ಬೆಂಗಳೂರು : ಹಾಸನದ ಅರಸೀಕೆರೆಯ ಪ್ರಸಿದ್ಧ ಪುರದಮ್ಮ ದೇಗುಲದ ಪೂಜಾರಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಪೂಜಾರಿ ದಯಾನಂದ್ (39) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ದಯಾನಂದ್ ಹಾಸನದ ಅರಸಿಕೆರೆಯ ಪುರದಮ್ಮ ದೇವಾಲಯದ ಪೂಜಾರಿಯಾಗಿದ್ದು, ಈತನ ವಿರುದ್ಧ ಕೆಲ ದಿನಗಳ ಹಿಂದೆ ಬೆಂಗಳೂರಿನ ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಸಂತ್ರಸ್ತ ಮಹಿಳೆ ನೀಡಿದ ದೂರಿನ್ವಯ ಪ್ರಕರಣ ದಾಖಲಿಸಲಾಗಿತ್ತು.
ಈ ಸಂಬಂಧ ಇದೀಗ ಆರೋಪಿ ದಯಾನಂದ್ನನ್ನು ಬಾಗಲುಗುಂಟೆ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ದಯಾನಂದ್ ದೋಷ ನಿವಾರಣೆಗಾಗಿ ಪೂಜೆ ಮಾಡುತ್ತೆನೆಂದು ಹಣ ಪಡೆದು ಬಳಿಕ ಮಹಿಳೆಯನ್ನು ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ದಯಾನಂದ್ ಅರಸೀಕೆರೆ ಬಳಿಯ ಗೊಲ್ಲರಹಳ್ಳಿ ಕುರುಗುಂದ ಗ್ರಾಮ ಪಂಚಾಯಿತಿಯ ಸದಸ್ಯನಾಗಿದ್ದಾನೆ. ಮಹಿಳೆ ಪುರದಮ್ಮ ದೇವಸ್ಥಾನಕ್ಕೆ ಹೋಗಿದ್ದಾಗ ಪರಿಚಯ ಮಾಡಿಕೊಂಡಿದ್ದ. ಶಾಸ್ತ್ರ ಹೇಳುತ್ತಿದ್ದ ಪೂಜಾರಿ ದಯಾನಂದ್ಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಮಹಿಳೆಗೆ ಕಂಟಕವಿದೆ ಹೇಳಿ ಆಗಾಗ ಹಣ ಪಡೆಯುತ್ತಿದ್ದ ಎನ್ನಲಾಗಿದೆ. ಒಂದು ಲಕ್ಷಕ್ಕಿಂತ ಹೆಚ್ಚು ಹಣ ಮಹಿಳೆಯಿಂದ ಪಡೆದಿದ್ದ ಎನ್ನಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಜೈಲೂಟ ಸೇರುತ್ತಿಲ್ಲ, ಮನೆ ಊಟಕ್ಕೆ ಅವಕಾಶ ಕೊಡಿ – ಜೈಲು ಮಹಾ ನಿರ್ದೇಶಕರಿಗೆ ಪತ್ರ ಬರೆದ ದರ್ಶನ್..! –