Download Our App

Follow us

Home » ಸಿನಿಮಾ » ಮಧ್ಯರಾತ್ರಿ 2 ಗಂಟೆ ಆದ್ರೂ ಬಾಗಿಲು ಬಡಿಯುತ್ತಿದ್ದರು – ಕಾಸ್ಟಿಂಗ್ ಕೌಚ್‌ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ಹಿರಿಯ ನಟಿ ಅನ್ನಪೂರ್ಣಮ್ಮ..!

ಮಧ್ಯರಾತ್ರಿ 2 ಗಂಟೆ ಆದ್ರೂ ಬಾಗಿಲು ಬಡಿಯುತ್ತಿದ್ದರು – ಕಾಸ್ಟಿಂಗ್ ಕೌಚ್‌ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ಹಿರಿಯ ನಟಿ ಅನ್ನಪೂರ್ಣಮ್ಮ..!

ತೆಲುಗು ಸಿನಿಮಾರಂಗದಲ್ಲಿ ಹಿರಿಯ ನಟಿ ಅನ್ನಪೂರ್ಣಮ್ಮ ಸಿಕ್ಕಾಪಟ್ಟೆ ಫೇಮಸ್. ತನ್ನ 25ನೇ ವಯಸ್ಸಿನಲ್ಲೇ ಅಮ್ಮನ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ನಟಿ ಸುಮಾರು 700ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ನಟಿಯ ವಯಸ್ಸು 80 ದಾಟಿದ್ದರು, ಈಗಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಅಜ್ಜಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಹೌದು, ಟಾಲಿವುಡ್‌ನಲ್ಲಿ ಅನ್ನಪೂರ್ಣಮ್ಮ ಅವರನ್ನು ಗ್ಲಾಮರ್‌ ಅಜ್ಜಿ ಎಂದು ಕರೆಯುತ್ತಾರೆ ಏಕೆಂದರೆ ಸುಮಾರು ಮೂರು ತಲೆಮಾರಿನ ನಾಯಕ-ನಾಯಕಿಯರ ಜೊತೆ ಅನ್ನಪೂರ್ಣಮ್ಮ ಅಭಿನಯಿಸಿದ್ದಾರೆ. ಹಾಗೇ ಇಂದಿನ ಪೀಳಿಗೆಯ ಸ್ಟಾರ್‌ಗಳಿಗೆ ಅಜ್ಜಿಯಾಗಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ಸಿನಿಮಾಗಳಲ್ಲಿ ನಟಿಸುತ್ತಿಲ್ಲವಾದೂ ಕಿರುತೆರೆಯಲ್ಲಿ ಆಕ್ಟಿವ್ ಆಗಿರುವ ಹಿರಿಯ ನಟಿ, ಕೆಲವು ದಿನಗಳ ಹಿಂದೆ ನೀಡಿರುವ ಸಂದರ್ಶನಲ್ಲಿ ತಮ್ಮ ವೈಯಕ್ತಿಕ ವೃತ್ತಿಜೀವನ, ಉದ್ಯಮದಲ್ಲಿ ಎದುರಿಸಿದ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮೊದಲ ಸಲ ಕಾಸ್ಟಿಂಗ್ ಕೌಚ್‌ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಹಿರಿಯ ನಟಿ ಅನ್ನಪೂರ್ಣಮ್ಮ ಅವರು,  ಅವಕಾಶ ಸಿಕ್ಕರೆ ಏನು ಮಾಡೋಣ ಎಂದು ಕೇಳುತ್ತಿದ್ದರು. ಅದಕ್ಕಾಗಿಯೇ 20ನೇ ವಯಸ್ಸಿನಲ್ಲಿ ಮದುವೆಯಾಗಿ, 25ನೇ ವಯಸ್ಸಿನಲ್ಲಿ ತಾಯಿ ಪಾತ್ರ ಮಾಡಲು ಶುರು ಮಾಡಿದೆ ಎಂದು ಕೇಳಿದ್ದಾರೆ.

ಸಿನಿಮಾ ಶೂಟಿಂಗ್‌ ಎಲ್ಲೋ ನಡೆಯುತ್ತದೆ ಎಲ್ಲೋ ಹೋಗಿ ಎಲ್ಲೋ ಉಳಿದುಕೊಳ್ಳಬೇಕಾಗುತ್ತದೆ. ಆಗ ಮಧ್ಯರಾತ್ರಿ 2 ಗಂಟೆಯಾದರೂ ನಮ್ಮ ರೂಮಿನ ಬಾಗಿಲು ಬಡಿಯುತ್ತಿದ್ದರು,ಯಾವಾಗ ಎಲ್ಲಾ ಕಡೆ ಏಡ್ಸ್‌ ಕಾಯಿಲೆ ಶುರುವಾಯ್ತು ಆಗ ಭಯದಿಂದ ಇಂಡಸ್ಟ್ರಿಯಲ್ಲಿ ಇಂತಹ ಘಟನೆಗಳು ಕಡಿಮೆಯಾದವು ಎಂದೂ ಎಂದು ಅನ್ನಪೂರ್ಣಮ್ಮ ಹೇಳಿದ್ದಾರೆ.

ಇದನ್ನೂ ಓದಿ : ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ – ಮತ್ತೊಂದು ಹೋರಾಟಕ್ಕೆ ಸಜ್ಜಾದ ಕರವೇ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here