ಟಿಆರ್ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆಯುತ್ತಾರೆ. ಪುನೀತ್ ರಾಜ್ಕುಮಾರ್ಗಾಗಿ ಅವರು ಒಂದನ್ನು ಹಾಡು ಹಾಡಿದ್ದರು. ಅವರು ಪುನೀತ್ ನಿಧನ ಹೊಂದಿದಾಗ ಸಾಕಷ್ಟು ಸಾಕಷ್ಟು ನೊಂದುಕೊಂಡಿದ್ದರು.
ಇದನ್ನೂ ಓದಿ : ಸೆಟಲ್ಮೆಂಟ್ ಮೂಲಕ ಕೋಟ್ಯಾಂತರ ರೂ. ಅಕ್ರಮ – ಮುಡಾ ಹಣಕಾಸು ವ್ಯವಹಾರದ ಮೊದಲ ವಿಡಿಯೋ ಬಿಟಿವಿಗೆ ಲಭ್ಯ..!