Download Our App

Follow us

Home » ಮೆಟ್ರೋ » ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಶಾಕ್​ – ಶುದ್ಧ ನೀರಿನ ಘಟಕಗಳಲ್ಲಿ 20 ಲೀಟರ್‌ ನೀರಿನ ದರ 10ಕ್ಕೆ ಏರಿಕೆ..!

ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಶಾಕ್​ – ಶುದ್ಧ ನೀರಿನ ಘಟಕಗಳಲ್ಲಿ 20 ಲೀಟರ್‌ ನೀರಿನ ದರ 10ಕ್ಕೆ ಏರಿಕೆ..!

ಬೆಂಗಳೂರು : ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕೇವಲ 5 ರೂಪಾಯಿಗೆ 20 ಲೀಟರ್‌ ಶುದ್ಧ ಕುಡಿಯುವ ನೀರು ಒದಗಿಸುವ ಮೂಲಕ ಜೀವನಾಡಿಯಂತಿದ್ದ ಶುದ್ಧ ನೀರಿನ ಘಟಕಗಳೀಗ ದುಬಾರಿಯಾಗಿವೆ.

ನಗರದಲ್ಲಿ 1052 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಕುಡಿಯುವ ನೀರಿಗಾಗಿ ಘಟಕಗಳನ್ನು ಅವಲಂಬಿಸಿರುವ ಜನರು ನಿತ್ಯವೂ 5 ರೂ. ನಾಣ್ಯ ಬಳಸಿ 20 ಲೀಟರ್‌ ನೀರು ಪಡೆಯುತ್ತಿದ್ದರು. ಆದರೆ, ವಿದ್ಯುತ್‌ ಬಿಲ್‌ ಮತ್ತು ಘಟಕದ ನಿರ್ವಹಣಾ ವೆಚ್ಚ ಹೆಚ್ಚಾಗಿದೆ ಎಂಬ ಕಾರಣ ನೀಡಿ ಆರ್‌ಒ ಘಟಕಗಳ ನಿರ್ವಹಣೆ ಮಾಡುವ ಹಲವು ಏಜೆನ್ಸಿಗಳು ದರವನ್ನು 5 ರಿಂದ 10 ರೂ.ಗೆ ಏರಿಕೆ ಮಾಡಿದ್ದಾರೆ. ಇದರಿಂದಾಗಿ 5 ರೂ.ನ ಎರಡು ನಾಣ್ಯಗಳನ್ನು ಬಳಸಿ 20 ಲೀಟರ್‌ ನೀರು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ 1052 ಶುದ್ಧ ಕುಡಿಯುವ ನೀರಿನ ಘಟಗಳಲ್ಲೂ ದರ ಏರಿಕೆ ಮಾಡಲಾಗಿದೆ. ರಸ್ತೆ ಬದಿಯಲ್ಲಿ ಫಾಸ್ಟ್‌ ಫುಡ್‌, ಚಾಟ್ಸ್‌ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು, ಪಿಜಿಗಳ ನಿರ್ವಹಣೆ ಮಾಡುವವರು, ಮನೆಯಲ್ಲಿ ನೀರು ಶುದ್ಧೀಕರಿಸಲು ಸಾಧ್ಯವಾಗದ ಅನೇಕರು ಕುಡಿಯಲು ಆರ್‌ಒ ಪ್ಲಾಂಟ್‌ಗಳ ನೀರನ್ನೇ ಅವಲಂಬಿಸಿದ್ದಾರೆ.

ಹೀಗಿರುವಾಗ ಯಾವುದೇ ಸೂಚನೆ ನೀಡದೇ ಏರಿಕೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ದರ ಏರಿಕೆಯಿಂದ ಜನಸಾಮಾನ್ಯರ ಜೀವನಾಡಿಯಂತಿದ್ದ ಶುದ್ಧ ನೀರಿನ ಘಟಕಗಳು ಜನತೆಗೆ ದುಬಾರಿಯಾದಂತಾಗಿದೆ.

ಇದನ್ನೂ ಓದಿ : ಚಿತ್ರದುರ್ಗದ ಇಬ್ಬರು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾ ರೇಡ್​..!

 

 

Leave a Comment

DG Ad

RELATED LATEST NEWS

Top Headlines

ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಪ್ರಕರಣ – AE ವಿನಯ್​​ ಅಮಾನತು ಮಾಡಿ BBMP ಕಮಿಷನರ್​​ ಆದೇಶ..!

ಬೆಂಗಳೂರು : ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಕೇಸ್​​ನಲ್ಲಿ ಮೊದಲ ತಲೆದಂಡವಾಗಿದೆ. ಹೊರಮಾವು ವಿಭಾಗ ಸಹಾಯಕ ಕಾರ್ಯ ನಿರ್ವಹಕ ಕೆ.ವಿನಯ್ ಅಮಾನತು ಮಾಡಿ BBMP ಕಮಿಷನರ್​​ ಆದೇಶ ಹೊರಡಿಸಿದ್ದಾರೆ.

Live Cricket

Add Your Heading Text Here